2 ಸಮುಯೇಲ 19:11 - ಕನ್ನಡ ಸತ್ಯವೇದವು J.V. (BSI)11 ಇಸ್ರಾಯೇಲ್ಯರು ಈ ಪ್ರಕಾರ ಮಾತಾಡಿಕೊಂಡ ವರ್ತಮಾನವು ದಾವೀದನಿಗೆ ಮುಟ್ಟಲು ಅವನು ಯಾಜಕರಾದ ಚಾದೋಕ್ ಎಬ್ಯಾತಾರರಿಗೆ - ನೀವು ನನ್ನ ಹೆಸರಿನಲ್ಲಿ ಯೆಹೂದ ಕುಲದ ಹಿರಿಯರಿಗೆ - ಅರಸನಾದ ನನ್ನನ್ನು ತಿರಿಗಿ ಅರಮನೆಗೆ ಕರಕೊಂಡು ಹೋಗುವದರಲ್ಲಿ ನೀವು ಹಿಂದುಳಿದಿರುವದೇಕೆ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಇಸ್ರಾಯೇಲರು ಈ ಪ್ರಕಾರ ಮಾತನಾಡಿಕೊಂಡ ವರ್ತಮಾನವು ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಮತ್ತು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದ ಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ತಿರುಗಿ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ತಡಮಾಡುತ್ತಿರುವುದೇಕೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಇಸ್ರಯೇಲರು ಹೀಗೆ ಮಾತಾಡಿಕೊಂಡ ಸಮಾಚಾರ ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ಮತ್ತೆ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವೇಕೆ ಹಿಂದುಳಿದಿರುವಿರಿ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಈ ಸುದ್ದಿ ರಾಜನಿಗೆ ಮುಟ್ಟಿತು. ಆಗ ಅವನು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಸಂದೇಶವನ್ನು ಕಳುಹಿಸಿದನು. ಅವನು ಹೇಳಿದ್ದೇನೆಂದರೆ, “ಯೆಹೂದದ ನಾಯಕರೊಂದಿಗೆ ಮಾತಾಡಿರಿ. ಅವರಿಗೆ, ‘ಅರಸನಾದ ನನ್ನನ್ನು ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವು ಕೊನೆಯವರಾದದ್ದೇಕೆ? ನೋಡಿ, ರಾಜನನ್ನು ಹಿಂದೆ ಕರೆತರಬೇಕೆಂದು ಇಸ್ರೇಲರೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಆಗ ಅರಸನಾದ ದಾವೀದನು ಯಾಜಕರಾದ ಚಾದೋಕನ ಬಳಿಗೂ, ಅಬಿಯಾತರನ ಬಳಿಗೂ ಸೇವಕರನ್ನು ಕಳುಹಿಸಿ, “ನೀವು ಯೆಹೂದದ ಹಿರಿಯರಿಗೆ, ‘ಸಮಸ್ತ ಇಸ್ರಾಯೇಲಿನ ಮಾತು ಅರಸನಿಗೆ ಅವನ ಅರಮನೆಯಲ್ಲಿಯೇ ತಿಳಿದಿರುವಾಗ, ಅರಸನನ್ನು ಅವನ ಮನೆಗೆ ತಿರುಗಿ ಕರೆದುಕೊಂಡು ಬರುವಂತೆ ನೀವು ಹಿಂಜರಿದದ್ದೇನು? ಅಧ್ಯಾಯವನ್ನು ನೋಡಿ |