ಅರಣ್ಯಕಾಂಡ 15:26 - ಕನ್ನಡ ಸತ್ಯವೇದವು J.V. (BSI)26 ಇಸ್ರಾಯೇಲ್ಯರ ಸರ್ವಸಮೂಹದವರಿಗೂ ಅವರಲ್ಲಿ ಇಳುಕೊಂಡಿರುವ ಅನ್ಯದೇಶದವರಿಗೂ ಕ್ಷಮಾಪಣೆಯಾಗುವದು. ಜನರೆಲ್ಲರೂ ಆ ತಪ್ಪನ್ನು ತಿಳಿಯದೆ ಮಾಡಿದರಲ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಜನರೆಲ್ಲರೂ ಆ ತಪ್ಪನ್ನು ತಿಳಿಯದೆ ಮಾಡಿದ್ದರಿಂದ, ಇಸ್ರಾಯೇಲರ ಸರ್ವಸಮೂಹದವರಿಗೂ, ಅವರಲ್ಲಿ ಇಳಿದುಕೊಂಡಿರುವ ಅನ್ಯದೇಶದವರಿಗೂ ಕ್ಷಮಾಪಣೆಯಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಇಸ್ರಯೇಲರ ಸರ್ವಸಭೆಯವರಿಗೂ ಅವರ ಮಧ್ಯೆ ವಾಸಿಸುವ ವಿದೇಶೀಯರಿಗೂ ಅವರೆಲ್ಲರೂ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಲಭಿಸುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆದ್ದರಿಂದ ಇಡೀ ಇಸ್ರೇಲ್ ಸಮುದಾಯದವರಿಗೆ ಕ್ಷಮಾಪಣೆಯಾಗುವುದು ಮತ್ತು ಅವರ ಮಧ್ಯದಲ್ಲಿ ವಾಸಿಸುವ ಪರದೇಶಸ್ಥರಿಗೂ ಕ್ಷಮಾಪಣೆಯಾಗುವುದು; ಯಾಕೆಂದರೆ ಜನರೆಲ್ಲರೂ ನಿರುದ್ದೇಶದಿಂದ ಮಾಡಿದ ಆ ತಪ್ಪಿನಲ್ಲಿ ಸಿಕ್ಕಿಕೊಂಡಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಆಗ ಇಸ್ರಾಯೇಲರ ಸಮಸ್ತ ಸಮೂಹದವರಿಗೂ, ಅವರೊಳಗೆ ಪರಕೀಯನಾಗಿ ಪ್ರವಾಸಿಯಾಗಿರುವವನಿಗೂ ಅದು ಕ್ಷಮಾಪಣೆಯಾಗುವುದು. ಏಕೆಂದರೆ ಎಲ್ಲರೂ ತಿಳುವಳಿಕೆ ಇಲ್ಲದವರಾಗಿದ್ದರು. ಅಧ್ಯಾಯವನ್ನು ನೋಡಿ |