Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:15 - ಕನ್ನಡ ಸತ್ಯವೇದವು J.V. (BSI)

15 ನಾನು ಯೆರೂಸಲೇವಿುನಲ್ಲಿದ್ದಾಗ ಯೆಹೂದ್ಯರ ಮಹಾಯಾಜಕರೂ ಸಭೇಹಿರಿಯರೂ ಅವನ ವಿಷಯವಾಗಿ ನನಗೆ ಫಿರ್ಯಾದಿ ಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಾನು ಯೆರೂಸಲೇಮಿನಲ್ಲಿದ್ದಾಗ, ಯೆಹೂದ್ಯರ ಮುಖ್ಯಯಾಜಕರೂ, ಹಿರಿಯರೂ ಅವನ ವಿಷಯವಾಗಿ ನನಗೆ ದೂರುಹೇಳಿ ಅವನಿಗೆ ವಿರುದ್ಧವಾಗಿ ತೀರ್ಪು ಆಗಬೇಕೆಂದು ಬೇಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮುಖ್ಯಯಾಜಕರೂ ಪ್ರಮುಖರೂ ಅವನ ವಿರುದ್ಧ ಆಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಾನು ಯೆರೂಸಲೇಮಿಗೆ ಹೋದಾಗ ಮುಖ್ಯಯಾಜಕರೂ ಹಾಗೂ ಯೆಹೂದ್ಯರ ಹಿರಿಯರೂ ಅವನ ಮೇಲೆ ಆಪಾದನೆಗಳನ್ನು ತಂದು ಅವನಿಗೆ ವಿರೋಧವಾಗಿ ದಂಡನೆ ವಿಧಿಸಬೇಕೆಂದು ಕೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

15 ಮಿಯಾ ಜೆರುಜಲೆಮಾಕ್ ಗೆಲ್ಲ್ಯಾ ತನ್ನಾ ಮೊಟ್ಯಾ ಯಾಜಕಾನಿ, ಅನಿ ಜುದೆವಾಂಚ್ಯಾ ಜಾನ್ತ್ಯಾ ಮುಖಂಡಾನಿ ತೆಕಾ ವಿರೊದ್ ಹೊವ್ನ್ ಸಾಕ್ಷಿ ಸಾಂಗುನ್, ಹೆಕಾ ಮರ್ನ್ನಾಚಿ ಶಿಕ್ಷ್ಯಾ ದಿವ್ಚೆ ಮನುನ್ ಆಶ್ಯಾ ಹೊಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:15
5 ತಿಳಿವುಗಳ ಹೋಲಿಕೆ  

ಐದು ದಿವಸಗಳಾದ ಮೇಲೆ ಮಹಾಯಾಜಕನಾದ ಅನನೀಯನು ಸಭೇಹಿರಿಯರಲ್ಲಿ ಕೆಲವರನ್ನೂ ತೆರ್ತುಲ್ಲನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು ಪೌಲನ ಮೇಲೆ ದೇಶಾಧಿಪತಿಗೆ ಫಿರಿಯಾದಿ ಹೇಳಿದನು.


ಆದರೆ ಅವರು ದೊಡ್ಡ ಕೂಗಾಟ ಮಾಡುತ್ತಾ - ಅವನನ್ನು ಶಿಲುಬೆಗೆ ಹಾಕಿಸಬೇಕೆಂದು ಕೇಳಿಕೊಂಡು ಬಲವಂತ ಮಾಡಿದರು; ಅವರ ಕೂಗಾಟವು ಗೆದ್ದಿತು.


ಅರಸನ ಚಿತ್ತ ಬಂದರೆ ಅವರನ್ನು ಸಂಹರಿಸಬೇಕು ಎಂಬ ರಾಯಸವು ಹೊರಡಲಿ; ಹಾಗೆ ಮಾಡಿದರೆ ನಾನು ರಾಜ ಭಂಡಾರಗಳಿಗೆ ಸೇರಿಸುವದಕ್ಕೋಸ್ಕರ ಹತ್ತು ಸಾವಿರ ತಲಾಂತು ಬೆಳ್ಳಿಯನ್ನು ತೂಕ ಮಾಡಿ ಉದ್ಯೋಗಸ್ಥರ ಕೈಗೆ ಒಪ್ಪಿಸುವೆನು ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು