Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 14:4 - ಕನ್ನಡ ಸತ್ಯವೇದವು J.V. (BSI)

4 ಆಗ ಆ ಊರಿನ ಜನರಲ್ಲಿ ಭೇದವುಂಟಾಯಿತು; ಕೆಲವರು ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆಗ ಆ ಊರಿನ ಜನರು ಎರಡು ಭಾಗವಾದರೂ; ಕೆಲವರು ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರು ಯೆಹೂದ್ಯರ ಪರವಾಗಿಯೂ ಮತ್ತೆ ಕೆಲವರು ಪ್ರೇಷಿತರ ಪರವಾಗಿಯೂ ವಿಂಗಡವಾಗಿ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ಪಟ್ಟಣದ ಜನರಲ್ಲಿ ಕೆಲವರು ಯೆಹೂದ್ಯರ ಮಾತನ್ನೂ ಇನ್ನು ಕೆಲವರು ಪೌಲ ಬಾರ್ನಬರ ಮಾತನ್ನೂ ನಂಬಿಕೊಂಡದ್ದರಿಂದ ಅವರಲ್ಲಿಯೇ ಎರಡು ಪಂಗಡವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆದರೆ ಪಟ್ಟಣದ ಜನರಲ್ಲಿ ಭಿನ್ನಾಭಿಪ್ರಾಯಗಳಾದವು. ಕೆಲವರು ಯೆಹೂದ್ಯರ ಪರವಾದರು, ಇನ್ನೂ ಕೆಲವರು ಅಪೊಸ್ತಲರ ಪರವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಖರೆ ಶಾರಾತ್ಲ್ಯಾ ಲೊಕಾತ್ನಿ ಥೊಡ್ಯಾನಿ ಪಾವ್ಲು ಅನಿ ಬಾರ್ನಾಬಾಸಾಚ್ಯಾ ವಾಂಗ್ಡಾ ಗೆಲಿ, ಅನಿ ಥೊಡ್ಯಾ ಲೊಕಾನಿ ಅಪೊಸ್ತಲಾಂಚ್ಯಾ ವಾಂಗ್ಡಾ ಗೆಲ್ಯಾನಿ ತೆಚ್ಯಾ ಸಾಟ್ನಿ ಥೈಚ್ ದೊನ್ ತಾಂಡೆ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 14:4
18 ತಿಳಿವುಗಳ ಹೋಲಿಕೆ  

ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು.


ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.


ಇದನ್ನು ಕೇಳಿ ಅಪೊಸ್ತಲರಾದ ಬಾರ್ನಬ ಪೌಲರು ತಮ್ಮ ವಸ್ತ್ರಗಳನ್ನು ಹರಕೊಂಡು ಜನರ ಗುಂಪಿನೊಳಗೆ ಕೂಗುತ್ತಾ ನುಗ್ಗಿ -


ಕ್ರೈಸ್ತ ಸಹೋದರಿಯಾಗಿರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ವಿುಕ್ಕಾದ ಅಪೊಸ್ತಲರಂತೆಯೂ ಕರ್ತನ ತಮ್ಮಂದಿರಂತೆಯೂ ಕೇಫನಂತೆಯೂ ನಮಗೆ ಹಕ್ಕಿಲ್ಲವೇ.


ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿತ್ರಾತ್ಮನು - ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.


ಹೀಗೆ ಜನರಲ್ಲಿ ಆತನನ್ನು ಕುರಿತು ಭೇದ ಉಂಟಾಯಿತು.


ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ - ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವದಕ್ಕೂ ಅನೇಕರು ಏಳುವದಕ್ಕೂ ಕಾರಣನಾಗಿರುವನು; ಮತ್ತು ಜನರು ಎದುರು ಮಾತಾಡುವದಕ್ಕೆ ಗುರುತಾಗಿರುವನು; ಹೀಗೆ ಬಹುಜನರ ಅಂತರಂಗದ ವಿಚಾರಗಳು ಬೈಲಿಗೆ ಬಂದಾವು; ಇದಕ್ಕೆ ಈತನು ಹುಟ್ಟಿದ್ದು.


ಮಗನು ತಂದೆಯನ್ನು ತುಚ್ಫೀಕರಿಸುತ್ತಾನೆ, ಮಗಳು ತಾಯಿಗೆ ಎದುರೇಳುತ್ತಾಳೆ; ಸೊಸೆಯು ಅತ್ತೆಯನ್ನು ವಿರೋಧಿಸುತ್ತಾಳೆ; ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗಿದ್ದಾರೆ.


ಆದರೆ ಜನರು ಗುಂಪುಗುಂಪಾಗಿ ಬರುವದನ್ನು ನೋಡಿ ಯೆಹೂದ್ಯರು ಮತಾಭಿಮಾನದಿಂದ ತುಂಬಿದವರಾಗಿ ಪೌಲನು ಹೇಳಿದ ಮಾತುಗಳಿಗೆ ಎದುರ್ಚಂಡಿಸುತ್ತಾ ದೂಷಣೆ ಮಾಡುತ್ತಾ ಇದ್ದರು.


ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಕುಲೀನ ಸ್ತ್ರೀಯರನ್ನೂ ಊರಿನ ಪ್ರಮುಖರನ್ನೂ ಪ್ರೇರಿಸಿ ಪೌಲ ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ಅವರನ್ನು ತಮ್ಮ ಮೇರೆಯಿಂದ ಆಚೆಗೆ ಅಟ್ಟಿದರು.


ಆದರೆ ನಂಬದೆ ಹೋದ ಯೆಹೂದ್ಯರು ಅನ್ಯಜನರ ಮನಸ್ಸನ್ನು ಸಹೋದರರಿಗೆ ವಿರುದ್ಧವಾಗಿ ರೇಗಿಸಿ ಕೆಡಿಸಿದರು.


ಅನ್ಯಜನರೂ ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳ ಸಮ್ಮತಿಯಿಂದ ಅಪೊಸ್ತಲರನ್ನು ಅವಮಾನಪಡಿಸುವದಕ್ಕೂ ಕಲ್ಲೆಸೆದು ಕೊಲ್ಲುವದಕ್ಕೂ ಪ್ರವರ್ತಿಸಿದಾಗ


ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯದಿಂದಲೂ ಯೆಹೂದ್ಯರು ಬಂದು ಜನರನ್ನು ಪ್ರೇರೇಪಿಸಿ ಪೌಲನನ್ನು ಕೊಲ್ಲುವದಕ್ಕೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಊರಹೊರಕ್ಕೆ ಎಳೆದುಬಿಟ್ಟರು.


ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು