Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅರಣ್ಯಕಾಂಡ 16:19 - ಕನ್ನಡ ಸತ್ಯವೇದವು J.V. (BSI)

19 ಅದಲ್ಲದೆ ಕೋರಹನು ತಮಗೆ ಎದುರಾಗಿ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಹೊಳೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅದಲ್ಲದೆ ಕೋರಹನು ತಮಗೆ ಎದುರಾದ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಕಾಣಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಬಳಿಕ ಕೋರಹನು ಸಮುದಾಯದವರೆಲ್ಲರನ್ನು ತಮಗೆದುರಾಗಿ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿದನು. ಆಗ ಸರ್ವೇಶ್ವರನ ತೇಜಸ್ಸು ಸಮುದಾಯದವರೆಲ್ಲರಿಗೆ ಹೊಳೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಕೋರಹನು ತಮಗೆ ಎದುರಾಗಿ ಸರ್ವಸಮೂಹದವರನ್ನು ದೇವದರ್ಶನಗುಡಾರದ ಪ್ರವೇಶದ್ವಾರದ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ಮಹಿಮೆ ಸಮೂಹದವರೆಲ್ಲರಿಗೂ ಪ್ರತ್ಯಕ್ಷವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಕೋರಹನು ಅವರಿಗೆ ಎದುರಾಗಿ ಸಮಸ್ತ ಸಮೂಹವನ್ನು ದೇವದರ್ಶನ ಗುಡಾರದ ಬಾಗಿಲಿನ ಹತ್ತಿರ ಕೂಡಿಸಿದನು. ಆಗ ಯೆಹೋವ ದೇವರ ಮಹಿಮೆಯು ಸಮಸ್ತ ಸಮೂಹಕ್ಕೆ ತೋರಿಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅರಣ್ಯಕಾಂಡ 16:19
12 ತಿಳಿವುಗಳ ಹೋಲಿಕೆ  

ಸಮೂಹದವರೆಲ್ಲರೂ ಹೀಗೆ ಮೋಶೆ ಆರೋನರಿಗೆ ವಿರೋಧವಾಗಿ ಕೂಡಿದ್ದಾಗ ದೇವದರ್ಶನದ ಗುಡಾರದ ಕಡೆಗೆ ನೋಡಲಾಗಿ ಆಹಾ, ಮೇಘವು ಅದನ್ನು ಮುಚ್ಚಿಕೊಂಡಿತು, ಮತ್ತು ಯೆಹೋವನ ತೇಜಸ್ಸು ಹೊಳೆಯಿತು.


ಆದರೆ ಜನಸಮೂಹದವರೆಲ್ಲರೂ [ಕೇಳಲೊಲ್ಲದೆ] ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರಲಾಗಿ ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಹೊಳೆದು ಇಸ್ರಾಯೇಲ್ಯರೆಲ್ಲರಿಗೂ ಕಾಣಿಸಿತು.


ತರುವಾಯ ಮೋಶೆಯೂ ಆರೋನನೂ ದೇವದರ್ಶನದ ಗುಡಾರದೊಳಗೆ ಹೋದರು. ಅವರು ಅಲ್ಲಿಂದ ಹೊರಗೆ ಬಂದಾಗ ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು.


ಹೊತ್ತಾರೆಯಲ್ಲಿಯೂ ಆತನ ಮಹಿಮೆಯು ನಿಮಗೆ ಕಾಣಬರುವದು. ನೀವು ಯೆಹೋವನ ಮೇಲೆ ಗುಣುಗುಟ್ಟುವ ಮಾತುಗಳು ಆತನಿಗೆ ಕೇಳಿಸಿದವು; ನಮ್ಮ ಮೇಲೆ ನೀವು ಗುಣುಗುಟ್ಟುವದೇನು? ನಾವು ಎಷ್ಟು ಮಾತ್ರದವರು ಎಂದು ಹೇಳಿದರು.


ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನದ ಗುಡಾರದ ಬಾಗಲಿಗೆ ಹೋಗಿ ಅಡ್ಡಬೀಳಲಾಗಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.


ಆ ಮೂವರು ಬಂದಾಗ ಯೆಹೋವನು ಮೇಘಸ್ತಂಭದೊಳಗೆ ಇಳಿದು ಬಂದು ದೇವದರ್ಶನದ ಗುಡಾರದ ಬಾಗಲಲ್ಲಿ ನಿಂತು ಆರೋನ್ ವಿುರ್ಯಾಮರನ್ನು ಹತ್ತಿರಕ್ಕೆ ಕರೆದನು.


ನೀವು ಮಾಡಬೇಕೆಂದು ಯೆಹೋವನು ಆಜ್ಞಾಪಿಸಿದ್ದು ಇದೇ; ಅದರಂತೆ ನಡೆದರೆ ಯೆಹೋವನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವದು ಎಂದು ಹೇಳಿದನು.


ಆರೋನನು ಇಸ್ರಾಯೇಲ್ಯರ ಸಮೂಹಕ್ಕೆಲ್ಲಾ ಈ ಮಾತುಗಳನ್ನು ತಿಳಿಸುತ್ತಿರುವಾಗ ಅವರು ಅರಣ್ಯದ ಕಡೆಗೆ ನೋಡಲಾಗಿ ಮೇಘದಲ್ಲಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.


ಅದಕ್ಕನುಸಾರವಾಗಿ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಆರೋನರ ಜೊತೆಯಲ್ಲಿ ದೇವದರ್ಶನದ ಗುಡಾರದ ಬಾಗಲಲ್ಲಿ ನಿಂತುಕೊಂಡರು.


ಯೆಹೋವನು ಮೋಶೆ ಆರೋನರಿಗೆ - ನೀವು ಈ ಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ಭಸ್ಮಮಾಡುತ್ತೇನೆ ಎಂದು ಆಜ್ಞಾಪಿಸಲಾಗಿ


ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಆರೋನರಿಗೆ ವಿರೋಧವಾಗಿ ಕೂಡಿಕೊಂಡು ಮೋಶೆಯ ಸಂಗಡ ವಿವಾದಿಸುವವರಾಗಿ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು