Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 7:26 - ಕನ್ನಡ ಸತ್ಯವೇದವು J.V. (BSI)

26 ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲ್‍ದೇವರು ಎಂಬ ನಿನ್ನ ನಾಮಧೇಯಗಳಿಗೆ ಸದಾಕಾಲವೂ ಮಹಿಮೆಯುಂಟಾಗಲಿ. ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲರ ದೇವರು ಎಂಬ ನಿನ್ನ ನಾಮಧೇಯಗಳಿಗೆ ಸದಾಕಾಲವೂ ಮಹಿಮೆಯುಂಟಾಗಲಿ. ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ‘ಸರ್ವಶಕ್ತರಾದ ಸರ್ವೆಶ್ವರ, ಇಸ್ರಯೇಲರ ದೇವರು,’ ಎಂಬ ತಮ್ಮ ನಾಮಧೇಯಗಳಿಗೆ ಸದಾಕಾಲವೂ ಮಹಿಮೆ ಉಂಟಾಗಲಿ! ತಮ್ಮ ದಾಸ ದಾವೀದನ ಮನೆತನವು ನಿಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆಗ ನಿನ್ನ ಹೆಸರು ಎಂದೆಂದೂ ಗೌರವಿಸಲ್ಪಡುತ್ತದೆ. ಜನರೆಲ್ಲರೂ ‘ಸರ್ವಶಕ್ತನಾದ ಯೆಹೋವನೇ ಇಸ್ರೇಲರ ದೇವರು!’ ಎಂದು ಹೇಳುವರು. ಅಲ್ಲದೆ ‘ನಿನ್ನ ಸೇವಕನಾದ ದಾವೀದನ ಕುಟುಂಬವು ನಿನ್ನ ಸನಿಧಿಯಲ್ಲಿ ಸ್ಥಿರವಾಗುವುದು’ ಎಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಹೀಗೆ ನಿಮ್ಮ ಹೆಸರು ಎಂದೆಂದಿಗೂ ಶ್ರೇಷ್ಠವಾಗಿರುತ್ತದೆ. ಆಗ ಜನರು, ‘ಸೇನಾಧೀಶ್ವರ ಯೆಹೋವ ದೇವರು ಇಸ್ರಾಯೇಲರ ದೇವರು,’ ಎಂದು ಹೇಳುವರು. ಇದಲ್ಲದೆ ನಿಮ್ಮ ಸೇವಕನಾದ ದಾವೀದನ ಮನೆಯು ನಿಮ್ಮ ಮುಂದೆ ಸ್ಥಿರವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 7:26
12 ತಿಳಿವುಗಳ ಹೋಲಿಕೆ  

ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು -


ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಅದಕ್ಕೆ - ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು ಎಂದು ಆಕಾಶವಾಣಿಯಾಯಿತು.


ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿಸತ್ಯತೆಗಳ ನಿವಿುತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು.


ಅವನ ಸಂತತಿಯು ಶಾಶ್ವತವಾಗಿ ಇರುವದು; ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿದ್ದು


ಇಷ್ಮಾಯೇಲನಿದ್ದಾನಲ್ಲಾ, ಅವನೇ ನಿನ್ನ ದಯೆಹೊಂದಿ ಬಾಳಲಿ ಎನ್ನಲು ದೇವರು -


ದೇವರೇ, ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸು. ಅದು ಸದಾ ಸ್ಥಿರವಾಗಿರಲಿ.


ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ವೇದಿಯ ಹತ್ತಿರ ಬಂದು - ಅಬ್ರಹಾಮ್ ಇಸಾಕ್ ಇಸ್ರಾಯೇಲ್ಯರ ದೇವರೇ, ಯೆಹೋವನೇ, ನೀನೋಬ್ಬನೇ ಇಸ್ರಾಯೇಲ್ಯರ ದೇವರಾಗಿರುತ್ತೀ ಎಂಬದನ್ನೂ ನಾನು ನಿನ್ನ ಸೇವಕನಾಗಿರುತ್ತೇನೆಂಬದನ್ನೂ ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬದನ್ನೂ ಈಹೊತ್ತು ತೋರಿಸಿ ಕೊಡು.


ಕಿವಿಗೊಡು; ಯೆಹೋವನೇ, ಕಿವಿಗೊಡು; ಯೆಹೋವನಾದ ನೀನೊಬ್ಬನೇ ದೇವರೂ ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ಆಗಿರುತ್ತೀ ಎಂಬದನ್ನು ಇವರಿಗೆ ತಿಳಿಯಪಡಿಸು ಎಂದು ಪ್ರಾರ್ಥಿಸಿದನು.


ಅವನು ನಿನ್ನ ಸಾನ್ನಿಧ್ಯವನ್ನು ಪಡೆದು ಸದಾಕಾಲವೂ ಸಿಂಹಾಸನಾರೂಢನಾಗಿರಲಿ; ನಿನ್ನ ಪ್ರೇಮಸತ್ಯತೆಗಳು ಅವನ ಬೆಂಗಾವಲಾಗಿರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು