ಅಪೊಸ್ತಲರ ಕೃತ್ಯಗಳು 22:29 - ಕನ್ನಡ ಸತ್ಯವೇದವು J.V. (BSI)29 ಅವನನ್ನು ಹೊಡೆದು ವಿಚಾರಿಸುವದಕ್ಕೆ ಬಂದವರು ಕೂಡಲೆ ಅವನನ್ನು ಬಿಟ್ಟರು. ಅದಲ್ಲದೆ ಅವನನ್ನು ರೋಮಾಪುರದ ಹಕ್ಕುದಾರನೆಂದು ಸಹಸ್ರಾಧಿಪತಿಗೆ ತಿಳಿದುಬಂದಾಗ ತಾನು ಅವನನ್ನು ಕಟ್ಟಿಸಿದ್ದರಿಂದ ಅವನಿಗೂ ಭಯಹಿಡಿಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅವನನ್ನು ಹೊಡೆದು ವಿಚಾರಿಸುವುದಕ್ಕೆ ಬಂದವರು ಕೂಡಲೆ ಅವನನ್ನು ಬಿಟ್ಟುಬಿಟ್ಟರು. ಅದಲ್ಲದೆ ಅವನನ್ನು ರೋಮಾಪುರದ ಹಕ್ಕುದಾರನೆಂದು ಸಹಸ್ರಾಧಿಪತಿಗೆ ತಿಳಿದುಬಂದಾಗ ತಾನು ಅವನನ್ನು ಕಟ್ಟಿಸಿದ್ದರಿಂದ ಅವನಿಗೂ ಭಯಹಿಡಿಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)29 ಪೌಲನನ್ನು ಪ್ರಶ್ನಿಸಲು ಬಂದಿದ್ದವರು ಆ ಕ್ಷಣವೇ ಅವನನ್ನು ಬಿಟ್ಟು ಅಗಲಿದರು. ರೋಮಿನ ಪೌರನೊಬ್ಬನನ್ನು ಬಂಧಿಸಿದುದು ಮನವರಿಕೆಯಾದಾಗ ಸಹಸ್ರಾಧಿಪತಿಗೂ ಭಯವಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಆ ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಪೌಲನನ್ನು ಪ್ರಶ್ನಿಸಲು ಬಂದವರು ತಕ್ಷಣವೇ ಬಿಟ್ಟುಹೋದರು. ಮಾತ್ರವಲ್ಲದೆ ಪೌಲನು ರೋಮ್ ಪೌರನೆಂದು ಗ್ರಹಿಸಿದ ಅವನನ್ನು ಬೇಡಿಗಳಿಂದ ಬಂಧಿಸಿದ್ದರಿಂದ ಸಹಸ್ರಾಧಿಪತಿಯೂ ಭಯಪಟ್ಟನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್29 ಪಾವ್ಲುಕ್ ಪರಸ್ನೆ ಇಚಾರುಕ್ ತಯಾರ್ ಹೊವ್ನ್ ಹೊತ್ತಿ ಲೊಕಾ ತನ್ನಾಚ್ ತೆಚ್ಯಾ ಜಗ್ಗೊಳ್ನಾ ಗೆಲಿ, ಖರೆ ಪಾವ್ಲುಕ್ ತನ್ನಾಚ್ ಭಾಂದುನ್ ಘಾಟಲ್ಲೆ ಹೊತ್ತೆ, ಅನಿ ತೊ ರೊಮಾಚೊ ಮಾನುಸ್ ಹೊಲ್ಲ್ಯಾಕ್ ಸೆನಾಧಿಪತಿಕ್ ಭಿಂಯೆ ಕರುಕ್ ಲಾಗ್ಲೆ. ಅಧ್ಯಾಯವನ್ನು ನೋಡಿ |