Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:24 - ಕನ್ನಡ ಸತ್ಯವೇದವು J.V. (BSI)

24 ನೀನು ಅವರನ್ನು ಕರೆದುಕೊಂಡು ಹೋಗಿ ಅವರೊಡನೆ ನಿನ್ನನ್ನು ಶುದ್ಧಿಮಾಡಿಕೊಂಡು ಅವರು ತಮ್ಮ ವ್ರತವನ್ನು ತೀರಿಸಿಕೊಳ್ಳುವದಕ್ಕಾಗಿ ಅವರಿಗೋಸ್ಕರ ಹಣ ವೆಚ್ಚಮಾಡು. ಹೀಗೆ ಮಾಡಿದರೆ ಎಲ್ಲರೂ ನಿನ್ನ ವಿಷಯವಾಗಿ ತಾವು ಕೇಳಿದ ಸುದ್ದಿ ನಿಜವಲ್ಲವೆಂತಲೂ ನೀನಾದರೂ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತೀ ಎಂತಲೂ ತಿಳುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ನೀನು ಅವರನ್ನು ಕರೆದುಕೊಂಡು ಹೋಗಿ, ಅವರೊಡನೆ ನಿನ್ನನ್ನು ಶುದ್ಧಿಮಾಡಿಕೊಂಡು ಅವರು ತಮ್ಮ ಕ್ಷೌರದ ಶಪಥವನ್ನು ತೀರಿಸಿಕೊಳ್ಳುವುದಕ್ಕಾಗಿ, ಆಗುವ ವೆಚ್ಚವನ್ನು ನೀನು ಕೊಡು. ಹೀಗೆ ಮಾಡಿದರೆ ಎಲ್ಲರೂ ನಿನ್ನ ವಿಷಯವಾಗಿ ತಾವು ಕೇಳಿದ ಸುದ್ದಿ ನಿಜವಲ್ಲವೆಂತಲೂ, ನೀನು ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುತ್ತೀ, ಎಂತಲೂ ತಿಳಿದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ನೀನು ಅವರನ್ನು ಕರೆದುಕೊಂಡು ಹೋಗಿ ಅವರ ಜೊತೆಯಲ್ಲಿ ನೀನೂ ಶುದ್ಧಾಚಾರವಿಧಿಯನ್ನು ಮಾಡಿಸಿಕೊ. ಅವರ ಖರ್ಚುವೆಚ್ಚವನ್ನೆಲ್ಲಾ ನೀನೇ ವಹಿಸಿಕೋ. ಅವರು ಮುಂಡನ ಮಾಡಿಸಿಕೊಳ್ಳಲಿ. ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿಸಿಕೊಂಡಿರುವ ವಿಷಯ ನಿಜವಲ್ಲವೆಂದೂ ನೀನು ಕೂಡ ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯುತ್ತಿರುವೆ ಎಂದೂ ಅವರೆಲ್ಲರಿಗೂ ಮನವರಿಕೆಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನೀನು ಅವರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಶುದ್ಧಾಚಾರದ ಸಂಪ್ರದಾಯದಲ್ಲಿ ಭಾಗವಹಿಸು. ಅವರ ಖರ್ಚುವೆಚ್ಚನ್ನೆಲ್ಲ ಕೊಡು. ಬಳಿಕ ಅವರು ತಮ್ಮ ತಲೆಬೋಳಿಸಿಕೊಳ್ಳಲಿ. ನೀನು ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿದ ಸಂಗತಿಗಳು ಸತ್ಯವಲ್ಲವೆಂದು ಅವರೆಲ್ಲರಿಗೂ ಮನದಟ್ಟಾಗುವುದು. ಸ್ವತಃ ನೀನೇ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗುತ್ತಿರುವುದನ್ನು ಅವರೆಲ್ಲರೂ ಕಣ್ಣಾರೆ ಕಾಣುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ನೀನು ಇವರನ್ನು ಕರೆದುಕೊಂಡು ಹೋಗಿ, ಅವರೊಂದಿಗೆ ನಿನ್ನನ್ನು ಶುದ್ಧಿಮಾಡಿಕೊಂಡು, ಅವರು ತಮ್ಮ ಕ್ಷೌರ ಮಾಡಿಸಿಕೊಳ್ಳುವ ಖರ್ಚನ್ನು ನೀನೇ ಪೂರೈಸು. ಆಗ ನಿನ್ನ ವಿಷಯದಲ್ಲಿ ಕೇಳಿರುವ ಸಂಗತಿಗಳು ನಿಜವಲ್ಲ ಮತ್ತು ನೀನು ಮೋಶೆಯ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತೀ ಎಂದು ಎಲ್ಲರಿಗೂ ತಿಳಿದುಬರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

24 ತಿಯಾ ತೆಂಕಾ ಬಲ್ವುನ್ ಘೆವ್ನ್ ಜಾವ್ನ್ ತೆಂಚ್ಯಾ ವಾಂಗ್ಡಾ ತುಕಾಬಿ ನಿತಳ್ ಕರುನ್ಗೆತ್ ತೆಂಚೆ ಹರಕೆ ಪಾವ್ಸು, ಅಶೆ ಕರ್‍ತಾನಾ ತುಜ್ಯಾ ವಿಶಯಾತ್ ತೆನಿ ಆಯ್ಕಲಿ ಖಬ್ರಿಯಾ ಖರೆ ನ್ಹಯ್ ಮನುನ್, ಅನಿ ತಿಯಾ ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾರ್ಕೆ ಚಲ್ತೈಯ್ ಮನುನ್ ಕಳ್ವುನ್ ಘೆತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:24
20 ತಿಳಿವುಗಳ ಹೋಲಿಕೆ  

ಆಗ ಪೌಲನು ಆ ಮನುಷ್ಯರನ್ನು ಕರೆದುಕೊಂಡು ಮರುದಿನ ಅವರೊಡನೆ ತನ್ನನ್ನು ಶುದ್ಧಿಮಾಡಿಕೊಂಡು ವ್ರತದ ದಿವಸಗಳು ಮುಗಿದವೆಂದು ತಿಳಿಸುವವನಾಗಿ ದೇವಾಲಯದೊಳಗೆ ಹೋದನು. ಪ್ರತಿಯೊಬ್ಬನಿಗೋಸ್ಕರ ಮಾಡಬೇಕಾದ ಅರ್ಪಣೆಯನ್ನು ಮುಂದೆ ಅರ್ಪಿಸಬೇಕಾಗಿತ್ತು.


ನಾನು ಶುದ್ಧಮಾಡಿಕೊಂಡವನಾಗಿ ಅವುಗಳನ್ನು ಒಪ್ಪಿಸುತ್ತಿರುವಲ್ಲಿ ನನ್ನನ್ನು ದೇವಾಲಯದಲ್ಲಿ ಕಂಡರು. ನನ್ನ ಬಳಿಯಲ್ಲಿ ಜನರ ಗುಂಪು ಇರಲಿಲ್ಲ, ಗದ್ದಲವೂ ಇರಲಿಲ್ಲ.


ಪೌಲನು ಇನ್ನು ಅನೇಕ ದಿವಸ ಅಲ್ಲಿದ್ದ ಮೇಲೆ ಸಹೋದರರಿಂದ ಅಪ್ಪಣೆ ತೆಗೆದುಕೊಂಡು ತನಗೆ ದೀಕ್ಷೆ ಇದ್ದದರಿಂದ ಕೆಂಖ್ರೆಯದಲ್ಲಿ ಕ್ಷೌರಮಾಡಿಸಿಕೊಂಡು ಹಡಗನ್ನು ಹತ್ತಿ ಸಿರಿಯಕ್ಕೆ ಹೊರಟನು. ಪ್ರಿಸ್ಕಿಲ್ಲಳೂ ಅಕ್ವಿಲನೂ ಅವನ ಸಂಗಡ ಹೊರಟರು.


ಯೆಹೂದ್ಯರನ್ನು ಸಂಪಾದಿಸಿಕೊಳ್ಳುವದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ನಿಯಮಗಳಿಗೆ ಅಧೀನನಲ್ಲದವನಾದರೂ ನಿಯಮಗಳಿಗೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮಗಳಿಗೆ ಅಧೀನನಂತಾದೆನು.


ಮೋಶೆ ಬೆಟ್ಟದಿಂದಿಳಿದು ಜನರ ಬಳಿಗೆ ಬಂದು ಅವರನ್ನು ಪರಿಶುದ್ಧಗೊಳಿಸಿದನು; ಅವರು ತಮ್ಮ ಬಟ್ಟೆಗಳನ್ನು ಮಡಿಮಾಡಿಕೊಂಡರು.


ಯಾಕಂದರೆ ಯಾಕೋಬನ ಕಡೆಯಿಂದ ಕೆಲವರು ಬರುವದಕ್ಕೆ ಮುಂಚೆ ಅವನು ಅನ್ಯಜನರ ಸಂಗಡ ಊಟಮಾಡುತ್ತಿದ್ದನು; ಅವರು ಬಂದ ಮೇಲೆ ಸುನ್ನತಿಯವರಾದ ಅವರಿಗೆ ಅವನು ಭಯಪಟ್ಟು ಅನ್ಯಜನರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿಕೊಂಡನು.


ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ ಬಹು ಜನರು ತಮ್ಮನ್ನು ಶುದ್ಧಿಮಾಡಿಕೊಳ್ಳುವದಕ್ಕಾಗಿ ಹಬ್ಬಕ್ಕಿಂತ ಮುಂಚೆ ಹಳ್ಳಿಗಳಿಂದ ಯೆರೂಸಲೇವಿುಗೆ ಬಂದರು.


ಹೀಗಿರಲಾಗಿ ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಿಚಾರ ನಡೆಯಿತು.


ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.


ಔತಣ ಸರದಿ ತೀರಿದನಂತರ ಯೋಬನು ತನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪ ಮಾಡಿರಬಹುದು ಎಂದು ಅವರನ್ನು ಕರಿಸಿ ಶುದ್ಧಿಪಡಿಸಿ ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುತ್ತಿದ್ದನು.


ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವದಕ್ಕೆ ಪ್ರಾರಂಭಿಸುವನು ಅಂದನು.


ಆಗ ನಾಜೀರನು ತನ್ನ ದೀಕ್ಷೆಯನ್ನು ಸೂಚಿಸುವ ತಲೆಯಕೂದಲನ್ನು ದೇವದರ್ಶನದ ಗುಡಾರದ ಬಾಗಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು ಆ ಕೂದಲನ್ನು ಸಮಾಧಾನಯಜ್ಞದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು.


ನಾಜೀರನು ತನ್ನ ವ್ರತದಿನಗಳು ಮುಗಿದಾಗ ನಡೆಯಬೇಕಾದ ಕ್ರಮ. ಅವನು ದೇವದರ್ಶನದ ಗುಡಾರದ ಬಾಗಲಿಗೆ ಬಂದು ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆಗಳು ಯಾವವಂದರೆ -


ಯಾವನಾದರೂ ಅಕಸ್ಮಾತ್ತಾಗಿ ಅವನ ಬಳಿಯಲ್ಲೇ ಸತ್ತದರಿಂದ ತಾನು ಪ್ರತಿಷ್ಠಿಸಿಕೊಂಡ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಲ್ಲಿ ಅಂದರೆ ಶುದ್ಧನಾಗುವ ದಿನದಲ್ಲಿ ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕು.


ಅವನು ತನ್ನ ಹರಕೆಯ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವನು ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ತಾನು ಮೀಸಲಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕು.


ಮೋಶೆ ಜನರ ಮಾತುಗಳನ್ನು ಯೆಹೋವನಿಗೆ ಅರಿಕೆಮಾಡಲಾಗಿ ಯೆಹೋವನು ಅವನಿಗೆ ಹೇಳಿದ್ದೇನಂದರೆ - ನೀನು ಜನರ ಬಳಿಗೆ ಹೋಗಿ ಈ ಹೊತ್ತು ನಾಳೆ ಅವರನ್ನು ಪರಿಶುದ್ಧಗೊಳಿಸು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು