ಅಪೊಸ್ತಲರ ಕೃತ್ಯಗಳು 13:17 - ಕನ್ನಡ ಸತ್ಯವೇದವು J.V. (BSI)17 ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಭಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡು ನಮ್ಮ ಜನರು ಐಗುಪ್ತದೇಶದಲ್ಲಿ ಪ್ರವಾಸವಾಗಿದ್ದಾಗ ಅವರನ್ನು ವೃದ್ಧಿಗೆ ತಂದು ಭುಜಬಲದಿಂದ ಆ ದೇಶದೊಳಗಿಂದ ಬರಮಾಡಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 “ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಬಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ಆರಿಸಿಕೊಂಡ ನಮ್ಮ ಪೂರ್ವಿಕರು ಐಗುಪ್ತದೇಶದಲ್ಲಿ ವಾಸಿಸುತ್ತಿದ್ದಾಗ ಅವರನ್ನು ಪ್ರಬಲರನ್ನಾಗಿ ಮಾಡಿ, ಅಭಿವೃದ್ಧಿಗೆ ತಂದು ತನ್ನ ಭುಜಬಲದಿಂದ ಅವರನ್ನು ಆ ದೇಶದಿಂದ ಬರಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಇಸ್ರೇಲರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡನು. ಈಜಿಪ್ಟಿನಲ್ಲಿ ಪ್ರವಾಸಿಗರಾಗಿ ವಾಸಿಸುತ್ತಿದ್ದ ತನ್ನ ಜನರಿಗೆ ದೇವರು ಸಹಾಯಮಾಡಿ ಅಭಿವೃದ್ಧಿಪಡಿಸಿದನು. ದೇವರು ತನ್ನ ಮಹಾಶಕ್ತಿಯಿಂದ ಅವರನ್ನು ಆ ದೇಶದೊಳಗಿಂದ ಬರಮಾಡಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆಯ್ದುಕೊಂಡರು; ಈಜಿಪ್ಟಿನಲ್ಲಿ ನಮ್ಮ ಜನರು ವಾಸಿಸುತ್ತಿದ್ದಾಗ; ಅವರನ್ನು ಪ್ರಬಲರನ್ನಾಗಿ ಮಾಡಿ ತಮ್ಮ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಅವರನ್ನು ಬಿಡಿಸಿ ಕರೆತಂದರು; ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್17 ಇಸ್ರಾಯೆಲಾಂಚ್ಯಾ ದೆವಾನ್ ಅಮ್ಚ್ಯಾ ಪುರ್ವಜ್ ಲೊಕಾಕ್ನಿ ಎಚುನ್ ಘೆಟ್ಲ್ಯಾನ್ ಇಜಿಪ್ತಾತ್ ಪ್ರವಾಸ್ ಗೆಲ್ಯಾಂಚ್ಯಾ ಸಾರ್ಕೆ ಹೊತ್ತ್ಯಾ ಅಪ್ಲ್ಯಾ ಲೊಕಾಕ್ನಿ ದೆವಾನ್ ಮಜ್ಜತ್ ಕರುನ್ ತೆಂಕಾ ಬರೆ ಕರ್‍ಲ್ಯಾನ್, ದೆವಾನ್ ಮೊಟೊ ದೆಶ್ ಹೊವ್ನ್ ಕರ್‍ಲ್ಯಾನ್, ಅನಿ ಅಪ್ಲ್ಯಾ ಮೊಟ್ಯಾ ಬಳಾನ್ ತೆಂಕಾ ತ್ಯಾ ದೆಶ್ಯಾತ್ನಾ ಚಾಲ್ವುಲ್ಯಾನ್. ಅಧ್ಯಾಯವನ್ನು ನೋಡಿ |
ನೀವು ಅವರ ದೇಶಕ್ಕೆ ಬಂದು ಅದನ್ನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿಮ್ಮ ಪುಣ್ಯವೇ ಆಗಲಿ ನಿಮ್ಮ ಸುಸ್ವಭಾವವೇ ಆಗಲಿ ಕಾರಣವಲ್ಲ. ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೂ ನಿಮ್ಮ ದೇವರಾದ ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದದರಿಂದಲೂ ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿಬಿಡುತ್ತಾನೆ.