Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 5:20 - ಕನ್ನಡ ಸತ್ಯವೇದವು J.V. (BSI)

20 ಅವನು ಹೋಗಿ ಅವರನ್ನು ಸೋಲಿಸಿ ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆಂದು ಹೇಳಿ ಆ ಯುದ್ಧಸ್ಥಳಕ್ಕೆ ಬಾಳ್‍ಪೆರಾಚೀಮೆಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆದುದರಿಂದ ಅವನು ಹೋಗಿ ಅವರನ್ನು ಸೋಲಿಸಿದನು. “ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ಸರ್ವೇಶ್ವರ ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ ಆ ಯುದ್ಧಸ್ಥಳಕ್ಕೆ, ‘ಬಾಳ್ ಪೆರಾಚೀಮ್’ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆಗ ದಾವೀದನು ಬಾಳ್‌ಪೆರಾಚೀಮ್‌ಗೆ ಬಂದನು. ಅಲ್ಲಿ ಅವನು ಫಿಲಿಷ್ಟಿಯರನ್ನು ಸೋಲಿಸಿದನು. ದಾವೀದನು, “ಕಟ್ಟೆಯೊಡೆದ ಪ್ರವಾಹವು ನುಗ್ಗಿ ನಾಶಮಾಡುವಂತೆ ಯೆಹೋವನು ನನ್ನ ಶತ್ರುಗಳನ್ನು ನನ್ನ ಎದುರಿನಲ್ಲೇ ನಾಶಪಡಿಸಿದನು” ಎಂದನು. ಆದ್ದರಿಂದ ಅವನು ಆ ಸ್ಥಳಕ್ಕೆ “ಬಾಳ್‌ಪೆರಾಚೀಮ್” ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆದಕಾರಣ ದಾವೀದನು ಬಾಳ್ ಪೆರಾಜಿಮ್ ಎಂಬಲ್ಲಿಗೆ ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿದನು. ಆಗ ದಾವೀದನು, “ಪ್ರವಾಹವು ಕೊಚ್ಚಿಕೊಂಡು ಹೋಗುವಹಾಗೆ, ಯೆಹೋವ ದೇವರು ನನ್ನ ಶತ್ರುಗಳನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾರೆ,” ಎಂದು ಹೇಳಿ, ಆ ಸ್ಥಳಕ್ಕೆ ಬಾಳ್ ಪೆರಾಜಿಮ್ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 5:20
5 ತಿಳಿವುಗಳ ಹೋಲಿಕೆ  

ಯೆಹೋವನು ಈಗ ಅಪರೂಪವಾದ ತನ್ನ ಕೆಲಸವನ್ನು ನಡಿಸಬೇಕೆಂತಲೂ ಅಪೂರ್ವವಾದ ತನ್ನ ಕಾರ್ಯವನ್ನು ನೆರವೇರಿಸಬೇಕೆಂತಲೂ ಪೆರಾಚೀಮ್ ಬೆಟ್ಟದಲ್ಲಿ ಎದ್ದಂತೆ ಏಳುವನು, ಗಿಬ್ಯೋನ್ ತಗ್ಗಿನಲ್ಲಿ ರೋಷಗೊಂಡಂತೆ ರೋಷಗೊಳ್ಳುವನು.


ಇಸ್ರಾಯೇಲ್ಯರೆಲ್ಲರೂ ತಮ್ಮತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಾಯೆಲ್‍ಕುಲಗಳಲ್ಲೆಲ್ಲಾ ಜನರು ತಮ್ಮ ತಮ್ಮೊಳಗೆ ಜಗಳವಾಡಿ - ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು.


ಅಷ್ಟರಲ್ಲಿ ಬಾಳ್‍ಪೆರಾಚೀವಿುಗೆ ಬಂದ ಅವರನ್ನು ದಾವೀದನು ಸೋಲಿಸಿ - ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆಂದು ಹೇಳಿದ್ದರಿಂದ ಆ ಯುದ್ಧಸ್ಥಳಕ್ಕೆ ಬಾಳ್‍ಪೆರಾಚೀಮೆಂದು ಹೆಸರಾಯಿತು.


ದೇವರೇ, ಕೋಪದಿಂದ ನಮ್ಮನ್ನು ತಳ್ಳಿಕೆಡವಿ ಬಿಟ್ಟಿದ್ದೀ; ನಮ್ಮನ್ನು ಎತ್ತಿ ನಿಲ್ಲಿಸು.


ನಿನ್ನ ಪ್ರಜೆಯ ರಕ್ಷಣೆಗೆ, ನಿನ್ನ ಅಭಿಷಿಕ್ತನ ಉದ್ಧಾರಕ್ಕೆ ಹೊರಟಿದ್ದೀ; ತಲೆಯನ್ನು ಕುತ್ತಿಗೆಯ ಬುಡದವರೆಗೆ ಹೊಡೆದುಹಾಕಿದ ಹಾಗೆ ತಳಾದಿಯು ಬೈಲಾಗುವಷ್ಟರ ಮಟ್ಟಿಗೆ ನೀನು ದುಷ್ಟನ ಮನೆಯನ್ನು ಹೊಡೆದಿದ್ದೀ. ಸೆಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು