Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 33:19 - ಕನ್ನಡ ಸತ್ಯವೇದವು J.V. (BSI)

19 ಅವನ ದೇವಪ್ರಾರ್ಥನೆಯೂ ಅವನಿಗೆ ದೊರಕಿದ ಸದುತ್ತರವೂ ಅವನು ತನ್ನನ್ನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಮಾಡಿದ ಅಪರಾಧದ್ರೋಹಗಳೂ ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ ಅಶೇರಸ್ತಂಭ ವಿಗ್ರಹ ಇವುಗಳನ್ನು ನಿಲ್ಲಿಸಿದ್ದೂ ದರ್ಶಿಗಳ ಚರಿತ್ರೆಯಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವನ ದೇವರಿಗೆ ಮಾಡಿದ ಪ್ರಾರ್ಥನೆಯೂ, ಅವನಿಗೆ ದೊರಕಿದ ಸದುತ್ತರವೂ, ಅವನು ತನ್ನನ್ನು ತಗ್ಗಿಸಿಕೊಳ್ಳುವುದಕ್ಕಿಂತ ಮೊದಲು ಮಾಡಿದ ಅಪರಾಧದ್ರೋಹಗಳೂ, ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ನಿರ್ಮಿಸಿ ಅಶೇರ ಸ್ತಂಭ ವಿಗ್ರಹ ಇವುಗಳನ್ನು ನಿಲ್ಲಿಸಿದ್ದೂ ದರ್ಶಕರ ಚರಿತ್ರೆಯಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಅವನು ದೇವರಿಗೆ ಮಾಡಿದ ಪ್ರಾರ್ಥನೆ, ಅದಕ್ಕೆ ದೊರೆತ ಸದುತ್ತರ ಹಾಗು ಅವನು ದೀನಮನಸ್ಕನಾಗುವುದಕ್ಕೆ ಮುಂಚೆ ಮಾಡಿದ ಅಪರಾಧ, ದ್ರೋಹಗಳು, ಹಾಗು ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಅಶೇರಸ್ತಂಭ ವಿಗ್ರಹ, ಇವುಗಳನ್ನು ನಿಲ್ಲಿಸಿದ್ದು, ಇವುಗಳು ದರ್ಶಿಗಳ ಚರಿತ್ರೆಯಲ್ಲಿ ಲಿಖಿತವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಮನಸ್ಸೆಯ ಪ್ರಾರ್ಥನೆಯ ವಿಷಯವಾಗಿಯೂ ದೇವರ ಪ್ರತಿಕ್ರಿಯೆಯ ವಿಷಯವಾಗಿಯೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿದೆ. ಮಾತ್ರವಲ್ಲದೆ ಮನಸ್ಸೆಯು ದೇವರಿಗೆ ವಿರುದ್ಧವಾಗಿ ಮಾಡಿದ ಘೋರಕೃತ್ಯಗಳೂ ಪಶ್ಚಾತ್ತಾಪಪಡುವ ಮೊದಲು ಎಲ್ಲೆಲ್ಲಿ ಅನ್ಯದೇವತೆಗಳಿಗೆ ಪೂಜಾಸ್ಥಳಗಳನ್ನು ಮಾಡಿದ್ದನೆಂದೂ ಎಲ್ಲೆಲ್ಲಿ ಅಶೇರಸ್ತಂಭಗಳನ್ನು ನೆಡಿಸಿದ್ದನೆಂದೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಇದಲ್ಲದೆ ಅವನ ಪ್ರಾರ್ಥನೆಯೂ, ಅವನು ದೇವರಿಗೆ ಭಿನ್ನವಿಸಿದ್ದೂ, ಅವನ ಸಮಸ್ತ ಪಾಪವೂ, ಅವನ ಅಪನಂಬಿಕೆಯೂ, ಅವನು ತಗ್ಗಿಸಿಕೊಳ್ಳುವುದಕ್ಕಿಂತ ಮುಂಚೆ ಕಟ್ಟಿಸಿದ ಉನ್ನತ ಸ್ಥಳಗಳನ್ನೂ, ನಿಲ್ಲಿಸಿದ ಅಶೇರ ಸ್ತಂಭಗಳೂ, ಕೆತ್ತಿಸಿದ ವಿಗ್ರಹಗಳೂ, ಸ್ಥಾಪಿಸಿದ ಸ್ಥಳಗಳೂ ಪ್ರವಾದಿಗಳ ದಾಖಲೆಗಳಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 33:19
17 ತಿಳಿವುಗಳ ಹೋಲಿಕೆ  

ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.


ಇದಲ್ಲದೆ ಪಾಪಮಾಡಿದ ಒಬ್ಬನಿಂದಲೇ ದುಷ್ಫಲ ಬಂದಂತೆ ಈ ವರವು ಬರಲಿಲ್ಲ; ಹೇಗಂದರೆ ಒಬ್ಬನೇ ಮನುಷ್ಯನ ಪಾಪದ ದೆಸೆಯಿಂದ ಸಾಯಬೇಕೆಂಬ ನಿರ್ಣಯವು ಉಂಟಾಯಿತು, ಆದರೆ ದೇವರ ಕೃಪಾದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ಅವರನ್ನು ನೀತಿವಂತರೆಂದು ನಿರ್ಣಯಿಸುವಂಥದಾಗಿದೆ.


ಕರ್ತನು ಅವನಿಗೆ - ನೀನೆದ್ದು ನೆಟ್ಟನೇಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ವಿಚಾರಿಸು; ಅವನು ಪ್ರಾರ್ಥನೆ ಮಾಡುತ್ತಾನೆ.


ಬೇಲ್ಶಚ್ಚರನೇ, ಅವನ ಮಗನಾದ ನೀನು ಇದನ್ನೆಲ್ಲಾ ತಿಳಿದುಕೊಂಡರೂ ನಿನ್ನ ಮನಸ್ಸನ್ನು ತಗ್ಗಿಸಿಕೊಳ್ಳಲಿಲ್ಲ;


ಅವರು ಇಂದಿನವರೆಗೂ ತಗ್ಗಲಿಲ್ಲ, ನನಗೆ ಭಯಪಡಲಿಲ್ಲ; ನಾನು ನಿಮಗೂ ನಿಮ್ಮ ಪಿತೃಗಳಿಗೂ ನೇವಿುಸಿದ ನಿಯಮನಿಷ್ಠೆಗಳನ್ನು ಅನುಸರಿಸಿ ನಡೆಯಲೂ ಇಲ್ಲ.


ದುಷ್ಟರ ಯಜ್ಞ ಯೆಹೋವನಿಗೆ ಅಸಹ್ಯ; ಶಿಷ್ಟರ ಬಿನ್ನಪ ಆತನಿಗೆ ಒಪ್ಪಿತ.


ಕಷ್ಟಾನುಭವಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಈಗಲಾದರೋ ನಿನ್ನ ನುಡಿಗಳನ್ನು ಕೈಕೊಳ್ಳುತ್ತೇನೆ.


ಅವನು ತನ್ನ ದೇವರಾದ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದು ಯೆಹೋವನ ಮಾತುಗಳನ್ನು ತನಗೆ ತಿಳಿಸುತ್ತಿದ್ದ ಪ್ರವಾದಿಯಾದ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ.


ಯೆಹೋವನೇ, ನಿನ್ನ ವಿಧಿಗಳು ನೀತಿಯುಳ್ಳವುಗಳಾಗಿವೆ ಎಂದೂ ನೀನು ನಂಬಿಕೆಯಿಂದಲೇ ನನ್ನನ್ನು ಕುಗ್ಗಿಸಿದ್ದೀ ಎಂದೂ ತಿಳಿದುಕೊಂಡಿದ್ದೇನೆ.


ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.


ಕೆಲವು ಮಂದಿ ಆಶೇರ್ಯರೂ ಮನಸ್ಸೆಯವರೂ ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇವಿುಗೆ ಬಂದರು.


[ಆದದರಿಂದ] ನೀವು ಅವರ ಬಲಿಪೀಠಗಳನ್ನು ಕೆಡವಿ ಅವರ ಕಲ್ಲುಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಬಿಡಬೇಕು.


ಮನಸ್ಸೆಯು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಅರಮನೆಯ ನಿವೇಶನದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಆಮೋನನು ಅರಸನಾದನು.


ಆಮೋನನ ತಂದೆಯಾದ ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದನಷ್ಟೆ. ಆಮೋನನಾದರೋ ತನ್ನನ್ನು ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.


ರಾಜನಿಗೂ ರಾಜಮಾತೆಗೂ - ನೆಲದಲ್ಲಿ ಕೂತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ ಎಂದು ಹೇಳಿರಿ.


ನೀನು ನನ್ನ ಧ್ವನಿಯನ್ನು ಕೇಳಿದಿ; (ನನ್ನ ನಿಟ್ಟುಸುರಿಗೂ ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!)


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು