ಅಪೊಸ್ತಲರ ಕೃತ್ಯಗಳು 18:24 - ಕನ್ನಡ ಸತ್ಯವೇದವು J.V. (BSI)24 ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನು, ಶಾಸ್ತ್ರಗಳಲ್ಲಿ ಪ್ರವೀಣನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಭಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯಪಡೆದವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಅಲೆಕ್ಸಾಂಡ್ರಿಯಾ ಪಟ್ಟಣದಿಂದ ಅಪೊಲ್ಲೋಸನೆಂಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಿದ್ಯಾವಂತನಾಗಿದ್ದನು ಮತ್ತು ಪವಿತ್ರ ಗ್ರಂಥದಲ್ಲಿ ಪಾಂಡಿತ್ಯ ಪಡೆದಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಅಲೆಕ್ಸಾಂದ್ರಿಯ ನಿವಾಸಿ ಅಪೊಲ್ಲೋಸ ಎಂಬ ಹೆಸರಿನ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನು ವಾಕ್ಚಾತುರ್ಯವುಳ್ಳವನೂ ಪವಿತ್ರ ವೇದದಲ್ಲಿ ಪ್ರವೀಣನೂ ಆಗಿದ್ದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್24 ತವ್ಡ್ಯಾ ಯೆಳಾಕುಚ್ ಅಲೆಕ್ಸಾಂಡ್ರಿಯಾತ್ ಉಪಾಜಲೊ ಅಪೊಲ್ಲೊಸ್ ಮನ್ತಲೊ ಜುದೆವಾಂಚೊ ಎಕ್ಲೊ ಎಫೆಸಾಕ್ ಯೆಲೊ, ತೊ ಬೊಲ್ನ್ಯಾತ್ನಿ ಲೈ ಉಶಾರ್ ಅನಿ ಪವಿತ್ರ್ ಪುಸ್ತಕ್ ಕಳ್ವುನ್ ಘೆಟಲೊ ಹೊತ್ತೊ. ಅಧ್ಯಾಯವನ್ನು ನೋಡಿ |
ಸಹೋದರರೇ, ನಾನು ನಿಮಗೋಸ್ಕರವೇ ಹಿಂದಣ ಮಾತುಗಳನ್ನು ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. ನೀವು ನಮ್ಮನ್ನು ದೃಷ್ಟಾಂತವಾಗಿ ಇಟ್ಟುಕೊಂಡು ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿ ಹೋಗಬಾರದೆಂಬದನ್ನೂ ನಿಮ್ಮಲ್ಲಿ ಯಾರೂ ಒಬ್ಬ ಬೋಧಕನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದೆಂಬದನ್ನೂ ಕಲಿತುಕೊಳ್ಳಬೇಕು.