Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 8:7 - ಕನ್ನಡ ಸತ್ಯವೇದವು J.V. (BSI)

7 ಇದಲ್ಲದೆ ಇಸ್ರಾಯೇಲ್ಯರಿಂದ ಸಂಹೃತರಾಗದೆ ಕಾನಾನ್ ದೇಶದಲ್ಲಿ ಉಳಿದ ಹಿತ್ತಿಯ ಅಮೋರಿಯ ಪೆರಿಜೀಯ ಹಿವ್ವಿಯ ಯೆಬೂಸಿಯ ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನೂ [ತನ್ನ ಕೆಲಸಕ್ಕಾಗಿ] ಬಿಟ್ಟಿ ಹಿಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇದಲ್ಲದೆ ಇಸ್ರಾಯೇಲರಿಂದ ಸಂಹೃತರಾಗದೆ, ಕಾನಾನ್ ದೇಶದಲ್ಲಿ ಉಳಿದಿದ್ದ ಹಿತ್ತಿಯ, ಅಮೋರಿಯ, ಪೆರಿಜೀಯ, ಹಿವ್ವಿಯ, ಯೆಬೂಸಿಯ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಇಸ್ರಯೇಲರಿಂದ ಸಂಹೃತರಾಗದೆ ಕಾನಾನ್ ನಾಡಿನಲ್ಲಿ ಅಳಿದುಳಿದ ಹಿತ್ತಿಯ, ಅಮೋರಿಯ, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನೂ ಬಿಟ್ಟಿಹಿಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7-8 ಇಸ್ರೇಲರು ಇದ್ದ ದೇಶದಲ್ಲಿ ಅನ್ಯ ಜನರಾದ ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುತ್ತಿದ್ದರು. ಇವರನ್ನೆಲ್ಲಾ ಸೊಲೊಮೋನನು ಗುಲಾಮರನ್ನಾಗಿ ಉಪಯೋಗಿಸಿದನು. ಈ ಜನರು ಇಸ್ರೇಲರಾಗಿರಲಿಲ್ಲ. ಇಸ್ರೇಲರು ದೇಶವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ನಿವಾಸಿಗಳನ್ನು ಓಡಿಸದೆ ಬಿಟ್ಟವರ ಸಂತತಿಯವರಾಗಿದ್ದರು. ಅವರು ಈಗಲೂ ಅಲ್ಲಿಯೇ ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಸೊಲೊಮೋನನು ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 8:7
7 ತಿಳಿವುಗಳ ಹೋಲಿಕೆ  

ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಸಂಖ್ಯೆಯಲ್ಲಿಯೂ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಎಂಬ ಏಳು ಜನಾಂಗಗಳನ್ನು


ಇದರಿಂದ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಹುಟ್ಟಿತು. ಇದಲ್ಲದೆ ಕಾನಾನ್ಯರೂ ಪೆರಿಜೀಯರೂ ಆ ಕಾಲದಲ್ಲಿ ದೇಶದೊಳಗೆ ಇದ್ದರು.


ಬಾಲಾತೂರು, ತನ್ನ ಎಲ್ಲಾ ಉಗ್ರಾಣದ ಪಟ್ಟಣ, ಯುದ್ಧರಥಗಳನ್ನಿರಿಸುವ ಪಟ್ಟಣ, ರಾಹುತರ ಪಟ್ಟಣ ಇವುಗಳನ್ನೂ ಕಟ್ಟಿಸಿದನು. ಮತ್ತು ಯೆರೂಸಲೇವಿುನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನ್ನ ಮನಸ್ಸಿಗೆ ಬಂದವುಗಳನ್ನೆಲ್ಲಾ ಕಟ್ಟಿಸಿದನು.


ನಾವಾದರೋ ನಿನಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು ತೆಪ್ಪಗಳಾಗಿ ಕಟ್ಟಿ ಸಮುದ್ರಮಾರ್ಗವಾಗಿ ಯೊಪ್ಪಕ್ಕೆ ಕಳುಹಿಸುವೆವು; ಅಲ್ಲಿಂದ ನೀನು ಅವುಗಳನ್ನು ಯೆರೂಸಲೇವಿುಗೆ ತರಿಸಿಕೊಳ್ಳಬಹುದು ಎಂಬದಾಗಿ ಉತ್ತರಕೊಟ್ಟನು.


ಇದಾದನಂತರ ಪ್ರಧಾನಪುರುಷರು ನನ್ನ ಬಳಿಗೆ ಬಂದು - ಇಸ್ರಾಯೇಲ್ಯರಲ್ಲಿ ಸಾಧಾರಣಜನರೂ ಯಾಜಕರೂ ಲೇವಿಯರೂ ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಐಗುಪ್ತ್ಯರು, ಅಮೋರಿಯರು ಎಂಬ ಅನ್ಯದೇಶಗಳವರ ಬಳಕೆಯನ್ನು ತೊರೆಯದೆ ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು