Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 19:9 - ಕನ್ನಡ ಸತ್ಯವೇದವು J.V. (BSI)

9 ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಆದರೆ ಅವರಲ್ಲಿ ಕೆಲವರು ಹಠಮಾರಿಗಳು; ಅವರು ವಿಶ್ವಾಸವನ್ನು ನಿರಾಕರಿಸಿದ್ದೂ ಅಲ್ಲದೆ ಈ ಹೊಸಮಾರ್ಗವನ್ನು ಸಭೆಯ ಮುಂದೆ ದೂಷಿಸತೊಡಗಿದರು. ಈ ಕಾರಣ ಪೌಲನು ಅವರನ್ನು ಬಿಟ್ಟು ಶಿಷ್ಯರನ್ನು ಕರೆದುಕೊಂಡು ತುರಾನ್ನ ಎಂಬವನ ತರ್ಕಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸುತ್ತಾ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆದರೆ ಆ ಯೆಹೂದ್ಯರಲ್ಲಿ ಕೆಲವರು ಮೊಂಡರಾದರು. ಅವರು ನಂಬದೆ ದೇವರ ಮಾರ್ಗವನ್ನು ಜನರೆಲ್ಲರ ಎದುರಿನಲ್ಲಿ ದೂಷಿಸಿದರು. ಆದ್ದರಿಂದ ಪೌಲನು ಏಷ್ಯಾ ಪ್ರಾಂತ್ಯದ ಆ ಯೆಹೂದ್ಯರನ್ನೆಲ್ಲ ಬಿಟ್ಟು, ಯೇಸುವಿನ ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ತುರನ್ನನ ಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆದರೆ ಅವರಲ್ಲಿ ಕೆಲವರು ಕಠಿಣ ಹೃದಯದವರಾಗಿ; ಒಡಂಬಡದೆ ಈ ಮಾರ್ಗವನ್ನು ಬಹಿರಂಗವಾಗಿ ದೂಷಿಸಿದರು. ಆದ್ದರಿಂದ ಪೌಲನು ಅವರನ್ನು ಬಿಟ್ಟು, ಶಿಷ್ಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ, ಅನುದಿನವೂ ತುರನ್ನನ ತರ್ಕಶಾಲೆಯಲ್ಲಿ ಅವರೊಂದಿಗೆ ಚರ್ಚಿಸುತ್ತಾ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ತ್ಯಾತುರ್ಲ್ಯಾ ಉಲ್ಲ್ಯಾ ಲೊಕಾನಿ ಅಪ್ಲೊ ಮನ್ ಘಟ್ ಕರುನ್ ಘೆಟ್ಲ್ಯಾನಿ, ಅನಿ ವಿಶ್ವಾಸ್ ಕರುಕ್ ನಾತ್, ಸಗ್ಳ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ಇದ್ರಾಕ್ ತಿರಾನ್ನ್‌ ಮನ್ತಲ್ಯಾಚ್ಯಾ ಸಾಳೆತ್ ಧನಿಯಾಚ್ಯಾ ವಾಟೆಚ್ಯಾ ವಿಶಯಾತ್ ಬುರ್ಶೆ ಬೊಲ್ಲ್ಯಾನಿ, ತಸೆ ಹೊವ್ನ್ ಪಾವ್ಲುನ್ ತೆಂಕಾ ಸೊಡುನ್ ವಿಶ್ವಾಸಿ ಲೊಕಾಕ್ನಿ ಅಪ್ನಾ ವಾಂಗ್ಡಾ ಬಲ್ವುನ್ ನೆಲ್ಯಾನ್, ಅನಿ ಸದ್ದಿ ತೆಂಕಾ ತುರ್ ಮನ್ತಲ್ಯಾ ಶಿಕ್ವುತಲ್ಯಾ ಖೊಲಿಕ್ ಬಲ್ವುನ್ ಘೆವ್ನ್ ಜಾವ್ನ್ ತೆಂಚ್ಯಾ ವಾಂಗ್ಡಾ ಚರ್ಚಾ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 19:9
39 ತಿಳಿವುಗಳ ಹೋಲಿಕೆ  

ಆ ಕಾಲದಲ್ಲಿ ಕ್ರಿಸ್ತ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.


ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇವಿುಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರದವರಿಗೆ ನೀನು ಕಾಗದವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.


ಆದರೆ ಸ್ವಾಭಾವಿಕವಾಗಿ ಬೇಟೆಗೂ ಕೊಲೆಗೂ ಹುಟ್ಟಿರುವ ವಿವೇಕಶೂನ್ಯ ಪಶುಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯವಾಗಿ ದೂಷಣೆ ಹೇಳುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಕೆಟ್ಟುಹೋಗಿ ತಮ್ಮ ದುಷ್ಪ್ರವರ್ತನೆಗೆ ಸರಿಯಾದ ದುಷ್ಫಲವನ್ನು ಹೊಂದುವರು.


ಆಗ ಆ ಊರಿನ ಜನರಲ್ಲಿ ಭೇದವುಂಟಾಯಿತು; ಕೆಲವರು ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು.


ಆದರೆ ಈ ಜನರು ತಮಗೆ ಗೊತ್ತಿಲ್ಲದ ಎಲ್ಲವನ್ನೂ ದೂಷಿಸುತ್ತಾರೆ, ಮತ್ತು ತಾವು ವಿವೇಕಶೂನ್ಯಪಶುಗಳಂತೆ ಸ್ವಾಭಾವಿಕವಾಗಿ ಯಾವವುಗಳನ್ನು ತಿಳಿದುಕೊಳ್ಳುತ್ತಾರೋ ಅವುಗಳಲ್ಲಿ ತಮ್ಮನ್ನು ಕೆಡಿಸಿಕೊಳ್ಳುತ್ತಾರೆ.


ಅವರ ನಿರ್ಲಜ್ಜಾಕೃತ್ಯಗಳನ್ನು ಅನೇಕರು ಅನುಸರಿಸುವರು; ಅವರ ನಿವಿುತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವದು.


ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.


ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು ದೇವ ಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ.


ಇದರಿಂದ ತಿಳಿಯತಕ್ಕದ್ದೇನು? ಇಸ್ರಾಯೇಲ್ಯರು ಹುಡುಕಿದ್ದು ಅವರೆಲ್ಲರಿಗೆ ದೊರೆಯಲಿಲ್ಲ, ಅವರೊಳಗೆ ಆಯಲ್ಪಟ್ಟವರಿಗೆ ದೊರೆಯಿತು. ವಿುಕ್ಕವರು ಮೊಂಡರಾದರು.


ದೇವರು ಯಾರನ್ನು ಕರುಣಿಸಿದರೂ ಯಾರನ್ನು ಕಠಿಣಪಡಿಸಿದರೂ ಅದೆಲ್ಲವು ಆತನ ಇಷ್ಟಾನುಸಾರವಾಗಿಯೇ ಇದೆ ಎಂಬದು ಇದರಿಂದ ತೋರಿಬರುತ್ತದೆ.


ಕ್ರಿಸ್ತ ಮಾರ್ಗದವರನ್ನು ಹಿಂಸಿಸುವವನಾಗಿ ಗಂಡಸರಿಗೂ ಹೆಂಗಸರಿಗೂ ಬೇಡೀಹಾಕಿಸುತ್ತಾ ಅವರನ್ನು ಸೆರೆಮನೆಗಳಿಗೆ ಕೊಡಿಸುತ್ತಾ ಇದ್ದೆನು, ಅವರ ಕೊಲೆಗಾದರೂ ಹಿಂತೆಗೆಯಲಿಲ್ಲ.


ಚಂಡಿಗಳೇ, ಮನಶ್ಶುದ್ಧಿಯೂ ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.


ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು; ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.


ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.


ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬದನ್ನು ನೀನು ಬಲ್ಲೆ; ಅವರಲ್ಲಿ ಫುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.


ಆದರೆ ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವದು ನಮಗೆ ಯುಕ್ತವೆಂದು ತೋರುತ್ತದೆ. ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ ಅಂದರು.


ನಾನು ಇವರ ನಡುವೆ ನಿಂತು - ಪುನರುತ್ಥಾನದ ವಿಷಯದಲ್ಲಿ ಈಹೊತ್ತು ನಿಮ್ಮಿಂದ ನನಗೆ ವಿಚಾರಣೆಯಾಗುತ್ತದೆ ಎಂದು ಕೂಗಿದ್ದನ್ನೇ ಹೊರತು ಬೇರೆ ಏನೂ ಹೇಳಲಾರರು ಅಂದನು.


ಆದಕಾರಣ ನಾನು ಕಣ್ಣೀರುಸುರಿಸುತ್ತಾ ಮೂರು ವರುಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬನಿಗೆ ಬುದ್ಧಿಹೇಳಿದೆನೆಂದು ನೀವು ಜ್ಞಾಪಕಮಾಡಿಕೊಂಡು ಎಚ್ಚರವಾಗಿರಿ.


ಪೌಲನು ಜನರೊಳಗೆ ಹೋಗಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.


ಅವರಲ್ಲಿ ಕೆಲವರೂ ದೇವಭಕ್ತರಾದ ಗ್ರೀಕರಲ್ಲಿ ದೊಡ್ಡ ಗುಂಪೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ಒಡಂಬಟ್ಟು ಪೌಲ ಸೀಲರನ್ನು ಸೇರಿಕೊಂಡರು.


ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.


ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ ತಿರುಗಿಕೊಳ್ಳದೆ ತನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿನಮಾಡಿದನು ಎಂಬದೇ.


ಅದೇ ಗಳಿಗೆಯಲ್ಲಿ ಯೇಸು ಗುಂಪುಗುಂಪಾಗಿ ಕೂಡಿದ್ದ ಜನರಿಗೆ - ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ? ನಾನು ದಿನಾಲು ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;


ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ; ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ ಎಂದು ಉತ್ತರಕೊಟ್ಟು ಅವರನ್ನು ಬಿಟ್ಟುಹೋದನು.


ಅವರ ಮಾತನ್ನು ಬಿಡಿರಿ; ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು ಅಂದನು.


ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಆಹಾ, ಈ ಪಟ್ಟಣದವರೂ ಇದರ ಸುತ್ತಣ ಎಲ್ಲಾ ಊರುಗಳವರೂ ನನ್ನ ಮಾತುಗಳನ್ನು ಕೇಳಲೊಲ್ಲದೆ ತಮ್ಮ ಮನಸ್ಸನ್ನು ಕಠಿಣಮಾಡಿಕೊಂಡ ಕಾರಣ ನಾನು ಈ ಪಟ್ಟಣಕ್ಕೆ ಕೊಟ್ಟ ಶಾಪದ ಕೇಡನ್ನೆಲ್ಲಾ ಇವರಿಗೆ ಬರಮಾಡುವೆನು ಎಂದು ಸಮಸ್ತ ಜನರಿಗೆ ಸಾರಿದನು.


ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ, ನನ್ನ ಆಜ್ಞೆಗೆ ಮಣಿಯಲಿಲ್ಲ; ತಮ್ಮ ಪಿತೃಗಳಿಗಿಂತಲೂ ಕೆಟ್ಟವರಾಗಿ ನಡೆದರು.


ಆತನು ಆಶ್ರಯವಾಗುವನು; ಆದರೆ ಇಸ್ರಾಯೇಲಿನ ಎರಡು ಮನೆತನಕ್ಕೆ ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಯೆರೂಸಲೇವಿುನ ನಿವಾಸಿಗಳಿಗೆ ಬಲೆಯೂ ಬೋನೂ ಆಗುವನು.


ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಲಿನ ನಿಲವುಗಳ ಹತ್ತಿರ ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು.


ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ ಮಸ್ಸಾದಿನದಲ್ಲಿ ಮಾಡಿದಂತೆ ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ.


ನನ್ನ ಧರ್ಮೋಪದೇಶಕ್ಕೆ ಪುನಃ ಮನಗೊಟ್ಟು ಬನ್ನಿರಿ ಎಂದು ಎಷ್ಟೋ ಖಂಡಿತವಾಗಿ ಎಚ್ಚರಿಸಿದಿ. ಆದರೂ ಅವರು ಲಾಲಿಸದೆ ಗರ್ವಿಗಳೂ ನಿನ್ನ ಆಜ್ಞೆಗಳಿಗೆ ಅವಿಧೇಯರೂ ಆದರು; ಕೈಕೊಳ್ಳುವ ಮನುಷ್ಯನಿಗೆ ಜೀವಾಧಾರವಾಗಿರುವ ನಿನ್ನ ವಿಧಿ ನ್ಯಾಯಗಳನ್ನು ಮೀರಿ ಪಾಪಮಾಡಿ ಹೆಗಲು ಕೊಡದೆ ಮೊಂಡಬಿದ್ದು ನಿನ್ನ ಮಾತನ್ನು ಕೇಳದೆ ಹೋದರು.


ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಫೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅದರ ತಾಪವು ಆರಿಹೋಗಲೇ ಇಲ್ಲ.


ಈಗ ನಿಮ್ಮ ಪಿತೃಗಳಂತೆ ಆಜ್ಞೆಗೆ ಮಣಿಯದವರಾಗಿರಬೇಡಿರಿ, ಯೆಹೋವನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಯೆಹೋವನು ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡ ಪವಿತ್ರಾಲಯಕ್ಕೆ ಬಂದು ಆತನನ್ನು ಸೇವಿಸಿರಿ. ಆಗ ನಿಮ್ಮ ಮೇಲಿರುವ ಆತನ ಉಗ್ರಕೋಪವು ತೊಲಗಿಹೋಗುವದು.


ಅವರು ದೇವರಾದ ಯೆಹೋವನನ್ನು ನಂಬದೆ ಆತನ ಆಜ್ಞೆಗಳಿಗೆ ಮಣಿಯದೆ ಇದ್ದ ತಮ್ಮ ಹಿರಿಯರಂತೆ ಆತನಿಗೆ ಕಿವಿಗೊಡದೆ ಹೋದರು;


ಯಾಕಂದರೆ ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು ಮತ್ತು ವಿರೋಧಿಗಳು ಬಹಳ ಮಂದಿ ಇದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು