Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:11 - ಕನ್ನಡ ಸತ್ಯವೇದವು J.V. (BSI)

11 ಅವನು ಧ್ಯಾನ ಪರವಶನಾಗಿ ಆಕಾಶವು ತೆರೆದಿರುವದನ್ನೂ ನಾಲ್ಕು ಮೂಲೆಗಳನ್ನು ಹಿಡಿದಿದ್ದ ದೊಡ್ಡ ಜೋಳಿಗೆಯಂತಿರುವ ಏನೋ ಒಂದು ವಸ್ತುವು ಭೂವಿುಯ ಮೇಲೆ ಇಳಿಯುವದನ್ನೂ ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅವನು ಧ್ಯಾನಪರವಶನಾಗಿ ಆಕಾಶವು ತೆರೆದಿರುವುದನ್ನೂ, ನಾಲ್ಕು ಮೂಲೆಗಳನ್ನು ಕಟ್ಟಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವುದನ್ನೂ ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸ್ವರ್ಗದ ಬಾಗಿಲು ತೆರೆಯಿತು. ದೊಡ್ಡ ದುಪ್ಪಟಿಯಂತಹ ವಸ್ತುವೊಂದು ಇಳಿದು ಬರುತ್ತಿತ್ತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಭೂಮಿಯ ಮೇಲೆ ಅದನ್ನು ಇಳಿಯಬಿಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ತೆರೆದ ಆಕಾಶದಿಂದ ಯಾವುದೋ ಒಂದು ವಸ್ತು ಇಳಿದು ಬರುತ್ತಿರುವುದನ್ನು ಅವನು ಕಂಡನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗಗಳನ್ನು ಕಟ್ಟಿ ಭೂಮಿಯ ಮೇಲೆ ಇಳಿಯಬಿಡಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಪರಲೋಕವು ತೆರೆಯಲಾಗಿ ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಉಗಡಲ್ಲ್ಯಾ ಮಳ್ಬಾಕ್ನಾ ಖಲೊಕಿ ಎಕ್ ವಸ್ತ್ ಖಾಲ್ತಿ ಉತ್ರುನ್ ಯೆವ್ಕ್ ಲಾಗಲ್ಲೆ ತೆನಿ ಬಗಟ್ಲ್ಯಾನ್, ತೆ ಎಕ್ ಮೊಟ್ಯಾ ವಾಟ್ಲಿ ಸಾರ್ಕೆ ಹೊತ್ತೆ ತೆಚ್ಯಾ ಚಾರಿ ಮುಲ್ಲ್ಯಾಕ್ನಿ ದೊರಿಯಾ ಬಾಂದುನ್ ಜಿಮ್ನಿ ವರ್‍ತಿ ಉತ್ರುನ್ ಸೊಡಲ್ಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:11
28 ತಿಳಿವುಗಳ ಹೋಲಿಕೆ  

ಅದು ಯಾವದಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಣ ಅಂಗಗಳೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬದೇ.


ಇದಲ್ಲದೆ ಅವನಿಗೆ - ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪರಲೋಕವು ತೆರೆದಿರುವದನ್ನೂ ಮನುಷ್ಯಕುಮಾರನ ಮೇಲೆ ದೇವದೂತರು ಏರಿಹೋಗುತ್ತಾ ಇಳಿದುಬರುತ್ತಾ ಇರುವದನ್ನೂ ನೋಡುವಿರಿ ಎಂದು ಹೇಳಿದನು.


ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು; ಅದರ ಮೇಲೆ ಕೂತಿದ್ದವನಿಗೆ ನಂಬಿಗಸ್ತನೂ ಸತ್ಯವಂತನೂ ಎಂದು ಹೆಸರು. ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ;


ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ವಿುಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು.


ಇವುಗಳಾದ ಮೇಲೆ ನಾನು ನೋಡಿದಾಗ ಪರಲೋಕದಲ್ಲಿ ತೆರೆದಿದ್ದ ಬಾಗಿಲು ಕಾಣಿಸಿತು; ಮತ್ತು ನನ್ನ ಸಂಗಡ ತುತೂರಿಯು ಮಾತಾಡುತ್ತದೋ ಎಂಬಂತೆ ನಾನು ಮೊದಲು ಕೇಳಿದ್ದ ವಾಣಿಯು ಕೇಳಿಸಿತು. ಇಲ್ಲಿಗೆ ಏರಿ ಬಾ, ಮುಂದೆ ಆಗಬೇಕಾದವುಗಳನ್ನು ನಿನಗೆ ತೋರಿಸುವೆನು ಎಂದು ಹೇಳಿತು. ಕೂಡಲೆ ದೇವರಾತ್ಮವಶನಾದೆನು.


ಇದನ್ನು ಧರಿಸಿಕೊಂಡಿರುವದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿಕೊಂಡವರು ಸುನ್ನತಿಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ; ಮ್ಲೇಚ್ಫ ಹೂಣ ಎಂಬ ಹೆಸರುಗಳಿಲ್ಲ; ಆಳು ಒಡೆಯ ಎಂಬ ಭೇದವಿಲ್ಲ. ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿರುವನು.


ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ.


ನಾವಂತೂ ಹುಟ್ಟು ಯೆಹೂದ್ಯರು, ಪಾಪಿಗಳೆನಿಸಿಕೊಂಡ ಅನ್ಯಜನರಲ್ಲ;


ಅವರು ಇಸ್ರಾಯೇಲನ ವಂಶದವರೂ ದೇವರು ಪುತ್ರರಾಗಿ ಸ್ವೀಕರಿಸಿದವರೂ ಆಗಿದ್ದಾರೆ. ಅವರಲ್ಲಿ ದೇವರ ತೇಜಸ್ಸಾನ್ನಿಧ್ಯವು ಇದೆ; ಅವರ ಸಂಗಡ ದೇವರು ಒಡಂಬಡಿಕೆಗಳನ್ನು ಮಾಡಿಕೊಂಡನು; ಅವರಿಗೆ ಧರ್ಮಶಾಸ್ತ್ರವೂ ದೇವಾಲಯದಲ್ಲಿ ನಡೆಯುವ ಆರಾಧನೆಯೂ ವಾಗ್ದಾನಗಳೂ ಕೊಡೋಣವಾದವು.


ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು ಮೊದಲು ಯೆಹೂದ್ಯರಿಗೆ ಆಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ.


ಅಗೋ, ಆಕಾಶವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನೂ ನೋಡುತ್ತೇನೆ ಎಂದು ಹೇಳಿದನು.


ಆದರೆ ನಾನು ಭೂವಿುಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಎಂದು ಹೇಳಿದನು.


ಯೇಸು ಆ ಜನಕ್ಕೋಸ್ಕರ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೆ ಸಹ ಸಾಯುವದಕ್ಕಿದ್ದನು.


ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಲ್ಲಿ ಆಕಾಶವು ತೆರೆಯಿತು;


ಇದಲ್ಲದೆ ನಿಮಗೆ ಹೇಳುವದೇನಂದರೆ ಮೂಡಣ ಪಡುವಣ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಎಂಬವರ ಸಂಗಡ ಊಟಕ್ಕೆ ಕೂಡ್ರುವರು;


ಕೆಬಾರ್ ನದಿಯ ಹತ್ತಿರ ಸೆರೆಯಾಗಿ ವಾಸಿಸುತ್ತಿದ್ದ ಯೆಹೂದ್ಯರ ಮಧ್ಯದಲ್ಲಿ ನಾನು ಸೇರಿಕೊಂಡಿರುವಾಗ ಮೂವತ್ತನೆಯ ವರುಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆಕಾಶವು ಒಡೆದು ನನಗೆ ದೇವದರ್ಶನಗಳು ಉಂಟಾದವು.


ಇಸ್ರಾಯೇಲಿನ ದೇಶಭ್ರಷ್ಟರನ್ನು ಕೂಡಿಸಿಕೊಳ್ಳುವ ಕರ್ತನಾದ ಯೆಹೋವನ ನುಡಿಯೇನಂದರೆ - ನಾನು ಕೂಡಿಸಿದ ಇಸ್ರಾಯೇಲ್ಯರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು ಎಂಬದೇ.


ನಾನು ಒಪ್ಪಿಸಿಬಿಡು ಎಂದು ಬಡಗಲಿಗೂ ತಡೆಯಬೇಡ ಎಂದು ತೆಂಕಲಿಗೂ ಹೇಳಿ ದೂರದಲ್ಲಿರುವ ನನ್ನ ಕುಮಾರರನ್ನೂ, ದಿಗಂತಗಳಲ್ಲಿರುವ ನನ್ನ ಕುಮಾರಿಯರನ್ನೂ


ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.


ಅದರೊಳಗೆ ಸಕಲ ವಿಧವಾದ ಪಶುಗಳೂ ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳೂ ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಗಳೂ ಇದ್ದವು.


ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಿದ್ದಾಗ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು; ಅದೇನಂದರೆ ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಇಳಿಸಲ್ಪಟ್ಟು ನಾನಿದ್ದಲ್ಲಿಗೆ ಬಂತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು