ಅಪೊಸ್ತಲರ ಕೃತ್ಯಗಳು 27:10 - ಕನ್ನಡ ಸತ್ಯವೇದವು J.V. (BSI)10 ಪೌಲನು - ಜನರೇ, ಈ ಪ್ರಯಾಣದಿಂದ ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೂ ಕಷ್ಟವೂ ಬಹು ನಷ್ಟವೂ ಸಂಭವಿಸುವದೆಂದು ನನಗೆ ತೋರುತ್ತದೆ ಎಂದು ಅವರನ್ನು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 “ಜನರೇ, ಈ ಪ್ರಯಾಣದಿಂದ ಸರಕಿಗೂ, ಹಡಗಿಗೆ ಮಾತ್ರವಲ್ಲದೆ, ನಮ್ಮ ಪ್ರಾಣಗಳಿಗೂ ಕಷ್ಟವೂ, ಬಹು ನಷ್ಟವೂ ಸಂಭವಿಸುವುದೆಂದು ನನಗೆ ತೋರುತ್ತಿದೆ” ಎಂದು ಅವರನ್ನು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಆದುದರಿಂದ ಪೌಲನು, “ಮಿತ್ರರೇ, ಇಲ್ಲಿಂದ ಮುಂದಕ್ಕೆ ಪ್ರಯಾಣ ಅಪಾಯಕರವಾಗಿರುವಂತೆ ತೋರುತ್ತದೆ. ಹಡಗು ಮತ್ತು ಅದರಲ್ಲಿರುವ ಸರಕುಸಾಮಗ್ರಿಗಳಿಗೆ ಮಾತ್ರವಲ್ಲ, ನಮ್ಮ ಪ್ರಾಣಕ್ಕೂ ಕಷ್ಟನಷ್ಟ ಸಂಭವಿಸಲಿದೆ,” ಎಂದು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಆದ್ದರಿಂದ ಪೌಲನು ಅವರಿಗೆ, “ಜನರೇ, ಈ ಪ್ರಯಾಣದಲ್ಲಿ ನಮಗೆ ಬಹಳ ತೊಂದರೆಯಿದೆ ಎಂದು ನನಗೆ ತೋರುತ್ತದೆ. ಹಡಗು ಮತ್ತು ಹಡಗಿನಲ್ಲಿರುವ ವಸ್ತುಗಳು ನಾಶವಾಗುತ್ತವೆ. ನಮ್ಮ ಪ್ರಾಣಗಳು ಸಹ ನಷ್ಟವಾಗಬಹುದು!” ಎಂದು ಎಚ್ಚರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 “ಸಹೋದರರೇ, ನಮ್ಮ ಸಮುದ್ರ ಪ್ರಯಾಣವು ಅಪಾಯಕಾರಿಯಾಗಿರುವಂತೆ ತೋರುತ್ತದೆ. ಇದರಿಂದ ನಮ್ಮ ನೌಕೆಗೂ ಸರಕಿಗೂ ಅಷ್ಟೇ ಅಲ್ಲ, ನಮ್ಮ ಪ್ರಾಣಗಳಿಗೂ ದೊಡ್ಡ ಹಾನಿ ಬರುವ ಸಂಭವವಿದೆ,” ಎಂದು ಎಚ್ಚರಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ತಸೆ ಹೊವ್ನ್ ಪಾವ್ಲುನ್ ತೆಂಕಾ, ಅಮ್ಕಾ ಜಾತಾನಾ ಲೈ ತರಾಸ್ ಹೊತಲೆ ರ್‍ಹಾವ್ಕ್ ಫಿರೆ ಢೊನಿಯಾ, ಅನಿ ತ್ಯಾತುರ್ ಹೊತ್ತಿ ಸಾಮಾನಾ ಸಗ್ಳಿ ನಾಸ್ ಹೊವ್ನ್ ಜಾತಾತ್ ಅಮ್ಚಿ ಜಿವಾಬಿ ನಾಸ್ ಹೊತಾತ್ ಮನುನ್ ಸಾಂಗುಕ್ ಹೊಯ್ನಾ! ಮನುನ್ ಹುಶ್ಯಾರ್ಕಿ ದಿಲ್ಯಾನ್. ಅಧ್ಯಾಯವನ್ನು ನೋಡಿ |