Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 33:23 - ಕನ್ನಡ ಸತ್ಯವೇದವು J.V. (BSI)

23 ಆಮೋನನ ತಂದೆಯಾದ ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದನಷ್ಟೆ. ಆಮೋನನಾದರೋ ತನ್ನನ್ನು ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆದರೂ ಆಮೋನನ ತಂದೆಯಾದ ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದನಷ್ಠೆ. ಅಮೋನನಾದರೋ ತನ್ನನ್ನು ತಗ್ಗಿಸಿಕೊಳ್ಳದೆ ಮಹಾ ಅಪರಾಧಿಯಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಆಮೋನನ ತಂದೆ ಮನಸ್ಸೆ ಸರ್ವೇಶ್ವರನ ಮುಂದೆ ತನ್ನನ್ನೇ ತಗ್ಗಿಸಿಕೊಂಡಿದ್ದನು. ಆಮೋನನಾದರೋ ತನ್ನನ್ನೇ ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಂತೆ ಅಮೋನನು ತಗ್ಗಿಸಿಕೊಳ್ಳಲಿಲ್ಲ. ಅಮೋನನು ಹೆಚ್ಚೆಚ್ಚಾಗಿ ಪಾಪಗಳನ್ನು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆಮೋನನು ತನ್ನ ತಂದೆ ಮನಸ್ಸೆಯು ತನ್ನನ್ನು ತಗ್ಗಿಸಿಕೊಂಡ ಹಾಗೆ, ಯೆಹೋವ ದೇವರ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ. ಆದರೆ ಆಮೋನನು ಅಧಿಕವಾಗಿ ಅಪರಾಧ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 33:23
9 ತಿಳಿವುಗಳ ಹೋಲಿಕೆ  

ಆದರೆ ಆ ಕಷ್ಟದಲ್ಲಿ ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಲು


ಅವನ ದೇವಪ್ರಾರ್ಥನೆಯೂ ಅವನಿಗೆ ದೊರಕಿದ ಸದುತ್ತರವೂ ಅವನು ತನ್ನನ್ನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಮಾಡಿದ ಅಪರಾಧದ್ರೋಹಗಳೂ ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ ಅಶೇರಸ್ತಂಭ ವಿಗ್ರಹ ಇವುಗಳನ್ನು ನಿಲ್ಲಿಸಿದ್ದೂ ದರ್ಶಿಗಳ ಚರಿತ್ರೆಯಲ್ಲಿ ಬರೆದಿರುತ್ತವೆ.


ಆದರೆ ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.


ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ; ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇಹೋಗುವರು ಎಂದು ಯೆಹೋವನು ಅನ್ನುತ್ತಾನೆ.


ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ, ನನ್ನ ಆಜ್ಞೆಗೆ ಮಣಿಯಲಿಲ್ಲ; ತಮ್ಮ ಪಿತೃಗಳಿಗಿಂತಲೂ ಕೆಟ್ಟವರಾಗಿ ನಡೆದರು.


ಮನಸ್ಸೆಯು ಅರಸನಾದಾಗ ಹನ್ನೆರಡು ವರುಷದವನಾಗಿದ್ದನು; ಅವನು ಯೆರೂಸಲೇವಿುನಲ್ಲಿ ಐವತ್ತೈದು ವರುಷ ಆಳಿದನು.


ಕಷ್ಟ ಬಂದಾಗ ಅರಸನಾದ ಆಹಾಜನು ಯೆಹೋವನಿಗೆ ಮತ್ತಷ್ಟು ದ್ರೋಹಿಯಾದನು.


ಅವನು ತನ್ನ ದೇವರಾದ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದು ಯೆಹೋವನ ಮಾತುಗಳನ್ನು ತನಗೆ ತಿಳಿಸುತ್ತಿದ್ದ ಪ್ರವಾದಿಯಾದ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ.


ಬೇಲ್ಶಚ್ಚರನೇ, ಅವನ ಮಗನಾದ ನೀನು ಇದನ್ನೆಲ್ಲಾ ತಿಳಿದುಕೊಂಡರೂ ನಿನ್ನ ಮನಸ್ಸನ್ನು ತಗ್ಗಿಸಿಕೊಳ್ಳಲಿಲ್ಲ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು