Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 18:1 - ಕನ್ನಡ ಸತ್ಯವೇದವು J.V. (BSI)

1 ತರುವಾಯ ಅರಸನಾದ ದಾವೀದನು ತನ್ನ ಹತ್ತಿರ ಇದ್ದ ಸೈನಿಕರನ್ನು ಲೆಕ್ಕಿಸಿ ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ನೇವಿುಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ತರುವಾಯ ಅರಸನಾದ ದಾವೀದನು ತನ್ನ ಬಳಿಯಲ್ಲಿ ಇದ್ದ ಸೈನಿಕರನ್ನು ಎಣಿಸಿ, ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಮತ್ತು ಶತಾಧಿಪತಿಗಳನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ತರುವಾಯ ಅರಸನಾದ ದಾವೀದನು ತನ್ನ ಹತ್ತಿರ ಇದ್ದ ಸೈನಿಕರನ್ನು ಎಣಿಸಿ ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ದಾವೀದನು ತನ್ನ ಜನರನ್ನು ಲೆಕ್ಕಮಾಡಿದನು. ಅವನು ಸಹಸ್ರಾಧಿಪತಿಗಳನ್ನು ಮತ್ತು ಶತಾಧಿಪತಿಗಳನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ದಾವೀದನು ತನ್ನ ಸಂಗಡದಲ್ಲಿದ್ದ ಜನರನ್ನು ಲೆಕ್ಕ ಮಾಡಿ, ಅವರ ಮೇಲೆ ಸಾವಿರ ಜನರಿಗೂ, ನೂರು ಜನರಿಗೂ ಅಧಿಪತಿಗಳನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 18:1
8 ತಿಳಿವುಗಳ ಹೋಲಿಕೆ  

ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇವಿುಸುವನು. ಇನ್ನು ಕೆಲವರು ಅವನ ಭೂವಿುಯನ್ನು ಉಳುವವರೂ ಪೈರನ್ನು ಕೊಯ್ಯುವವರೂ ಯುದ್ಧಾಯುಧ, ರಥಸಾಹಿತ್ಯ ಇವುಗಳನ್ನು ಮಾಡುವವರೂ ಆಗಬೇಕು.


ಅವನು ಬೆಳಿಗ್ಗೆ ಎದ್ದು ಇಸ್ರಾಯೇಲ್ಯರ ಹಿರಿಯರ ಸಂಗಡ ಸೈನ್ಯವನ್ನು ಕೂಡಿಸಿ ಅವರ ಮುಂದೆ ಆಯಿಗೆ ಹೊರಟನು.


ಮೋಶೆಯು ಯೆಹೋಶುವನಿಗೆ - ನೀನು ಭಟರನ್ನು ಆದುಕೊಂಡು ನಾಳೆ ನಮ್ಮ ಮುಂದೆ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡಬೇಕು; ನಾನು ದೇವದಂಡವನ್ನು ಕೈಯಲ್ಲಿ ಹಿಡುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು ಎಂದು ಹೇಳಿದನು.


ಅವನು ಇಸ್ರಾಯೇಲ್ಯರೆಲ್ಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ ಮಂದಿಯ ಮೇಲೆಯೂ ನೂರು ಮಂದಿಯ ಮೇಲೆಯೂ ಐವತ್ತು ಮಂದಿಯ ಮೇಲೆಯೂ ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇವಿುಸಿದನು.


ಆಗ ಮೋಶೆಯು ಯುದ್ಧಭೂವಿುಯಿಂದ ಬಂದ ಸೈನ್ಯದ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡು ಅವರಿಗೆ -


ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ - ಬೆನ್ಯಾಮೀನನ ಮಕ್ಕಳೇ, ಕೇಳಿರಿ; ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ಮಾಡುವದೇಕೆ? ಇಷಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಕೊಡುವನೋ ಎಲ್ಲರನ್ನೂ ಸಹಸ್ರಾಧಿಪತಿಗಳನ್ನಾಗಲಿ ಶತಾಧಿಪತಿಗಳನ್ನಾಗಲಿ ಮಾಡುವನೋ?


ಆದರೆ ನೀನು ಸಮಸ್ತ ಜನರೊಳಗೆ ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು ಅವರನ್ನು ಸಾವಿರ ಮಂದಿಯ ಮೇಲೆಯೂ ನೂರು ಮಂದಿಯ ಮೇಲೆಯೂ ಐವತ್ತು ಮಂದಿಯ ಮೇಲೆಯೂ ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇವಿುಸಬೇಕು.


ಸೈನ್ಯಾಧಿಪತಿಗಳು ಭಟರಿಗೆ ಈ ರೀತಿಯಾಗಿ ಹೇಳಿದನಂತರ ದಂಡಿನವರ ಮೇಲೆ ನಾಯಕರನ್ನು ನೇವಿುಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು