ಅಪೊಸ್ತಲರ ಕೃತ್ಯಗಳು 19:4 - ಕನ್ನಡ ಸತ್ಯವೇದವು J.V. (BSI)4 ಅದಕ್ಕೆ ಪೌಲನು - ಯೋಹಾನನು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರವಾತನಲ್ಲಿ ಅಂದರೆ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬದಾಗಿ ಜನರಿಗೆ ಹೇಳಿದನು ಎಂದು ಹೇಳಲು ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆಗ ಪೌಲನು, “ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ ‘ತನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೇ ಯೇಸು’ ಎಂದು ಇಸ್ರಯೇಲರಿಗೆ ಬೋಧಿಸಿದ್ದನು,” ಎಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಅದಕ್ಕೆ ಪೌಲನು, “ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದನು. ಅಲ್ಲದೆ ತನ್ನ ತರುವಾಯ ಬರುವಾತನಲ್ಲಿ ನಂಬಿಕೆ ಇಡಬೇಕೆಂದು ಅವರಿಗೆ ಹೇಳಿದನು. ಆ ವ್ಯಕ್ತಿಯೇ ಯೇಸು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅದಕ್ಕೆ ಪೌಲನು, “ಯೋಹಾನನ ದೀಕ್ಷಾಸ್ನಾನವು ಪಶ್ಚಾತ್ತಾಪದ ದೀಕ್ಷಾಸ್ನಾನವಾಗಿತ್ತು. ತನ್ನ ನಂತರ ಬರಲಿರುವ ಯೇಸುವಿನಲ್ಲಿ ವಿಶ್ವಾಸವನ್ನಿಡಬೇಕೆಂದು ಯೋಹಾನನು ಜನರಿಗೆ ಹೇಳಿದನು,” ಎಂದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್4 ಜುವಾಂವಾಚೆ ಬಾಲ್ತಿಮ್ ಪಾಪ್ ಸೊಡುನ್ ದೆವಾಕ್ಡೆ ಪರ್ತುನ್ ಯೆತಲ್ಯಾಕ್ನಿ ಹೊಲ್ಲೆ, ತೆನಿ ಲೊಕಾಕ್ನಿ ಅಪ್ಲ್ಯಾ ಮಾನಾ ಯೆತಲೊ ಹೊತ್ಯ್ತಾಚೆರ್ ವಿಶ್ವಾಸ್ ಥವಾ ಮನುನ್ ಸಾಂಗಲ್ಯಾನ್ ತೊ ಜೆಜುಚ್. ಅಧ್ಯಾಯವನ್ನು ನೋಡಿ |