ಅರಣ್ಯಕಾಂಡ 22:6 - ಕನ್ನಡ ಸತ್ಯವೇದವು J.V. (BSI)6 ಆದದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು; ಆಗ ಅವರನ್ನು ಸೋಲಿಸಿ ಈ ದೇಶದಿಂದ ಹೊರಡಿಸಿಬಿಡುವದಕ್ಕೆ ನನ್ನಿಂದಾದೀತು. ನಿನ್ನ ಆಶೀರ್ವಾದದಿಂದ ಶುಭವೂ ನಿನ್ನ ಶಾಪದಿಂದ ಅಶುಭವೂ ಉಂಟಾಗುತ್ತದೆ ಎಂಬದನ್ನು ನಾನು ಬಲ್ಲೆ ಎಂದು ಹೇಳಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಆದುದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನರಿಗೆ ಶಾಪಕೊಡಬೇಕು. ಆಗ ಅವರನ್ನು ಸೋಲಿಸಿ ಈ ದೇಶದಿಂದ ಹೊರಡಿಸಿಬಿಡುವುದಕ್ಕೆ ನನ್ನಿಂದ ಆಗುವುದು. ನಿನ್ನ ಆಶೀರ್ವಾದದಿಂದ ಶುಭವೂ, ನಿನ್ನ ಶಾಪದಿಂದ ಅಶುಭವೂ ಉಂಟಾಗುತ್ತದೆ ಎಂಬುದನ್ನು ನಾನು ಬಲ್ಲೆನು” ಎಂದು ಕಳುಹಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಆದುದರಿಂದ ತಾವು ದಯಮಾಡಿ ಬಂದು ಈ ಜನಕ್ಕೆ ಶಾಪಹಾಕಿ ನಮಗೆ ನೆರವಾಗಬೇಕು. ಆಗ ಇವರನ್ನು ಸೋಲಿಸಿ ಈ ನಾಡಿನಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ತಮ್ಮ ಆಶೀರ್ವಾದದಿಂದ ಶುಭ, ತಮ್ಮ ಶಾಪದಿಂದ ಅಶುಭವುಂಟಾಗುತ್ತದೆ ಎಂದು ನಾನು ಬಲ್ಲೆ,” ಎಂದು ಹೇಳಿಕಳಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಆದ್ದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು, ಯಾಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. ನೀನು ಶಪಿಸಿದರೆ ಆಗ ನಾನು ಅವರನ್ನು ಸೋಲಿಸಿ ಈ ದೇಶದಿಂದ ಓಡಿಸಲು ನನಗೆ ಸಾಧ್ಯವಾಗುವುದು. ನೀನು ಯಾವನನ್ನು ಆಶೀರ್ವದಿಸುವಿಯೋ ಅವನು ಯಶಸ್ವಿಯಾಗುವನೆಂದೂ ನೀನು ಯಾವನನ್ನು ಶಪಿಸುವೆಯೋ ಅವನಿಗೆ ಸೋಲಾಗುವುದೆಂದೂ ನನಗೆ ಗೊತ್ತಿದೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 ಅವರು ನನಗಿಂತ ಬಲವುಳ್ಳವರಾಗಿದ್ದರಿಂದ ಈಗ ನೀನು ದಯಮಾಡಿ ಬಂದು, ಈ ಜನರನ್ನು ನನಗಾಗಿ ಶಪಿಸು. ಆಗ ನಾನು ಅವರನ್ನು ಗೆದ್ದು, ದೇಶದೊಳಗಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ಏಕೆಂದರೆ ನೀನು ಯಾವನನ್ನು ಆಶೀರ್ವದಿಸುತ್ತೀಯೋ, ಅವನು ಆಶೀರ್ವಾದ ಹೊಂದಿರುವನು; ನೀನು ಯಾವನನ್ನು ಶಪಿಸುತ್ತೀಯೋ, ಅವನು ಶಾಪಗ್ರಸ್ತನಾಗಿರುವನು; ಎಂದು ನಾನು ಬಲ್ಲೆನು,” ಎಂದು ಹೇಳಿ ಕಳುಹಿಸಿದನು. ಅಧ್ಯಾಯವನ್ನು ನೋಡಿ |