ಅರಣ್ಯಕಾಂಡ 11:33 - ಕನ್ನಡ ಸತ್ಯವೇದವು J.V. (BSI)33 ಆದರೆ ಅವರು ಆ ಮಾಂಸವನ್ನು ಇನ್ನೂ ಆಹಾರಮಾಡಿಕೊಳ್ಳುತ್ತಿರುವಾಗ ಅದು ಮುಗಿದುಹೋಗುವದರೊಳಗಾಗಿಯೇ ಯೆಹೋವನು ಅವರ ಮೇಲೆ ಕೋಪಗೊಂಡು ಬಹಳ ಜನರನ್ನು ಘೋರವ್ಯಾಧಿಯಿಂದ ಸಾಯಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ ಅದನ್ನು ಅಗೆಯುವುದಕ್ಕಿಂತ ಮುಂಚೆ ಜನರ ಮೇಲೆ ಯೆಹೋವನ ಕೂಪವು ಉರಿದದ್ದರಿಂದ ಆತನು ಜನರನ್ನು ಘೋರವ್ಯಾಧಿಯಿಂದ ಸಾಯಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ಅವರು ಆ ಮಾಂಸವನ್ನು ಕಚ್ಚಿ ಅಗಿದು ತಿಂದು ಮುಗಿಸುವುದರೊಳಗೆ ಸರ್ವೇಶ್ವರನ ಕೋಪ ಅವರ ವಿರುದ್ಧ ಉದ್ರೇಕಗೊಂಡಿತು. ಬಹಳಷ್ಟು ಜನ ಘೋರವ್ಯಾಧಿಗೆ ತುತ್ತಾಗಿ ಸತ್ತರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ಜನರು ಮಾಂಸವನ್ನು ಇನ್ನೂ ತಿನ್ನುತ್ತಿರುವಾಗಲೇ ಮತ್ತು ಲಾವಕ್ಕಿಗಳ ಸರಬರಾಜು ನಿಂತುಹೋಗುವುದಕ್ಕಿಂತ ಮೊದಲೇ ಯೆಹೋವನು ಬಹಳವಾಗಿ ಕೋಪಗೊಂಡು ಜನರ ಮಧ್ಯದಲ್ಲಿ ಭಯಂಕರವಾದ ಕಾಯಿಲೆಯನ್ನು ಉಂಟುಮಾಡಿದನು. ಜನರಲ್ಲಿ ಅನೇಕರು ಸತ್ತದ್ದರಿಂದ ಅವರನ್ನು ಅಲ್ಲೇ ಹೂಳಿಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ33 ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ, ಅದನ್ನು ಅಗಿಯುವುದಕ್ಕಿಂತ ಮುಂಚೆ ಯೆಹೋವ ದೇವರು ಜನರನ್ನು ಘೋರ ವ್ಯಾಧಿಯಿಂದ ಸಾಯಿಸಿದನು. ಅಧ್ಯಾಯವನ್ನು ನೋಡಿ |