Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:2 - ಕನ್ನಡ ಸತ್ಯವೇದವು J.V. (BSI)

2 ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ದೋಷಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ಅಗ್ರಿಪ್ಪ ರಾಜರೇ, ಯೆಹೂದ್ಯರು ನನ್ನ ಮೇಲೆ ಹೊರಿಸಿರುವ ಎಲ್ಲಾ ಆಪಾದನೆಗಳಿಗೆ ಇಂದು ತಮ್ಮ ಮುಂದೆ ಪ್ರತಿವಾದಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೆಂದೇ ಎಣಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ಅಗ್ರಿಪ್ಪ ರಾಜರೇ, ಯೆಹೂದ್ಯರು ಮಾಡಿದ ಎಲ್ಲಾ ಆಪಾದನೆಗಳಿಗೆ ವಿರುದ್ಧವಾಗಿ ಇಂದು ನನ್ನ ಪ್ರತಿವಾದ ಮಾಡಲು ತಮ್ಮ ಎದುರಿನಲ್ಲಿರುವುದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ಅಗ್ರಿಪ್ಪ್ ರಾಜಾ, ಜುದೆವಾಂಚ್ಯಾ ಲೊಕಾನಿ ಮಾಜ್ಯಾ ವರ್‍ತಿ ಘಾಟಲ್ಲ್ಯಾ ಸಗ್ಳ್ಯಾ ಅಪವಾದಾಕ್ನಿ ಮಿಯಾ ಜವಾಬ್ ದಿತಾ, ಆಜ್ ತುಜ್ಯಾ ಇದ್ರಾಕ್ ಇಬೆ ರಾವ್ನ್ ಪ್ರತಿವಾದ್ ಕರುಕ್ ಮಾಕಾ ಅವಕಾಸ್ ಗಾವ್ತಲಿ ಮಾಜಿ ಭಾಗ್ಯ್ ಮನುನ್ ಯೆವಜ್ತಾ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:2
10 ತಿಳಿವುಗಳ ಹೋಲಿಕೆ  

ಅರಸುಗಳ ಮುಂದೆಯೂ ನಿನ್ನ ಕಟ್ಟಳೆಗಳ ವಿಷಯದಲ್ಲಿ ಮಾತಾಡುವೆನು; ನಾಚಿಕೆಪಡುವದಿಲ್ಲ.


ಅವರು ನಿಮ್ಮನ್ನು ಸಭಾಮಂದಿರಗಳ ಅಧ್ಯಕ್ಷರ ಮುಂದಕ್ಕೂ ಅಧಿಕಾರಿಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ಹಿಡುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರಕೊಡಬೇಕು? ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ.


ಆಗ ಅಗ್ರಿಪ್ಪನು ಪೌಲನಿಗೆ - ನೀನು ನಿನ್ನ ಪಕ್ಷದಲ್ಲಿ ಮಾತಾಡಬಹುದು ಅನ್ನಲು ಪೌಲನು ಕೈಯೆತ್ತಿ ಪ್ರತಿವಾದ ಮಾಡಿದ್ದೇನಂದರೆ -


ಯಾಕಂದರೆ ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನದಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.


ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಸೇವಿಸುತ್ತಾ ಆ ವಾಗ್ದಾನದ ಫಲವನ್ನು ಹೊಂದುವದಕ್ಕೆ ನಿರೀಕ್ಷಿಸುತ್ತಾ ಇದ್ದಾರೆ. ರಾಜಾ, ಆ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು ನನ್ನ ಮೇಲೆ ದೋಷಾರೋಪಣೆಮಾಡುತ್ತಾರೆ.


ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು, ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು.


ಆದರೆ ಇವೆಲ್ಲಾ ನಡೆಯುವದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಗಳ ಅಧಿಕಾರಸ್ಥರ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿವಿುತ್ತವಾಗಿ ಅರಸುಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ತೆಗೆದುಕೊಂಡುಹೋಗಿ ಹಿಂಸೆಪಡಿಸುವರು.


ಇವನ ವಿಷಯದಲ್ಲಿ ಮಹಾಸನ್ನಿಧಾನಕ್ಕೆ ಬರೆಯುವದಕ್ಕೆ ನಿಶ್ಚಯವಾದದ್ದೇನೂ ಇಲ್ಲ. ಸೆರೆಯವನ ಮೇಲೆ ಆರೋಪಿಸಿರುವ ದೋಷಗಳನ್ನು ಸೂಚಿಸದೆ ಅವನನ್ನು ಕಳುಹಿಸುವದು ಯುಕ್ತವಲ್ಲವೆಂದು ನನಗೆ ತೋರುತ್ತದೆ.


ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ


ಅಗ್ರಿಪ್ಪರಾಜನು ಈ ಸಂಗತಿಗಳನ್ನು ತಿಳಿದವನು; ಅವನ ಮುಂದೆ ಧೈರ್ಯವಾಗಿ ಮಾತಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮರೆಯಾದದ್ದಲ್ಲವೆಂದು ನಂಬಿದ್ದೇನೆ, ಯಾಕಂದರೆ ಇದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು