ಅರಣ್ಯಕಾಂಡ 22:3 - ಕನ್ನಡ ಸತ್ಯವೇದವು J.V. (BSI)3 ಇಸ್ರಾಯೇಲ್ಯರು ಬಹು ಮಂದಿಯಾದದರಿಂದ ಮೋವಾಬ್ಯರು ಬಲು ದಿಗಿಲುಪಟ್ಟರು. ಅವರು ಇಸ್ರಾಯೇಲ್ಯರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾಗಿ ವಿುದ್ಯಾನ್ಯರ ಹಿರಿಯರಿಗೆ - ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಇಸ್ರಾಯೇಲರು ಬಹಳ ಜನವಾಗಿರುವುದರಿಂದ ಮೋವಾಬ್ಯರು ಬಹಳ ಭಯಪಟ್ಟು ಹೆದರಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇಸ್ರಯೇಲರು ಬಹುಮಂದಿ ಇದ್ದುದರಿಂದ ಮೋವಾಬ್ಯರು ಬಹಳವಾಗಿ ದಿಗಿಲುಪಟ್ಟರು; ಇಸ್ರಯೇಲರ ವಿಷಯದಲ್ಲಿ ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಮೋವಾಬ್ಯರು ನಿಜವಾಗಿಯೂ ಬಹಳ ಭಯಗೊಂಡಿದ್ದರು. ಯಾಕೆಂದರೆ ಇಸ್ರೇಲರು ಬಹುಸಂಖ್ಯಾತರಾಗಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಇದಲ್ಲದೆ ಮೋವಾಬಿನವರು, ಇಸ್ರಾಯೇಲರು ಬಹಳ ಜನರಾಗಿರುವುದರಿಂದ ಅವರಿಗೆ ಬಹಳವಾಗಿ ಅಂಜಿದರು. ಮೋವಾಬಿನವರು ಇಸ್ರಾಯೇಲರಿಗೆ ದಿಗಿಲುಪಟ್ಟರು. ಅಧ್ಯಾಯವನ್ನು ನೋಡಿ |