Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 18:9 - ಕನ್ನಡ ಸತ್ಯವೇದವು J.V. (BSI)

9 ಇದಲ್ಲದೆ ಕರ್ತನು ರಾತ್ರಿಕಾಲದಲ್ಲಿ ಪೌಲನಿಗೆ ದರ್ಶನಕೊಟ್ಟು - ನೀನು ಹೆದರಬೇಡ; ಸುಮ್ಮನಿರದೆ ಮಾತಾಡುತ್ತಲೇ ಇರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಇದಲ್ಲದೆ ಕರ್ತನು ರಾತ್ರಿ ಪೌಲನಿಗೆ ದರ್ಶನ ಕೊಟ್ಟು; “ನೀನು ಹೆದರಬೇಡ; ಆದರೆ ಸುಮ್ಮನಿರದೆ ಸುವಾರ್ತೆಯನ್ನು ಸಾರುತ್ತಲೇ ಇರು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಒಂದು ರಾತ್ರಿ ಪೌಲನಿಗೆ ಪ್ರಭು ದರ್ಶನ ಇತ್ತು, “ಭಯಪಡಬೇಡ, ಬೋಧನೆ ಮಾಡುವುದನ್ನು ಮುಂದುವರಿಸು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಒಂದು ರಾತ್ರಿ ಪೌಲನಿಗೆ ದರ್ಶನವಾಯಿತು. ಪ್ರಭುವು ಅವನಿಗೆ, “ಭಯಪಡಬೇಡ! ಜನರಿಗೆ ಬೋಧಿಸುತ್ತಲೇ ಇರು, ನಿಲ್ಲಿಸಬೇಡ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಒಂದು ರಾತ್ರಿ ಕರ್ತ ಯೇಸು ದರ್ಶನದಲ್ಲಿ ಪೌಲನೊಂದಿಗೆ ಮಾತನಾಡಿ: “ಭಯಪಡಬೇಡ, ಮಾತನಾಡುತ್ತಲೇ ಇರು, ಸುಮ್ಮನಿರಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ಎಕ್ ದಿಸಿ ರಾತ್ತಿನ್ ಪಾವ್ಲುಕ್ ದರ್ಶನ್ ಹೊಲೆ ಧನಿಯಾನ್; ತೆಕಾ, ಭಿಂವ್‍ನಕೊ! ಲೊಕಾಕ್ನಿ ತಿಯಾ ಸಾಂಗುನ್ಗೆತ್ ಜಾ, ಇಬೆ ಕರುನಕ್ಕೊ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 18:9
17 ತಿಳಿವುಗಳ ಹೋಲಿಕೆ  

ಆ ದಿನದ ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು - ಧೈರ್ಯದಿಂದಿರು; ನೀನು ಯೆರೂಸಲೇವಿುನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವದು ಅಂದನು.


ಅಲ್ಲಿ ರಾತ್ರಿಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು, ಏನಂದರೆ - ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು - ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು ಅವನನ್ನು ಬೇಡಿಕೊಳ್ಳುತ್ತಿದ್ದನು.


ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವೆಂಬದನ್ನೂ ನೀವೇ ಬಲ್ಲಿರಿ.


ನಾನಾದರೋ ಯೆಹೋವನ ಆತ್ಮಾವೇಶದಿಂದ ಬಲಪರಾಕ್ರಮನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.


ಹೀಗಿರಲು ನೀನು ಎದ್ದು ನಡುಕಟ್ಟಿಕೊಂಡು ನಾನು ಆಜ್ಞಾಪಿಸುವದನ್ನೆಲ್ಲಾ ಅವರಿಗೆ ಹೇಳು. ನೀನು ಅವರಿಗೆ ಕಂಗೆಡಬೇಡ; ಕಂಗೆಟ್ಟರೆ ನಾನೂ ನಿನ್ನನ್ನು ಅವರ ಮುಂದೆ ಕಂಗೆಡಿಸುವೆನು.


ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಪ್ರಕಟಿಸುವದನ್ನು ಅಲ್ಲಿ ಸಾರು ಎಂದು ಎರಡನೆಯ ಸಲ ಅಪ್ಪಣೆಮಾಡಿದನು.


ಗಂಟಲೆತ್ತಿ ಕೂಗು, ಸಂಕೋಚಪಡಬೇಡ, ಕೊಂಬಿನಂತೆ ದನಿಗೈದು ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು, ಯಾಕೋಬವಂಶದವರಿಗೆ ಅವರ ಪಾಪಗಳನ್ನು ಅರುಹು.


ಆತನು - ನೀನು ತ್ವರೆಪಟ್ಟು ಬೇಗನೆ ಯೆರೂಸಲೇವಿುನಿಂದ ಹೊರಟುಹೋಗು, ನನ್ನ ವಿಷಯದಲ್ಲಿ ನೀನು ಹೇಳುವ ಸಾಕ್ಷಿಯನ್ನು ಅವರು ಅಂಗೀಕರಿಸುವದಿಲ್ಲ ಅಂದನು.


ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ - ಅನನೀಯನೇ, ಎಂದು ಅವನನ್ನು ಕರೆಯಲು ಅವನು - ಕರ್ತನೇ, ಇಗೋ, ಇದ್ದೇನೆ ಅಂದನು.


ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡು ಮಾಡುವದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ ಎಂದು ಹೇಳಿದನು.


ನಾನು ಸ್ವತಂತ್ರನಲ್ಲವೇ. ಅಪೊಸ್ತಲನಲ್ಲವೇ ನಮ್ಮ ಕರ್ತನಾದ ಯೇಸುವನ್ನು ಕಂಡವನಲ್ಲವೇ. ನಾನು ಕರ್ತನ ಸೇವೆಯಲ್ಲಿ ಮಾಡಿದ ಕೆಲಸದ ಫಲವು ನೀವೇ ಅಲ್ಲವೇ.


ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು ಭಯಪಡಬೇಡ ಎಂದು ಹೇಳಿದಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು