ಅಪೊಸ್ತಲರ ಕೃತ್ಯಗಳು 21:21 - ಕನ್ನಡ ಸತ್ಯವೇದವು J.V. (BSI)21 ನೀನು ಅನ್ಯಜನರಲ್ಲಿ ವಾಸವಾಗಿರುವ ಯೆಹೂದ್ಯರೆಲ್ಲರಿಗೆ - ನಿಮ್ಮ ಮಕ್ಕಳಿಗೆ ಸುನ್ನತಿಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಿ ನಡೆಯಬೇಡಿರಿ ಎಂದು ಹೇಳಿ ಮೋಶೆಯ ಧರ್ಮವನ್ನು ತ್ಯಾಗಮಾಡಬೇಕೆಂಬದಾಗಿ ಬೋಧಿಸುತ್ತೀ ಎಂದು ನಿನ್ನ ವಿಷಯದಲ್ಲಿ ಬಹಳವಾಗಿ ಕೇಳಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ನೀನು ಅನ್ಯಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರೆಲ್ಲರಿಗೆ; ‘ನಿಮ್ಮ ಮಕ್ಕಳಿಗೆ ಸುನ್ನತಿಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಿ ನಡೆಯಬೇಡಿರಿ ಎಂದು ಹೇಳಿ, ಮೋಶೆಯ ಧರ್ಮವನ್ನು ತ್ಯಜಿಸಬೇಕೆಂಬುದಾಗಿ ಬೋಧಿಸುತ್ತಿರುವೆ’ ಎಂದು ನಿನ್ನ ಕುರಿತಾಗಿ ಹೇಳಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ನಿನ್ನ ವಿಷಯ ಅವರಿಗೆ ತಿಳಿದುಬಂದಿದೆ. ಅದೇನೆಂದರೆ ನೀನು ಅನ್ಯಧರ್ಮೀಯರ ನಡುವೆ ವಾಸಿಸುತ್ತಿರುವ ಯೆಹೂದ್ಯರೆಲ್ಲರಿಗೆ, ‘ನೀವು ಮೋಶೆಯ ನೇಮನಿಯಮಗಳನ್ನು ಅನುಸರಿಸಬಾರದು, ನಿಮ್ಮ ಮಕ್ಕಳಿಗೆ ಸುನ್ನತಿಯನ್ನು ಮಾಡಿಸಬಾರದು, ಯೆಹೂದ್ಯ ಸಂಪ್ರದಾಯಗಳನ್ನು ಆಚರಿಸಬಾರದು,’ ಎಂದು ಬೋಧಿಸುತ್ತಿರುವಿಯಂತೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಈ ಯೆಹೂದ್ಯರು ನಿನ್ನ ಉಪದೇಶದ ಬಗ್ಗೆ ಕೇಳಿದ್ದಾರೆ. ಬೇರೆ ದೇಶಗಳಲ್ಲಿ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರಿಗೆ, “ನೀವು ಮೋಶೆಯ ಧರ್ಮಶಾಸ್ತ್ರವನ್ನು ತ್ಯಜಿಸಿರಿ; ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಬೇಡಿರಿ ಯೆಹೂದ್ಯರ ಸಂಪ್ರದಾಯಗಳಿಗೆ ವಿಧೇಯರಾಗಬೇಡಿರಿ ಎಂಬುದಾಗಿ ಹೇಳುತ್ತಿರುವಿಯೆಂದು ಅವರು ಕೇಳಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ನೀನು ಯೆಹೂದ್ಯರಲ್ಲದವರ ಮಧ್ಯದಲ್ಲಿ ವಾಸಿಸುತ್ತಿರುವ ಯೆಹೂದ್ಯರಿಗೆ, ‘ನೀವು ಮೋಶೆಯ ನಿಯಮವನ್ನು ಅನುಸರಿಸಬೇಡಿರಿ, ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಬೇಡಿರಿ,’ ಎಂದು ಬೋಧಿಸುವುದಾಗಿ ನಿನ್ನ ವಿಷಯದಲ್ಲಿ ಅವರಿಗೆ ತಿಳಿದು ಬಂದಿದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ಜಿವನ್ ಕರ್‍ತಲ್ಯಾ ಜುದೆವಾಕ್ನಿ ತುಮ್ಚ್ಯಾ ಪೊರಾಕ್ನಿ ಸುನ್ನತ್ ಕರ್ಸುನಕಾಸಿ, ತೆಂಚಿ ಪದ್ದತಿಯಾ ಕರುನಕಾಸಿ ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಮಾನುನಕಾಸಿ ಮನುನ್ ತಿಯಾ ಶಿಕಾಪಾ ಕರುಲೈಯ್ ಮನುನ್ ತುಜ್ಯಾ ವಿಶಯಾತ್ ಸಾಂಗುಲ್ಲಾತ್. ಅಧ್ಯಾಯವನ್ನು ನೋಡಿ |