Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 22:9 - ಕನ್ನಡ ಸತ್ಯವೇದವು J.V. (BSI)

9 ಆತನ ಮೂಗಿನಿಂದ ಹೊಗೆಯು ಬಂತು; ಆತನ ಬಾಯಿಂದ ಅಗ್ನಿಜ್ವಾಲೆಹೊರಟು ಸಿಕ್ಕಿದ್ದೆಲ್ಲವನ್ನೂ ದಹಿಸಿ ಕೆಂಡವನ್ನಾಗಿ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆತನ ಮೂಗಿನಿಂದ ಹೊಗೆಯು ಬಂದಿತು. ಆತನ ಬಾಯಿಂದ ಅಗ್ನಿಜ್ವಾಲೆಯು ಹೊರಟು ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಹೊರಬಂದಿತು ಹೊಗೆ ಆತನ ಮೂಗಿನಿಂದ ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ ಕಾದುಕೆಂಡವಾಯಿತು ಅದಕ್ಕೆದುರಿಗೆ ಸಿಕ್ಕಿದುದೆಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆತನ ಮೂಗಿನ ಹೊಳ್ಳೆಗಳಿಂದ ಹೊಗೆಯು ಹೊರಬಂದಿತು. ಬೆಂಕಿಕಿಡಿಯ ಜ್ವಾಲೆಗಳು ಆತನ ಬಾಯಿಂದ ಹೊರಬಂದವು; ದಹಿಸುವ ಬೆಂಕಿಯು ಆತನ ಬಾಯೊಳಗಿಂದ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಮೂಗಿನಿಂದ ಹೊಗೆ ಬಂದಂತೆಯೂ, ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 22:9
17 ತಿಳಿವುಗಳ ಹೋಲಿಕೆ  

ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.


ಆತನ ಮುಂದೆ ಮುಂದೆ ವ್ಯಾಧಿಯು ನಡೆಯುತ್ತದೆ; ಆತನ ಹೆಜ್ಜೆಜಾಡುಗಳಲ್ಲಿ ಜ್ವರಜ್ವಾಲೆಯು ಏಳುತ್ತದೆ.


ನಿನ್ನ ಶತ್ರುಗಳ ಕೈಗೆ ಕೊಟ್ಟು ನೀನು ನೋಡದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವದು.


ಹೀಗಿರಲು ಸೇನಾಧೀಶ್ವರನಾದ ಯೆಹೋವನೆಂಬ ದೇವರು ಇಂತೆನ್ನುತ್ತಾನೆ - ನೀವು ಹೀಗೆ ಅಂದುಕೊಂಡದ್ದರಿಂದ ಆಹಾ, ನಾನು ಪ್ರವಾದಿಯ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಯೂ ಈ ಜನರನ್ನು ಸೌದೆಯನ್ನಾಗಿಯೂ ಮಾಡುವೆನು, ಅದು ಅವರನ್ನು ತಿಂದುಬಿಡುವದು.


ಇಗೋ, ಯೆಹೋವನಾಮಧೇಯನು ದೂರದಿಂದ ಬರುತ್ತಾನೆ; ಆತನ ಕೋಪವು ಉರಿಯುತ್ತಿದೆ, ಅದರಿಂದೇಳುವ ಹೊಗೆಯು ದಟ್ಟವಾಗಿದೆ; ಆತನ ತುಟಿಗಳು ರೋಷದಿಂದ ತುಂಬಿವೆ, ಆತನ ನಾಲಿಗೆಯು ನುಂಗುವ ಅಗ್ನಿ;


ಆಗ ಯೆಹೋವನೇ, ನಿನ್ನ ಗದರಿಕೆಯಿಂದಲೂ ನಿನ್ನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ತಿವಾರಗಳು ತೋರಿಬಂದವು.


ಆತನ ಮೂಗಿನಿಂದ ಹೊಗೆಯು ಬಂತು; ಆತನ ಬಾಯಿಂದ ಅಗ್ನಿಜ್ವಾಲೆ ಹೊರಟು ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.


ದೇವರ ಶ್ವಾಸದಿಂದ ನಾಶವಾಗುತ್ತಾರೆ, ಆತನ ಸಿಟ್ಟೆಂಬ ಗಾಳಿಯಿಂದ ಹಾಳಾಗುತ್ತಾರೆ.


ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು, ಭೂಮಂಡಲದ ಅಸ್ತಿವಾರಗಳು ತೋರಬಂದವು.


ಆತನ ಸಾನ್ನಿಧ್ಯಪ್ರಕಾಶದಿಂದ ಉರಿಗೆಂಡಗಳು ಹೊರಟವು.


ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ; ಅದು ಪಾತಾಳದವರೆಗೂ ವ್ಯಾಪಿಸಿ ಬೆಳೆ ಸಹಿತವಾಗಿ ಭೂವಿುಯನ್ನೂ ಬುಡಸಹಿತವಾಗಿ ಬೆಟ್ಟಗಳನ್ನೂ ದಹಿಸಿಬಿಡುವದು.


ಯೆಹೋವನ ತೇಜಸ್ಸು ಬೆಟ್ಟದ ಶಿಖರದ ಮೇಲೆ ಪ್ರಜ್ವಲಿಸುವ ಬೆಂಕಿಯೋಪಾದಿಯಲ್ಲಿ ಇಸ್ರಾಯೇಲ್ಯರಿಗೆ ಕಾಣಿಸಿತು.


ಯೆಹೋವನು ಬೆಂಕಿಯೊಳಗೆ ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದು ಬಂದದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು; ಅದಲ್ಲದೆ ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.


ಪುರಾತನ ಕಾಲದಿಂದಲೂ ಅಗ್ನಿಕುಂಡವು ಸಿದ್ಧವಾಗಿದೆ; ಹೌದು, ರಾಜನಿಗೆ ಅಣಿಯಾಗಿದೆ; ಅದನ್ನು ಆಳವಾಗಿಯೂ ಅಗಲವಾಗಿಯೂ ಮಾಡಿದ್ದಾನೆ; ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಬೇಕಾದಷ್ಟು ಕೊರಡುಗಳೂ ಇವೆ; ಯೆಹೋವನ ಶ್ವಾಸವು ಗಂಧಕದ ಪ್ರವಾಹದೋಪಾದಿಯಲ್ಲಿ ಅದನ್ನು ಉರಿಸುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು