Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 2:13 - ಕನ್ನಡ ಸತ್ಯವೇದವು J.V. (BSI)

13 ಕೆಲವರು - ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆದರೆ ಬೇರೆ ಕೆಲವರು, “ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು ಹಾಸ್ಯ” ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಕೆಲವರಾದರೋ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದು ಪರಿಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದರೆ, ಅವರಲ್ಲಿ ಕೆಲವರು, ಅವರ ಬಗ್ಗೆ ಹಾಸ್ಯಮಾಡುತ್ತಾ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ಖರೆ ಹುರಲ್ಲ್ಯಾ ಲೊಕಾನಿ ತೆಂಕಾ ಬಗುನ್ “ಹೆನಿ ಲೈ ವಾಯ್ನ್ ಫಿವ್ನ್ ನಿಶೆತ್ ಹಾತ್.” ಮನುನ್ ಸಾಂಗುನ್ ಹಾಸ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 2:13
10 ತಿಳಿವುಗಳ ಹೋಲಿಕೆ  

ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಬಂದಾಗ ಎಲ್ಲರೂ ವಾಣಿಗಳನ್ನಾಡಿದರೆ ಈ ವರವನ್ನು ಹೊಂದದಿರುವ ಸಭೆಯವರು ಅಥವಾ ಕ್ರಿಸ್ತನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ - ನಿಮಗೆ ಹುಚ್ಚು ಹಿಡಿದದೆ ಎಂದು ಹೇಳುವದಿಲ್ಲವೋ?


ನೀವು ಭಾವಿಸಿದಂತೆ ಇವರು ಅಮಲೇರಿದವರಲ್ಲ; ಈಗ ಬೆಳಿಗ್ಗೆ ಒಂಭತ್ತು ಘಂಟೆಯಾಗಿದೆಯಷ್ಟೆ.


ನಿನ್ನ ಅಮಲು ಇನ್ನೂ ಇಳಿಯಲಿಲ್ಲವೋ? ದ್ರಾಕ್ಷಾರಸದ ಮತ್ತು ನಿನ್ನನ್ನು ಬಿಟ್ಟುಹೋಗಲಿ ಅಂದನು.


ಎಫ್ರಾಯೀಮ್ಯರು ಶೂರನಂತಿರುವರು, ದ್ರಾಕ್ಷಾರಸಕುಡಿದಂತೆ ಅವರ ಮನಸ್ಸು ಉತ್ಸಾಹಗೊಳ್ಳುವದು; ಅವರ ಸಂತಾನದವರು ಇದನ್ನು ನೋಡಿ ಸಂತೋಷಪಡುವರು, ಅವರ ಹೃದಯವು ಯೆಹೋವನಲ್ಲಿ ಆನಂದಿಸುವದು.


ಸೇನಾಧೀಶ್ವರ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು [ಶತ್ರುಗಳನ್ನು] ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; [ರಕ್ತವನ್ನು] ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ ಯಜ್ಞವೇದಿಯ ಮೂಲೆಗಳ ಹಾಗೂ ರಕ್ತಪೂರ್ಣರಾಗಿರುವರು.


ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.


ನಿನ್ನ ಮುದ್ದುಗಳು ಉತ್ತಮದ್ರಾಕ್ಷಾರಸದ ಹಾಗಿರಲಿ; ನಿದ್ರಿಸುವವರ ತುಟಿಗಳಲ್ಲಿ ಸರಾಗವಾಗಿ ಹರಿಯುವ ಈ ರಸವು ನನ್ನ ನಲ್ಲೆಯಾದ ನಿನ್ನಲ್ಲಿಯೂ ಮೆಲ್ಲನೆ ಇಳಿದು ಬರುವದು.


ಆಹಾ, ದ್ರಾಕ್ಷಾರಸವನ್ನು ತುಂಬಿ ಬಾಯಿಕಟ್ಟಿದ ಹೊಸ ಬುದ್ದಲಿಗಳಂತೆ ನನ್ನ ಹೊಟ್ಟೆಯು ಒಡೆದುಹೋಗುವ ಹಾಗಿದೆ.


ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ.


ಆಹಾ, ಅವರ ಸೌಖ್ಯವೆಷ್ಟು, ಅವರ ಸೌಂದರ್ಯವೆಷ್ಟು! ಧಾನ್ಯವು ಯುವಕರನ್ನು, ದ್ರಾಕ್ಷಾರಸವು ಯುವತಿಯರನ್ನು ಪುಷ್ಟಿಗೊಳಿಸುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು