Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 9:29 - ಕನ್ನಡ ಸತ್ಯವೇದವು J.V. (BSI)

29 ಸೊಲೊಮೋನನ ಉಳಿದ ಪೂರ್ವೋತ್ತರ ಚರಿತ್ರೆಯು ಪ್ರವಾದಿಯಾದ ನಾತಾನನ ಚರಿತ್ರೆ, ಶೀಲೋವಿನವನಾದ ಅಹೀಯನ ಪ್ರವಾದನೆ, ದಿವ್ಯದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನನ್ನು ಕುರಿತು ನುಡಿದ ದರ್ಶನೋಕ್ತಿ ಎಂಬ ಗ್ರಂಥಗಳಲ್ಲಿ ಬರೆದಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಸೊಲೊಮೋನನ ಉಳಿದ ಪೂರ್ವೋತ್ತರ ಚರಿತ್ರೆಯನ್ನು, ಪ್ರವಾದಿಯಾದ ನಾತಾನನ ಚರಿತ್ರೆ, ಶೀಲೋವಿನವನಾದ ಅಹೀಯನ ಪ್ರವಾದನೆಯ ಗ್ರಂಥ, ಹಾಗೂ ದಿವ್ಯದಾರ್ಶಿಕನಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನನ್ನು ಕುರಿತು ನುಡಿದ ದರ್ಶನೋಕ್ತಿ ಎಂಬ ಗ್ರಂಥಗಳಲ್ಲಿ ಬರೆದಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಸೊಲೊಮೋನನ ಉಳಿದ ಪೂರ್ವೋತ್ತರ ಚರಿತ್ರೆಯನ್ನು, ಪ್ರವಾದಿ ನಾತಾನನ ಚರಿತ್ರೆ ಶೀಲೋವಿನವನಾದ ಅಹೀಯನ ಪ್ರವಾದನೆ ಹಾಗೂ ದಿವ್ಯದರ್ಶಿಯಾದ ಇದ್ದೋವನು ನೆಬಾಟನ ಮಗ ಯಾರೊಬ್ಬಾಮನನ್ನು ಕುರಿತು ನುಡಿದ ದರ್ಶನೋಕ್ತಿ ಎಂಬ ಗ್ರಂಥಗಳಲ್ಲಿ ಬರೆದಿಡಲಾಗಿ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಸೊಲೊಮೋನನು ಪ್ರಾರಂಭದಿಂದ ಅಂತ್ಯದ ತನಕ ಮಾಡಿದ ಎಲ್ಲಾ ವಿಷಯಗಳನ್ನು ಪ್ರವಾದಿಯಾದ ನಾತಾನನು ಬರೆದ ಲೇಖನಗಳಲ್ಲಿಯೂ, ಶೀಲೋವದ ಅಹೀಯನ ಪ್ರವಾದನೆಯಲ್ಲಿಯೂ ಮತ್ತು ದೇವದರ್ಶಿಯಾದ ಇದ್ದೋವಿನ ದರ್ಶನಗಳ ಪುಸ್ತಕದಲ್ಲಿಯೂ ಬರೆಯಲಾಗಿದೆ. ದೇವದರ್ಶಿಯಾದ ಇದ್ದೋ, ನೆಬಾಟನ ಮಗನಾದ ಯಾರೊಬ್ಬಾಮನ ವಿಷಯವಾಗಿಯೂ ಬರೆದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಸೊಲೊಮೋನನ ಉಳಿದ ಕ್ರಿಯೆಗಳು, ಮೊದಲನೆಯವುಗಳೂ, ಕಡೆಯವುಗಳೂ ಪ್ರವಾದಿಯಾದ ನಾತಾನನ ಪುಸ್ತಕದಲ್ಲಿಯೂ, ಶೀಲೋವಿನವನಾದ ಅಹೀಯನ ಪ್ರವಾದನೆಯಲ್ಲಿಯೂ, ದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ವಿರೋಧವಾಗಿ ಹೇಳಿದ ದರ್ಶನಗಳಲ್ಲಿಯೂ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 9:29
15 ತಿಳಿವುಗಳ ಹೋಲಿಕೆ  

ದಾವೀದನ ಪೂರ್ವೋತ್ತರ ಚರಿತ್ರೆಯೂ ಅವನ ಆಳಿಕೆ, ಪರಾಕ್ರಮ, ಅವನಿಗೂ ಇಸ್ರಾಯೇಲ್ಯರಿಗೂ ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖದುಃಖ ಇವುಗಳ ವೃತ್ತಾಂತವೂ


ಒಂದು ದಿವಸ ಯಾರೊಬ್ಬಾಮನು ಯೆರೂಸಲೇವಿುನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶೀಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನಿಗೆ ಎದುರಾದನು. ಇವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ.


ಅಬೀಯನ ಉಳಿದ ಚರಿತ್ರೆಯೂ ಅವನ ನಡೆನುಡಿಗಳೂ ಪ್ರವಾದಿಯಾದ ಇದ್ದೋವಿನ ವ್ಯಾಖ್ಯಾನದಲ್ಲಿ ಬರೆದಿರುತ್ತವೆ.


ರೆಹಬ್ಬಾಮನ ಪೂರ್ವೋತ್ತರಕೃತ್ಯಗಳು ಪ್ರವಾದಿಯಾದ ಶೆಮಾಯ, ದರ್ಶಿಯಾದ ಇದ್ದೋ ಎಂಬವರ ಚರಿತ್ರೆಗಳ ವಂಶಾವಳಿಭಾಗದಲ್ಲಿ ಬರೆದಿರುತ್ತವೆ. ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.


ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಇವನ ಹತ್ತಿರ ಬಂದು ಹೇಳಿದ್ದೇನಂದರೆ - ಒಂದು ಊರಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಇನ್ನೊಬ್ಬನು ಬಡವನು.


ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ - ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷ ಮಾರ್ಪಡಿಸಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರ ಮೇಲೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.


ಆದರೆ ಯಾಜಕನಾದ ಚಾದೋಕ್, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಎಂಬವರೂ ದಾವೀದನ ಭಟರೂ ಅವನ ಪಕ್ಷದಲ್ಲಿರಲಿಲ್ಲ.


ಪ್ರವಾದಿಯಾದ ನಾತಾನನು ಯೆಹೋವನು ತನಗೆ ಆಜ್ಞಾಪಿಸಿದಂತೆ ಆತನಿಗೋಸ್ಕರವಾಗಿ ಆ ಹುಡುಗನಿಗೆ ಯೆದೀದ್ಯನು ಎಂದು ಹೆಸರಿಟ್ಟನು.


ಅರಸನಾದ ಸೊಲೊಮೋನನಿಗೆ ವಿರೋಧವಾಗಿ ಎದ್ದವರಲ್ಲಿ ಅವನ ಸೇವಕನೂ ಚರೇದ ಊರಿನ ಎಫ್ರಾಯೀಮ್ಯನಾದ ನೆಬಾಟನ ಮಗನೂ ಆಗಿದ್ದ ಯಾರೊಬ್ಬಾಮನೆಂಬವನು ಮತ್ತೊಬ್ಬನು; ಚೆರೂಗಳೆಂಬ ವಿಧವೆಯು ಅವನ ತಾಯಿ.


ಇದಲ್ಲದೆ ಅರಸನಾದ ಸೊಲೊಮೋನನಿಗೆ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ನಡೆದ ಸಂಗತಿಗಳ ವರ್ತಮಾನವನ್ನು ಕೇಳಿದೊಡನೆ ಐಗುಪ್ತದಿಂದ ಹಿಂದಿರುಗಿ ಬಂದಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು