ಅಪೊಸ್ತಲರ ಕೃತ್ಯಗಳು 19:13 - ಕನ್ನಡ ಸತ್ಯವೇದವು J.V. (BSI)13 ದೆವ್ವಬಿಡಿಸುವವರೆನಿಸಿಕೊಂಡು ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದೆವ್ವಹಿಡಿದವರ ಮೇಲೆ - ಪೌಲನು ಸಾರುವ ಯೇಸುವಿನ ಆಣೆ ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವದಕ್ಕೆ ತೊಡಗಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 “ದೆವ್ವಬಿಡಿಸುವವರು” ಎನಿಸಿಕೊಂಡು ಊರೂರು ಸುತ್ತುತ್ತಿದ್ದ ಕೆಲವು ಯೆಹೂದ್ಯರು ಸಹ ಪ್ರಭು ಯೇಸುವಿನ ನಾಮವನ್ನು ಬಳಸಿ ದೆವ್ವಬಿಡಿಸಲು ಯತ್ನಿಸಿದರು. ಇವರು ದೆವ್ವಗಳಿಗೆ, “ಪೌಲನು ಸಾರುತ್ತಿರುವ ಯೇಸುವಿನ ನಾಮದಲ್ಲಿ ನಿಮಗೆ ಆಣೆಯಿಟ್ಟು ಆಜ್ಞಾಪಿಸುತ್ತೇವೆ,” ಎಂದು ಹೇಳುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13-14 ಕೆಲವು ಯೆಹೂದ್ಯರು ಸಹ ಊರೂರುಗಳಿಗೆ ಸಂಚರಿಸುತ್ತಾ ದೆವ್ವದಿಂದ ಪೀಡಿತರಾಗಿದ್ದ ಜನರೊಳಗಿಂದ ದೆವ್ವಗಳನ್ನು ಯೇಸುವಿನ ಹೆಸರಿನ ಮೂಲಕ ಹೊರಡಿಸುತ್ತಿದ್ದರು. ಸ್ಕೇವ ಎಂಬವನ ಏಳು ಮಂದಿ ಗಂಡುಮಕ್ಕಳೂ ಹೀಗೇ ಮಾಡುತ್ತಿದ್ದರು. (ಸ್ಕೇವನು ಪ್ರಧಾನಯಾಜಕನಾಗಿದ್ದನು.) ಅವರೆಲ್ಲರೂ, “ಪೌಲನು ಯಾವ ಯೇಸುವಿನ ಬಗ್ಗೆ ಹೇಳುತ್ತಿದ್ದಾನೋ ಆ ಯೇಸುವಿನ ಹೆಸರಿನಿಂದಲೇ ನೀನು ಹೊರಗೆ ಬರಬೇಕೆಂದು ನಾವು ಆಜ್ಞಾಪಿಸುತ್ತೇವೆ” ಎಂದು ಹೇಳುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಕೆಲವು ಯೆಹೂದ್ಯರು ದುರಾತ್ಮಗಳನ್ನು ಬಿಡಿಸಲು ಪ್ರಯತ್ನಿಸಿ, “ಪೌಲನು ಸಾರುತ್ತಿರುವ ಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಆಜ್ಞಾಪಿಸುತ್ತೇನೆ,” ಎಂದು ಅವರು ಕರ್ತ ಯೇಸುವಿನ ಹೆಸರನ್ನು ಬಳಸಲು ಪ್ರಯತ್ನಿಸಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್13 ಗಿರೆ ಸೊಡಸ್ತಲಿ ಜುದೆವಾಂಚಿ ಲೊಕಾ ಥೈ ಫಿರುಂಗೆತ್ ಹೊತ್ತಿ ತೆಂಚ್ಯಾತ್ಲಿ ಉಲ್ಲಿ ಲೊಕಾ ಧನಿಯಾ ಜೆಜುಚೆ ನಾವ್ ವಾಪ್ರುನ್ ಘೆವ್ನ್ ಗಿರೆ ಸೊಡ್ಸುಕ್ ಕಟ್ಪಟ್ ಕರಿತ್ ಹೊತ್ತಿ, ತೆನಿ ಪಾವ್ಲು ಪರ್ಗಟ್ ಕರುಲಾಗಲ್ಯಾ ಜೆಜುಚ್ಯಾ ನಾವಾನ್ ಹುಕುಮ್ ದಿತಾ, ಭಾಯ್ರ್ ಯೆ ಮನುನ್ ಮ್ಹಾರ್‍ವಾಕ್ನಿ ಸಾಂಗಿತ್. ಅಧ್ಯಾಯವನ್ನು ನೋಡಿ |