Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 1:13 - ಕನ್ನಡ ಸತ್ಯವೇದವು J.V. (BSI)

13 ಅವರು ಅಲ್ಲಿಗೆ ಬಂದು ತಾವು ಇರುತ್ತಿದ್ದ ಮೇಲಂತಸ್ತಿಗೆ ಹೋದರು; ಯಾರಾರಂದರೆ - ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ, ಯಾಕೋಬನ ಯೂದ, ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವರು ಅಲ್ಲಿಗೆ ಬಂದು ತಾವು ವಾಸಮಾಡುತ್ತಿದ್ದ ಮೇಲಂತಸ್ತಿಗೆ ಹೋದರು; ಅವರು ಯಾರಾರೆಂದರೆ, ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಾಕೋಬ, ಮತಾಭಿಮಾನಿ ಎನಿಸಿಕೊಂಡ ಸೀಮೋನ, ಯಾಕೋಬನ ಸಹೋದರನಾದ ಯೂದ, ಇವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅವರು ಯಾರಾರೆಂದರೆ: ಪೇತ್ರ, ಯೊವಾನ್ನ, ಯಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಕೋಬ, ದೇಶಾಭಿಮಾನಿ ಆದ ಸಿಮೋನ ಮತ್ತು ಯಕೋಬನ ಮಗ ಯೂದ. ಇವರೆಲ್ಲರು ಪಟ್ಟಣವನ್ನು ಸೇರಿದ್ದೇ, ಮೇಲ್ಮಾಳಿಗೆಯಲ್ಲಿದ್ದ ತಮ್ಮ ಕೊಠಡಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅಪೊಸ್ತಲರು ಪಟ್ಟಣವನ್ನು ಪ್ರವೇಶಿಸಿ ತಾವು ವಾಸವಾಗಿದ್ದಲ್ಲಿಗೆ ಹೋದರು. ಅದು ಮೇಲಂತಸ್ತಿನಲ್ಲಿತ್ತು. ಆ ಅಪೊಸ್ತಲರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಯಾಕೋಬ (ಅಲ್ಫಾಯನ ಮಗ), ದೇಶಾಭಿಮಾನಿಯಾದ ಸಿಮೋನ ಮತ್ತು ಯೂದ (ಯಾಕೋಬನ ಮಗ).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವರು ಹಿಂದಿರುಗಿದಾಗ, ತಾವು ವಾಸಿಸುತ್ತಿದ್ದ ಮಾಳಿಗೆ ಮೇಲಿನ ಕೋಣೆಯೊಳಗೆ ಹೋದರು. ಅವರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ; ಫಿಲಿಪ್ಪ, ತೋಮ; ಬಾರ್ತೊಲೊಮಾಯ ಮತ್ತಾಯ; ಅಲ್ಫಾಯನ ಮಗ ಯಾಕೋಬ, ದೇಶಾಭಿಮಾನಿ ಸೀಮೋನ ಮತ್ತು ಯಾಕೋಬನ ಮಗ ಯೂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ಶಾರಾತ್ ಯೆವ್ನ್ ಪಾವಲ್ಲ್ಯಾ ತನ್ನಾ ತೆನಿ ರ್‍ಹಾಯ್ತ್ ತ್ಯಾ ಮಾಳ್ಗಿಚ್ಯಾ ಖೊಲಿತ್ ತೆನಿ ಗೆಲ್ಯಾನಿ: ಪೆದ್ರು ಅನಿ ಜುವಾಂವ್ ಜಾಕೊಬ್ ಅನಿ ಆಂದ್ರೆ, ಫಿಲಿಪ್ ಅನಿ ಥೊಮಸ್ , ಬಾರ್‍ತೊಲೊಮೆವ್ ಅನಿ ಮಾತೆವ್, ಅಲ್ಫೆವಾಚೊ ಲೆಕ್ ಜಾಕೊಬ್ ಅನಿ ಹೊರಾಟ್ ಕರ್‍ತಲೊ ಸಿಮಾವ್ ಅನಿ ಜಾಕೊಬಾಚೊ ಲೆಕ್ ಜುದ್ ಯೆವ್ಡೆ ಜನಾ ಖೊಲಿತ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 1:13
45 ತಿಳಿವುಗಳ ಹೋಲಿಕೆ  

ನಾವು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು.


ಅವನು ತಕ್ಕ ಸಾಮಾನಿಟ್ಟಿರುವ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ಸಿದ್ಧಮಾಡಿರಿ ಎಂದು ಹೇಳಿ ಕಳುಹಿಸಿದನು.


ಅವನು ತಕ್ಕ ಸಾಮಾನೆಲ್ಲಾ ಸಿದ್ಧವಾಗಿ ಇಟ್ಟಿರುವ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ನಮಗೆ ಸಿದ್ಧಮಾಡಿರಿ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟನು.


ಆತನು [ಅಲ್ಲಿಂದ] ಹೋಗುತ್ತಿರುವಾಗ ಸುಂಕಕ್ಕೆ ಕೂತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎದ್ದು ಆತನ ಹಿಂದೆ ಹೋದನು.


ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದರಿರುವ [ಇಸ್ರಾಯೇಲ್] ಹನ್ನೆರಡು ಕುಲದವರಿಗೆ ಬರೆಯುವದು. ನಿಮಗೆ ಶುಭವಾಗಲಿ.


ಆದರೆ ಅವನು ಸುಮ್ಮಗಿರ್ರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರೆದುಕೊಂಡು ಬಂದ ರೀತಿಯನ್ನು ವಿವರಿಸಿ ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರರೆಲ್ಲರಿಗೂ ತಿಳಿಸಿರೆಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.


ಪೇತ್ರನು ಅವರಿಗೆ - ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ;


ಯೇಸು ಕ್ರಿಸ್ತನ ದಾಸನೂ ಯಾಕೋಬನ ತಮ್ಮನೂ ಆಗಿರುವ ಯೂದನು ತಂದೆಯಾದ ದೇವರಲ್ಲಿ ಪ್ರಿಯರಾದವರೂ ಯೇಸು ಕ್ರಿಸ್ತನಿಗಾಗಿ ಕಾಯಲ್ಪಟ್ಟವರೂ ಆಗಿರುವವರಿಗೆ ಬರೆಯುವದೇನಂದರೆ -


ಸಭಾಸ್ತಂಭಗಳೆಂದು ಹೆಸರುಗೊಂಡಿರುವ ಯಾಕೋಬ ಕೇಫ ಯೋಹಾನರು ಕಂಡು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳುಕೊಂಡು ಐಕ್ಯವನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬನಿಗೂ ಬಲಗೈ ಕೊಟ್ಟು - ನೀವು ಅನ್ಯಜನರ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.


ಕರ್ತನ ತಮ್ಮನಾದ ಯಾಕೋಬನನ್ನಲ್ಲದೆ ಅಪೊಸ್ತಲರಲ್ಲಿ ಬೇರೆ ಯಾರನ್ನೂ ಕಾಣಲಿಲ್ಲ.


ಅವರು ಮಾತಾಡುವದನ್ನು ಮುಗಿಸಿದ ಮೇಲೆ ಯಾಕೋಬನು ಆ ಪ್ರಸ್ತಾಪವನ್ನು ಹಿಡಿದು ಹೇಳಿದ್ದೇನಂದರೆ -


ಅದಕ್ಕೆ ಪೇತ್ರ ಯೋಹಾನರು ಅವರಿಗೆ - ದೇವರ ಮಾತನ್ನು ಕೇಳುವದಕ್ಕಿಂತಲೂ ನಿಮ್ಮ ಮಾತನ್ನು ಕೇಳುವದು ದೇವರ ಮುಂದೆ ನ್ಯಾಯವೋ ಏನು? ನೀವೇ ತೀರ್ಪುಮಾಡಿಕೊಳ್ಳಿರಿ;


ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು.


ಆಗ ಪೇತ್ರನು ಹನ್ನೊಂದು ಮಂದಿ ಅಪೊಸ್ತಲರ ಸಹಿತ ಎದ್ದು ನಿಂತು ಗಟ್ಟಿಯಾದ ಧ್ವನಿಯಿಂದ ಅವರಿಗೆ ಹೀಗೆ ಪ್ರಸಂಗ ಮಾಡಿದನು - ಯೆಹೂದ್ಯರೇ, ಯೆರೂಸಲೇವಿುನಲ್ಲಿ ವಾಸವಾಗಿರುವ ಎಲ್ಲಾ ಜನರೇ, ಈ ಸಂಗತಿಯು ಏನೆಂದು ನಿಮಗೆ ಗೊತ್ತಾಗುವ ಹಾಗೆ ನನ್ನ ಮಾತಿಗೆ ಕಿವಿಗೊಡಿರಿ;


ತನ್ನನ್ನು ತೋರಿಸಿಕೊಂಡ ರೀತಿ ಯಾವದಂದರೆ - ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಕುಮಾರರೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿದ್ದರು.


ಆಗ ಬಾಗಲು ಕಾಯುವ ದಾಸಿಯು - ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನೇನು? ಎಂದು ಪೇತ್ರನನ್ನು ಕೇಳಲು ಅವನು - ಅಲ್ಲ ಅಂದನು.


ಆಗ ದಿದುಮನೆಂಬ ತೋಮನು ಜೊತೇ ಶಿಷ್ಯರಿಗೆ - ನಾವು ಸಹ ಹೋಗಿ ಆತನೊಡನೆ ಸಾಯೋಣ ಎಂದು ಹೇಳಿದನು.


ಬೆಚ್ಚಿಬೆರಗಾಗಿ ಮನಗುಂದಿದವನಾದನು.


ಆರು ದಿವಸಗಳಾದ ಮೇಲೆ ಯೇಸು ಪೇತ್ರ ಯಾಕೋಬ ಯೋಹಾನರನ್ನು ಮಾತ್ರ ವಿಂಗಡವಾಗಿ ಕರಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣ ಮುಂದೆ ಆತನ ರೂಪ ಬೇರೆಯಾಯಿತು.


ಮತ್ತು ಆತನು ಪೇತ್ರ, ಯಾಕೋಬ, ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರಗೊಡಲಿಲ್ಲ.


ಯೇಸು ಅಲ್ಲಿಂದ ಹೋಗುತ್ತಿರುವಾಗ ಸುಂಕಕ್ಕೆ ಕೂತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.


ಸಭೆಯ ಹಿರಿಯನು ದೇವರಾದುಕೊಂಡವರಾದ ಅಮ್ಮನವರಿಗೂ ಆಕೆಯ ಮಕ್ಕಳಿಗೂ ಬರೆಯುವದೇನಂದರೆ - ನಮ್ಮಲ್ಲಿ ನೆಲೆಗೊಂಡಿರುವಂಥ ಮತ್ತು ಸದಾಕಾಲವೂ ನಮ್ಮೊಂದಿಗಿರುವಂಥ ಸತ್ಯದ ನಿವಿುತ್ತ ನಾನು ನಿಮ್ಮನ್ನು ಸತ್ಯವಾಗಿ ಪ್ರೀತಿಸುತ್ತೇನೆ; ನಾನು ಮಾತ್ರವಲ್ಲದೆ ಸತ್ಯವನ್ನು ತಿಳಿದಿರುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ.


ತರುವಾಯ ಆತನು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು.


ಯೂದನು (ಇವನು ಇಸ್ಕರಿಯೋತನಲ್ಲ) - ಸ್ವಾಮೀ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವದಕ್ಕೆ ಏನು ಸಂಭವಿಸಿತು ಎಂದು ಕೇಳಿದ್ದಕ್ಕೆ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು