Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 22:8 - ಕನ್ನಡ ಸತ್ಯವೇದವು J.V. (BSI)

8 ಈ ರಾತ್ರಿ ನೀವು ಇಲ್ಲೇ ಇಳಿದುಕೊಂಡಿರ್ರಿ; ಯೆಹೋವನು ನನಗೆ ಹೇಳುವ ಮಾತನ್ನು ಬೆಳಿಗ್ಗೆ ತಿಳಿಸುವೆನು ಎಂದು ಹೇಳಲಾಗಿ ಮೋವಾಬ್ಯರ ಪ್ರಧಾನರು ಬಿಳಾಮನ ಬಳಿಯಲ್ಲಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಬಿಳಾಮನು ಅವರಿಗೆ, “ಈ ರಾತ್ರಿ ನೀವು ಇಲ್ಲಿಯೇ ಇಳಿದುಕೊಂಡಿರಿ. ಯೆಹೋವನು ನನಗೆ ಹೇಳುವ ಮಾತುಗಳನ್ನು ನಿಮಗೆ ತಿಳಿಸುವೆನು” ಎಂದು ಹೇಳಿದನು. ಆಗ ಆ ರಾತ್ರಿ ಮೋವಾಬ್ಯರ ಪ್ರಧಾನರು ಬಿಳಾಮನ ಬಳಿಯಲ್ಲಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆಗ ಬಿಳಾಮನು, “ಈ ರಾತ್ರಿ ನೀವು ಇಲ್ಲೇ ತಂಗಿರಿ. ಸರ್ವೇಶ್ವರ ನನಗೆ ಕೊಡುವ ಉತ್ತರವನ್ನು ಬೆಳಿಗ್ಗೆ ತಿಳಿಸುವೆನು,” ಎಂದನು. ಅಂತೆಯೇ, ಮೋವಾಬ್ಯರ ಮುಖಂಡರು ಬಿಳಾಮನ ಬಳಿಯಲ್ಲಿ ಉಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಬಿಳಾಮನು, “ಈ ರಾತ್ರಿ ನೀವು ಇಲ್ಲೇ ಇಳಿದುಕೊಳ್ಳಿರಿ. ಯೆಹೋವನು ನನಗೆ ಹೇಳುವ ಮಾತನ್ನು ಬೆಳಿಗ್ಗೆ ನಿಮಗೆ ತಿಳಿಸುವೆನು” ಎಂದು ಹೇಳಿದನು. ಆದ್ದರಿಂದ ಮೋವಾಬ್ಯರ ಹಿರಿಯರು ಆ ರಾತ್ರಿ ಬಿಳಾಮನ ಮನೆಯಲ್ಲಿ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವನು ಅವರಿಗೆ, “ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ. ಯೆಹೋವ ದೇವರು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು,” ಎಂದು ಹೇಳಿದನು. ಆದಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 22:8
13 ತಿಳಿವುಗಳ ಹೋಲಿಕೆ  

[ಪ್ರಶ್ನೆ ಕೇಳುವದಕ್ಕೆ] ಬರುವ ಜನರಂತೆ ಅವರು ನಿನ್ನ ಬಳಿಗೆ ಬಂದು ನನ್ನ ಭಕ್ತರಾಗಿ ನಿನ್ನ ಮುಂದೆ ಕೂತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೇನೋ ತಾವು ದೋಚಿಕೊಂಡದರ ಮೇಲೆ ಹೋಗುತ್ತದೆ.


ನೀನು ಅವರನ್ನು ನಾಟಿದ್ದೀ, ಅವರು ಬೇರೂರಿ ಬೆಳೆದು ಹಣ್ಣುಬಿಟ್ಟಿದ್ದಾರೆ; ನೀನು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.


ಅದಕ್ಕೆ ಬಿಳಾಮನು - ಯೆಹೋವನು ನುಡಿಸುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ ಅಂದನು.


ಅವರು ಬಂದಾಗ ಆತನು - ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಕಾಣಿಸಿಕೊಳ್ಳುವೆನು, ಇಲ್ಲವೆ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು.


ಮೋವಾಬ್ಯರ ಹಿರಿಯರೂ ವಿುದ್ಯಾನ್ಯರ ಹಿರಿಯರೂ ಶಕುನದ ಕಾಣಿಕೆಯನ್ನು ಕೈಯಲ್ಲಿ ತೆಗೆದುಕೊಂಡು ಬಿಳಾಮನ ಹತ್ತಿರಕ್ಕೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದಾಗ ಅವನು -


ದೇವರು ಬಿಳಾಮನ ಬಳಿಗೆ ಬಂದು - ನಿನ್ನ ಬಳಿಯಲ್ಲಿರುವ ಆ ಮನುಷ್ಯರು ಯಾರೆಂದು ಕೇಳಲು ಬಿಳಾಮನು -


ಅದಕ್ಕೆ ಬಿಳಾಮನು - ಬಾಲಾಕನು ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾದ ಯೆಹೋವನ ಆಜ್ಞೆಯನ್ನು ಮೀರಿ ಸಣ್ಣ ಕೆಲಸವನ್ನಾಗಲಿ, ದೊಡ್ಡ ಕೆಲಸವನ್ನಾಗಲಿ ಮಾಡಲಾರೆನು.


ಬಿಳಾಮನು - ಅದಿರಲಿ; ನಾನು ಬಂದಿದ್ದೇನೆ; ಆದರೆ ಏನು? ಏನಾದರೂ ಹೇಳುವದಕ್ಕೆ ನನಗೆ ಶಕ್ತಿಯುಂಟೋ? ದೇವರು ಆಡಿಸುವ ಮಾತನ್ನೇ ಹೇಳುತ್ತೇನಷ್ಟೆ ಎಂದು ಹೇಳಿದನು.


ಬಿಳಾಮನು ಬಾಲಾಕನಿಗೆ - ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು; ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ; ಒಂದು ವೇಳೆ ಯೆಹೋವನು ನನಗೆ ದರ್ಶನ ಕೊಟ್ಟಾನು; ಆತನು ನನಗೆ ಸೂಚಿಸುವ ಸಂಗತಿಯನ್ನು ನಿನಗೆ ತಿಳಿಸುವೆನು ಎಂದು ಹೇಳಿ ಮರವಿಲ್ಲದ ಒಂದು ದಿನ್ನೆಗೆ ಹೋದನು.


ದೇವರ ಮನುಷ್ಯನು ಅರಸನಿಗೆ - ನೀನು ನನಗೆ ನಿನ್ನ ಆಸ್ತಿಯಲ್ಲಿ ಅರ್ಧವನ್ನು ಕೊಟ್ಟರೂ ನಾನು ನಿನ್ನ ಸಂಗಡ ಬರುವದಿಲ್ಲ; ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲ.


ಅದಕ್ಕೆ ಮೀಕಾಯೆಹುವು - ಯೆಹೋವನಾಣೆ, ಯೆಹೋವನು ಹೇಳುವದನ್ನೇ ನುಡಿಯುತ್ತೇನೆ ಎಂದು ಉತ್ತರಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು