Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:12 - ಕನ್ನಡ ಸತ್ಯವೇದವು J.V. (BSI)

12 ಅಲ್ಲಿ ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ನಾನು ಯಾರ ಸಂಗಡವಾದರೂ ವಾದಿಸುವದನ್ನು ಇಲ್ಲವೆ ಜನರ ಗುಂಪು ಕೂಡಿಸುವದನ್ನು ಇವರು ಕಾಣಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅಲ್ಲಿ ದೇವಾಲಯದಲ್ಲಾಗಲಿ, ಸಭಾಮಂದಿರಗಳಲ್ಲಾಗಲಿ, ಪಟ್ಟಣದಲ್ಲಾಗಲಿ ನಾನು ಯಾರ ಸಂಗಡಲಾದರೂ ವಾದಿಸುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ದೇವಾಲಯದಲ್ಲಾಗಲಿ, ಪ್ರಾರ್ಥನಾಮಂದಿರದಲ್ಲಾಗಲಿ, ಪಟ್ಟಣದಲ್ಲಾಗಲಿ, ಯಾವ ವಾದವಿವಾದ ನಡೆಸಿದ್ದನ್ನು ಅಥವಾ ಜನರನ್ನು ಪ್ರಚೋದಿಸಿದ್ದನ್ನು ಇವರಾರೂ ಕಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾನು ದೇವಾಲಯದಲ್ಲಾಗಲಿ ಸಭಾಮಂದಿರಗಳಲ್ಲಾಗಲಿ ಪಟ್ಟಣದಲ್ಲಾಗಲಿ ಯಾರೊಂದಿಗಾದರೂ ವಾದ ಮಾಡುತ್ತಿರುವುದನ್ನು, ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ದೇವಾಲಯದಲ್ಲಾಗಲಿ, ಸಭಾಮಂದಿರದಲ್ಲಾಗಲಿ, ಪಟ್ಟಣದ ಯಾವುದೇ ಸ್ಥಳದಲ್ಲಾಗಲಿ ನಾನು ವಾಗ್ವಾದ ಮಾಡುತ್ತಿದ್ದುದ್ದನ್ನು ಅಥವಾ ಜನರ ಗುಂಪನ್ನು ಕೂಡಿಸುವುದನ್ನು ಇವರು ಕಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ಮಿಯಾ ಗುಡಿತ್ ಹೊಂವ್ದಿ, ಸಿನಾಗೊತ್ ಹೊಂವ್ದಿ ಗೊಳಾ ಹೊವ್ನ್ ಯೆತಲ್ಯಾಕ್ಡೆ ಹೊಂವ್ದಿ ನಾ ಹೊಲ್ಯಾರ್ ಶಾರಾತ್ ಜುದೆವಾಂಚ್ಯಾ ವಾಂಗ್ಡಾ ವಾದ್ ಕರ್‍ತಲೆ ನಾ ಮಟ್ಲ್ಯಾರ್ ಲೊಕಾಕ್ನಿ ಗೊಳಾ ಕರಲ್ಲೆ ಹೊಂವ್ದಿ ಹೆನಿ ಬಗುಕ್ನಾತ್,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:12
6 ತಿಳಿವುಗಳ ಹೋಲಿಕೆ  

ಪೌಲನು - ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ ದೇವಾಲಯದ ವಿಷಯದಲ್ಲಾಗಲಿ ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲವೆಂದು ಪ್ರತ್ಯುತ್ತರ ಹೇಳಿದನು.


ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿದನು. ಅವರು ಕೂಡಿದ ಮೇಲೆ ಅವನು ಅವರಿಗೆ - ಸಹೋದರರೇ, ನಾನು ನಮ್ಮ ಜನರಿಗೂ ನಮ್ಮ ಪಿತೃಗಳ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇವಿುನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು.


ನಾನು ಶುದ್ಧಮಾಡಿಕೊಂಡವನಾಗಿ ಅವುಗಳನ್ನು ಒಪ್ಪಿಸುತ್ತಿರುವಲ್ಲಿ ನನ್ನನ್ನು ದೇವಾಲಯದಲ್ಲಿ ಕಂಡರು. ನನ್ನ ಬಳಿಯಲ್ಲಿ ಜನರ ಗುಂಪು ಇರಲಿಲ್ಲ, ಗದ್ದಲವೂ ಇರಲಿಲ್ಲ.


ಈ ಮನುಷ್ಯನು ಪೀಡೆಯಂತಿದ್ದು ಲೋಕದಲ್ಲಿ ಎಲ್ಲೆಲ್ಲಿಯೂ ಇರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೆಂತಲೂ ನಜರೇತಿನವರ ಪಾಷಂಡಮತದಲ್ಲಿ ಪ್ರಮುಖನೆಂತಲೂ ಕಂಡೆವು.


ತರುವಾಯ ಅವರು [ಉಳಿದ] ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವದನ್ನೂ ಕಂಡರು.


ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತಾಡಿದೆನೋ ಅದನ್ನು ಕೇಳಿದವರಲ್ಲಿ ವಿಚಾರಿಸು; ನಾನು ಹೇಳಿದ್ದು ಇವರಿಗೆ ತಿಳಿದಿದೆಯಲ್ಲಾ ಎಂದು ಉತ್ತರಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು