Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 15:23 - ಕನ್ನಡ ಸತ್ಯವೇದವು J.V. (BSI)

23 ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಣವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್‍ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಮುತ್ತಲಿನ ಜನರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯ ಮಾರ್ಗವನ್ನು ಹಿಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಇವರೆಲ್ಲರೂ ಬಹಳವಾಗಿ ನಡೆಯುವಾಗ ಸುತ್ತ-ಮುತ್ತಿನವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಜನರೆಲ್ಲರೂ ಜೋರಾಗಿ ಅಳುತ್ತಿದ್ದರು. ರಾಜನಾದ ದಾವೀದನು ಕಿದ್ರೋನ್ ಹಳ್ಳವನ್ನು ದಾಟಿಹೋದನು. ನಂತರ ಜನರೆಲ್ಲರೂ ಅರಣ್ಯಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಜನರೆಲ್ಲಾ ದಾಟಿಹೋಗುವಾಗ, ದೇಶದವರೆಲ್ಲಾ ಮಹಾಧ್ವನಿಯಿಂದ ಅತ್ತರು. ಅರಸನು ಕಿದ್ರೋನ್ ಹಳ್ಳವನ್ನು ದಾಟಿದನು. ಹಾಗೆಯೇ ಅವನ ಜನರೆಲ್ಲರೂ ದಾಟಿ ಮರುಭೂಮಿಯ ಮಾರ್ಗವಾಗಿ ನಡೆದುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 15:23
12 ತಿಳಿವುಗಳ ಹೋಲಿಕೆ  

ಅರಸನು ಚೀಬನನ್ನು - ಇವುಗಳನ್ನು ಯಾಕೆ ತಂದಿ ಎಂದು ಕೇಳಲು ಅವನು - ಕತ್ತೆಗಳನ್ನು ಅರಸನ ಮನೆಯವರು ಸವಾರಿಮಾಡುವದಕ್ಕಾಗಿಯೂ ಹಣ್ಣು ರೊಟ್ಟಿಗಳನ್ನು ಆಳುಗಳು ತಿನ್ನುವದಕ್ಕಾಗಿಯೂ ದ್ರಾಕ್ಷಾರಸವನ್ನು ಅರಣ್ಯದಲ್ಲಿ ದಣಿದವರು ಕುಡಿಯುವದಕ್ಕಾಗಿಯೂ ತಂದಿದ್ದೇನೆ ಎಂದು ಉತ್ತರಕೊಟ್ಟನು.


ಯೇಸು ಇದನ್ನು ಹೇಳಿದ ಮೇಲೆ ತನ್ನ ಶಿಷ್ಯರ ಸಂಗಡ ಕೆದ್ರೋನ್ ಹಳ್ಳದ ಆಚೆಗೆ ಹೊರಟುಹೋದನು. ಅಲ್ಲಿ ಒಂದು ತೋಟವಿತ್ತು; ಅದರೊಳಕ್ಕೆ ಆತನೂ ಆತನ ಶಿಷ್ಯರೂ ಹೋದರು.


ನೀನು ಇದನ್ನು ಬಿಟ್ಟು ಕಿದ್ರೋನ್‍ಹಳ್ಳದ ಆಚೆಗೆ ಹೋದಿಯಾದರೆ ಅದೇ ದಿವಸದಲ್ಲಿ ನಿನಗೆ ಮರಣಶಿಕ್ಷೆಯಾಗುವದೆಂದು ತಿಳಿದುಕೋ; ಮತ್ತು ಆ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರುವದು ಎಂದು ಹೇಳಿದನು.


ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.


ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯ ಪ್ರದೇಶಗಳಲ್ಲಿ ಇದ್ದನು.


ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ.


ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು -


ಯಾಜಕರು ಯೆಹೋವನ ಆಲಯವನ್ನು ಶುದ್ಧಮಾಡುವದಕ್ಕೋಸ್ಕರ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.


ಇವನ ತಾಯಿಯಾದ ಮಾಕಳು ಅಶೇರದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದದರಿಂದ ಆಸನು ಆಕೆಯನ್ನು ಗದ್ದುಗೆಯಿಂದ ತಳ್ಳಿ ಆ ಮೂರ್ತಿಯನ್ನು ಕಡಿದು ಕಿದ್ರೋನ್‍ಹಳ್ಳದ ಹತ್ತಿರ ಸುಡಿಸಿದನು.


ಆಗ ದಾವೀದನು ಅವನಿಗೆ - ಒಳ್ಳೇದು, ಮುಂದೆ ನಡೆ ಅಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನವನ್ನೂ ಕರಕೊಂಡು ಮುಂದೆ ನಡೆದನು.


ನಿವ್ಮಿುಂದ ವರ್ತಮಾನಬರುವ ತನಕ ನಾನು ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇರುವೆನು ಎಂದು ಹೇಳಿದನು.


ಆಗ ಬೂದಿ ಹೆಣ ಇವುಗಳಿಂದ ಹೊಲಸಾದ ತಗ್ಗೂ ಅಲ್ಲಿಂದ ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ ಇವುಗಳವರೆಗಿರುವ ಪ್ರದೇಶವೆಲ್ಲವೂ ಯೆಹೋವನಿಗೆ ಪರಿಶುದ್ಧ ಸ್ಥಾನವಾಗುವವು; ಪಟ್ಟಣವು ಇನ್ನು ಮೇಲೆ ಎಂದಿಗೂ ಕೀಳಲ್ಪಡದು, ಕೆಡವಲ್ಪಡದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು