Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:11 - ಕನ್ನಡ ಸತ್ಯವೇದವು J.V. (BSI)

11 ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆದಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಈಗಾಗಲೇ ಮೂರು ತಿಂಗಳು ಕಳೆದಿದ್ದವು. ಅಲೆಕ್ಸಾಂಡ್ರಿಯಕ್ಕೆ ಸೇರಿದ ‘ಅಶ್ವಿನಿ’ ಎಂಬ ಹಡಗೊಂದು ಚಳಿಗಾಲದ ನಿಮಿತ್ತ ಅಲ್ಲಿ ಲಂಗರುಹಾಕಿತ್ತು. ನಾವು ಅದನ್ನು ಹತ್ತಿ ಪ್ರಯಾಣ ಮುಂದುವರಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ತಿನ್ ಮ್ಹಯಿನೆ ಹೊಲ್ಲ್ಯಾ ಮಾನಾ ಅಲೆಕ್ಸಾಂಡ್ರಿಯಾ ಮನ್ತಲ್ಯಾ ಶಾರಾಕ್ನಾ ಯೆಲ್ಲ್ಯಾ ಎಕ್ ಢೊನಾತ್ ಅಮಿ ಚಡ್ಲಾಂವ್ ಥಂಡೆಚ್ಯಾ ಸಾಟ್ನಿ ತಿ ಢೊನ್ ಮಾಲ್ಟ್ ದ್ವಿಪಾತುಚ್ ಹೊತ್ತಿ ತ್ಯಾ ಢೊನಾಚ್ಯಾ ಫಿಡೆ ಅವ್ಳಿ ಜವ್ಳಿ ಗ್ರಿಕ್ ದೆವತೆಂಚ್ಯಾ ಮುರ್ತಿಯಾಂಚ್ಯೊ ಛಪ್ಪೊ ಹೊತ್ತೊ .

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:11
9 ತಿಳಿವುಗಳ ಹೋಲಿಕೆ  

ಅಲ್ಲಿ ಅಲೆಕ್ಸಾಂದ್ರಿಯದಿಂದ ಬಂದು ಇತಾಲ್ಯದೇಶಕ್ಕೆ ಹೋಗುತ್ತಿದ್ದ ಒಂದು ಹಡಗನ್ನು ಶತಾಧಿಪತಿಯು ಕಂಡು ನಮ್ಮನ್ನು ಅದರ ಮೇಲೆ ಹತ್ತಿಸಿದನು.


ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವದರ ವಿಷಯದಲ್ಲಿ ನಾನು ಹೇಳುವದೇನಂದರೆ - ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ಬಲ್ಲೆವು.


ತಪ್ಪಿಸಿಕೊಂಡ ಅನ್ಯಜನರೇ, ನೆರೆದು ಬನ್ನಿರಿ, ಒಟ್ಟಿಗೆ ಸಮೀಪಿಸಿರಿ! ತಮ್ಮ ಮರದ ಬೊಂಬೆಯನ್ನು ಹೊತ್ತುಕೊಂಡು ರಕ್ಷಿಸಲಾರದ ಆ ದೇವರಿಗೆ ಬಿನ್ನಯಿಸುವವರು ಏನೂ ತಿಳಿಯದವರಾಗಿದ್ದಾರೆ.


ಆದರೆ ಲಿಬೆರ್ತೀನರೆಂಬವರ ಸಮಾಜದವರಲ್ಲಿಯೂ ಕುರೇನ್ಯದವರ ಮತ್ತು ಅಲೆಕ್ಸಾಂದ್ರಿಯದವರ ಸಮಾಜದವರಲ್ಲಿಯೂ ಕಿಲಿಕ್ಯ ಆಸ್ಯ ಸೀಮೆಗಳಿಂದ ಬಂದವರ ಸಮಾಜದವರಲ್ಲಿಯೂ ಕೆಲವರು ಎದ್ದು ಸ್ತೆಫನನ ಸಂಗಡ ತರ್ಕಮಾಡುತ್ತಾ ಇರಲು


ಇದನ್ನು ನೋಡಿ ಆ ಜನರು ಯೆಹೋವನಿಗೆ ಬಹಳ ಭಯಪಟ್ಟು ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು.


ಆಗ ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಟ್ಟು ತಮ್ಮ ಕಷ್ಟವು ಕಡಿಮೆಯಾಗುವ ಹಾಗೆ ಹಡಗಿನ ಸಾಮಾನುಗಳನ್ನು ಸಮುದ್ರಕ್ಕೆ ಬಿಸಾಟುಬಿಟ್ಟರು. ಇಷ್ಟರೊಳಗೆ ಯೋನನು ಹಡಗಿನ ಒಳಭಾಗಕ್ಕೆ ಇಳಿದು ಮಲಗಿಕೊಂಡಿದ್ದನು; ಗಾಢನಿದ್ರೆ ಹತ್ತಿತ್ತು.


ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ಬಾರ್‍‍ಯೇಸು ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.


ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ ನಾವು ಬಿಟ್ಟು ಹೊರಟಾಗ ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು.


ನಾವು ಸುರಕೂಸಿಗೆ ಮುಟ್ಟಿ ಅಲ್ಲಿ ಮೂರು ದಿವಸ ನಿಂತೆವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು