2 ಸಮುಯೇಲ 3:21 - ಕನ್ನಡ ಸತ್ಯವೇದವು J.V. (BSI)21 ಅಬ್ನೇರನು ದಾವೀದನಿಗೆ - ನಾನು ಹೊರಟುಹೋಗಿ ಇಸ್ರಾಯೇಲ್ಯರನ್ನೆಲ್ಲಾ ಕೂಡಿಸಿ ನನ್ನ ಒಡೆಯನಾದ ಅರಸನ ಬಳಿಗೆ ಕರಕೊಂಡುಬರುವೆನು; ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು; ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು ಎಂದು ಹೇಳಲು ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಾಯೇಲರನ್ನೆಲ್ಲಾ ಕೂಡಿಸಿ, ನನ್ನ ಒಡೆಯನಾದ ಅರಸನ ಬಳಿಗೆ ಕರೆದುಕೊಂಡು ಬರುವೆನು. ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು. ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು” ಎಂದು ಹೇಳಲು ದಾವೀದನು ಅವನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಯೇಲರನ್ನೆಲ್ಲಾ ಕೂಡಿಸಿ ನನ್ನ ಒಡೆಯರಾದ ಅರಸರ ಬಳಿಗೆ ಕರೆದುಕೊಂಡು ಬರುವೆನು; ಅವರು ನಿಮ್ಮ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನ ಮಾಡಬಹುದು,” ಎಂದು ಹೇಳಿದನು. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಅಬ್ನೇರನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ನಾನು ಹೋಗಿ ಎಲ್ಲಾ ಇಸ್ರೇಲರನ್ನೂ ನಿನ್ನ ಬಳಿಗೆ ಕರೆತರುತ್ತೇನೆ; ನಂತರ ಅವರು ನಿನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ನೀನು ನಿನ್ನ ಇಷ್ಟದಂತೆ ಸಮಸ್ತ ಇಸ್ರೇಲನ್ನು ಆಳಬಹುದು” ಎಂದು ಹೇಳಿದನು. ದಾವೀದನು ಅಬ್ನೇರನನ್ನು ಕಳುಹಿಸಿದನು. ಅಬ್ನೇರನು ಸಮಾಧಾನದಿಂದ ಹೋದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಆಗ ಅಬ್ನೇರನು ದಾವೀದನಿಗೆ, “ಸಮಸ್ತ ಇಸ್ರಾಯೇಲರು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವ ಹಾಗೆಯೂ, ನಿನ್ನ ಪ್ರಾಣವು ಇಚ್ಛೈಸುವ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ, ಸಮಸ್ತ ಇಸ್ರಾಯೇಲರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು,” ಎಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು. ಅಧ್ಯಾಯವನ್ನು ನೋಡಿ |