Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 9:13 - ಕನ್ನಡ ಸತ್ಯವೇದವು J.V. (BSI)

13 ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದದರಿಂದ ಅವನು ಯೆರೂಸಲೇವಿುನಲ್ಲೇ ವಾಸಿಸಿದನು. ಅವನ ಎರಡು ಕಾಲುಗಳೂ ಕುಂಟಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದರಿಂದ ಅವನು ಯೆರೂಸಲೇಮಿನಲ್ಲೇ ವಾಸಮಾಡಿದನು. ಅವನ ಎರಡು ಕಾಲುಗಳು ಕುಂಟಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದುದರಿಂದ ಅವನು ಜೆರುಸಲೇಮಿನಲ್ಲೇ ವಾಸಿಸಿದನು. ಅವನ ಎರಡು ಕಾಲುಗಳೂ ಕುಂಟಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಮೆಫೀಬೋಶೆತನ ಎರಡೂ ಕಾಲುಗಳು ಕುಂಟಾಗಿದ್ದವು. ಮೆಫೀಬೋಶೆತನು ಜೆರುಸಲೇಮಿನಲ್ಲಿ ನೆಲೆಸಿದ್ದನು. ಅವನು ಪ್ರತಿದಿನವೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದ್ದುದರಿಂದ ಯೆರೂಸಲೇಮಿನಲ್ಲೇ ವಾಸವಾಗಿದ್ದನು. ಅವನಿಗೆ ಎರಡೂ ಕಾಲು ಕುಂಟಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 9:13
7 ತಿಳಿವುಗಳ ಹೋಲಿಕೆ  

ಆಗ ದಾವೀದನು ಅವನಿಗೆ - ಹೆದರಬೇಡ; ನಿನ್ನ ತಂದೆಯಾದ ಯೋನಾತಾನನನ್ನು ನೆನಸಿ ನಿನಗೆ ದಯೆತೋರಿಸುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂವಿುಯನ್ನೆಲ್ಲಾ ನಿನಗೆ ಹಿಂದಕ್ಕೆ ಕೊಡುತ್ತೇನೆ; ಮತ್ತು ನೀನು ಪ್ರತಿದಿನ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು ಎಂದು ಹೇಳಿದನು.


ಅರಸನು ಅವನಿಗೆ - ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆತೋರಿಸುತ್ತೇನೆ ಅಂದನು. ಆಗ ಚೀಬನು ಅರಸನಿಗೆ - ಯೋನಾತಾನನಿಗೆ ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ ಎಂದು ಹೇಳಿದನು.


ಅವನಿಗೆ ಮೀಕನೆಂಬೊಬ್ಬ ಚಿಕ್ಕ ಮಗನಿದ್ದನು; ಚೀಬನ ಮನೆಯವರೆಲ್ಲರೂ ಅವನ ಸೇವಕರು.


ಯೆಹೋಯಾಖೀನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ ಜೀವದಿಂದಿರುವವರೆಗೂ ಅರಸನ ಪಂಙ್ತಿಯಲ್ಲಿ ಊಟಮಾಡುತ್ತಿದ್ದನು.


ಸೌಲನ ಮಗನಾದ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಕುಂಟ ಮಗನಿದ್ದನು. ಅವನು ಕುಂಟನಾದದ್ದು ಹೇಗಂದರೆ - ಸೌಲಯೋನಾತಾನರು ಸತ್ತರೆಂಬ ವರ್ತಮಾನವು ಇಜ್ರೇಲಿನಿಂದ ಬಂದಾಗ ಐದು ವರುಷದವನಾಗಿದ್ದ ಅವನನ್ನು ಅವನ ದಾದಿಯು ತೆಗೆದುಕೊಂಡು ಅವಸರದಿಂದ ಓಡಿಹೋಗುವಾಗ ಅವನು ಬಿದ್ದು ಕುಂಟನಾದನು.


ಅವನು ಹಾಗೆ ಮಾಡದೆ ನನ್ನ ಒಡೆಯನಾದ ಅರಸನ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದನು. ಅರಸನು ದೇವದೂತನ ಹಾಗಿರುತ್ತಾನೆ, ತನಗೆ ಸರಿಕಂಡದ್ದನ್ನು ಮಾಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು