Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 36:18 - ಕನ್ನಡ ಸತ್ಯವೇದವು J.V. (BSI)

18 ದೇವಾಲಯದ ಎಲ್ಲಾ ಚಿಕ್ಕ ದೊಡ್ಡ ಸಾಮಾನುಗಳನ್ನೂ ಯೆಹೋವನ ಮಂದಿರದ ಭಂಡಾರ, ಅರಸನ ಮತ್ತು ಅವನ ಸರದಾರರ ಭಂಡಾರ ಇವುಗಳ ದ್ರವ್ಯವನ್ನೂ ಬಾಬೆಲಿಗೆ ಒಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ದೇವಾಲಯದ ಎಲ್ಲಾ ಚಿಕ್ಕ, ದೊಡ್ಡ ಸಾಮಾನುಗಳನ್ನೂ ಯೆಹೋವನ ಮಂದಿರದ ಭಂಡಾರದ ಹಾಗೂ ಅರಸನ ಮತ್ತು ಅವನ ಸರದಾರರ ಭಂಡಾರದ ದ್ರವ್ಯವನ್ನೂ ಬಾಬಿಲೋನಿಗೆ ಒಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ದೇವಾಲಯದ ಎಲ್ಲ ಚಿಕ್ಕ ದೊಡ್ಡ ಸಾಮಗ್ರಿಗಳನ್ನು ಮಾತ್ರವಲ್ಲದೆ,ಸರ್ವೇಶ್ವರನ ಮಂದಿರಕ್ಕೆ ಸೇರಿದ ಭಂಡಾರದ ಹಾಗು ಅರಸನ ಮತ್ತು ಅವನ ಪದಾಧಿಕಾರಿಗಳ ಭಂಡಾರದ ದ್ರವ್ಯವನ್ನೂ ಬಾಬಿಲೋನಿಗೆ ಒಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ದೇವಾಲಯದೊಳಗಿದ್ದ ಎಲ್ಲಾ ವಸ್ತುಗಳನ್ನು ನೆಬೂಕದ್ನೆಚ್ಚರನು ಬಾಬಿಲೋನಿಗೆ ಸಾಗಿಸಿದನು. ದೇವಾಲಯದೊಳಗೂ ಅರಸನ ಬಳಿಯಲ್ಲಿಯೂ ಅಧಿಕಾರಿಗಳ ಬಳಿಯಲ್ಲಿಯೂ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಬಾಬಿಲೋನಿಗೆ ಸಾಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಇದಲ್ಲದೆ ದೊಡ್ಡವೂ, ಸಣ್ಣವೂ ಆದ ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳು ಆಲಯದ ಬೊಕ್ಕಸಗಳು, ಅರಸನ ಬೊಕ್ಕಸಗಳು, ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬಿಲೋನಿಗೆ ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 36:18
10 ತಿಳಿವುಗಳ ಹೋಲಿಕೆ  

ನೆಬೂಕದ್ನೆಚ್ಚರನು ವರ್ಷಾರಂಭದಲ್ಲಿ ಅವನನ್ನೂ ದೇವಾಲಯದ ಬೆಲೆಯುಳ್ಳಸಾಮಾನುಗಳನ್ನೂ ಬಾಬೆಲಿಗೆ ತರಿಸಿಕೊಂಡು ಅವನ ಸಹೋದರನಾದ ಚಿದ್ಕೀಯನನ್ನು ಯೆಹೂದದ ಮತ್ತು ಯೆರೂಸಲೇವಿುನ ಮೇಲೆ ಅರಸನನ್ನಾಗಿ ಮಾಡಿದನು.


ಅವನಿಗೆ ಬೇಡಿಹಾಕಿ ಯೆಹೋವನ ಆಲಯದ ಹಲವು ಸಾಮಾನುಗಳನ್ನು ಬಾಬೆಲಿಗೆ ತೆಗೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿಟ್ಟನು. ಯೆಹೋಯಾಕೀಮನ ಉಳಿದ ಚರಿತ್ರೆಯೂ


ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ವಿಧಿಗಳೂ ನಿಮ್ಮ ಪಿತೃಗಳನ್ನು ಹಿಂದಟ್ಟಿ ಹಿಡಿದು ನಿತ್ಯವಾಗಿವೆಯಷ್ಟೆ; ಅವರು ತಿರುಗಿಕೊಂಡು - ಸೇನಾಧೀಶ್ವರ ಯೆಹೋವನು ನಮ್ಮ ದುರ್ಮಾರ್ಗ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ ಅಂದುಕೊಂಡರು.


ಯೆರೂಸಲೇವಿುನ ದೇವಾಲಯದ ನಡುಗುಡಿಯಿಂದ ಸೂರೆಯಾದ ಬಂಗಾರದ ಪಾತ್ರೆಗಳನ್ನು ತರಲು ರಾಜನೂ ಅವನ ಮುಖಂಡರೂ ಪತ್ನ್ಯುಪಪತ್ನಿಯರೂ ಅವುಗಳಲ್ಲಿ ಕುಡಿದರು.


ಆತನು - ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೆ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬೆಲಿಗೆ ಒಯ್ಯಲ್ಪಡುವ ದಿನ ಬರುವದು; ಇಲ್ಲೇನೂ ಉಳಿಯುವದಿಲ್ಲ.


ವಿರೋಧಿಯು ಕೈಚಾಚಿ ಅವಳ ಭೋಗ್ಯ ವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; ಮ್ಲೇಚ್ಫರು ನಿನ್ನ ಸಭೆಗೆ ಸೇರಬಾರದು ಎಂದು ನೀನು ಆಜ್ಞಾಪಿಸಿದರೂ ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವದನ್ನು ಆಕೆಯು ಕಾಣಬೇಕಾಯಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು