ಅಪೊಸ್ತಲರ ಕೃತ್ಯಗಳು 21:26 - ಕನ್ನಡ ಸತ್ಯವೇದವು J.V. (BSI)26 ಆಗ ಪೌಲನು ಆ ಮನುಷ್ಯರನ್ನು ಕರೆದುಕೊಂಡು ಮರುದಿನ ಅವರೊಡನೆ ತನ್ನನ್ನು ಶುದ್ಧಿಮಾಡಿಕೊಂಡು ವ್ರತದ ದಿವಸಗಳು ಮುಗಿದವೆಂದು ತಿಳಿಸುವವನಾಗಿ ದೇವಾಲಯದೊಳಗೆ ಹೋದನು. ಪ್ರತಿಯೊಬ್ಬನಿಗೋಸ್ಕರ ಮಾಡಬೇಕಾದ ಅರ್ಪಣೆಯನ್ನು ಮುಂದೆ ಅರ್ಪಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಆಗ ಪೌಲನು ಮರುದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದ ವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ದೇವಾಲಯದೊಳಗೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಅಂತೆಯೇ ಪೌಲನು ಮಾರನೆಯ ದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ಮಹಾದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್26 ತನ್ನಾ ಪಾವ್ಲುನ್ ತ್ಯಾ ಚಾರ್ ಜನಾಕ್ನಿ ಅಪ್ನಾಂಚ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಗೆಲ್ಯಾನ್, ದುಸ್ರೆ ದಿಸಿ ಪಾವ್ಲುನ್ ಶುದ್ಧಾಚಾರಾಚ್ಯಾ ವ್ರತಾತ್ ಭಾಗ್ ಘೆಟ್ಲ್ಯಾನ್, ಮಾನಾಸರ್ ತೆನಿ ದೆವಾಚ್ಯಾ ಗುಡಿಕ್ ಜಾವ್ನ್ ಶುದ್ದಾಚಾರಾಚಿ ನೆಮಾ ಸಗ್ಳಿ ಸಾರ್‍ತಲೆ ದಿಸಾ ಪರ್ಗಟ್ ಕರ್‍ಲ್ಯಾನ್, ಆಕ್ರಿಚ್ಯಾ ದಿಸಾತ್ನಿ ಹರ್ ಎಕ್ಲೊ ಮಾನುಸ್ ಬಲಿ ದಿತಲ್ಲೆ ಹೊತ್ತೆ. ಅಧ್ಯಾಯವನ್ನು ನೋಡಿ |