2 ಪೂರ್ವಕಾಲ ವೃತ್ತಾಂತ 32:1 - ಕನ್ನಡ ಸತ್ಯವೇದವು J.V. (BSI)1 ಈ ಭಕ್ತಿಕಾರ್ಯಗಳಾದನಂತರ ಅಶ್ಶೂರದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಯೆಹೂದದಲ್ಲಿ ನುಗ್ಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಅವುಗಳಿಗೆ ಮುತ್ತಿಗೆಹಾಕಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಈ ಭಕ್ತಿ ಕಾರ್ಯಗಳಾದ ನಂತರ ಅಶ್ಶೂರದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಯೆಹೂದದಲ್ಲಿ ನುಗ್ಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿ ಕೊಳ್ಳಬೇಕೆಂದು ಅವುಗಳಿಗೆ ಮುತ್ತಿಗೆ ಹಾಕಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಈ ಧಾರ್ಮಿಕ ಸುಧಾರಣೆಗಳಾದ ನಂತರ ಅಸ್ಸೀರಿಯಾದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಜುದೇಯಕ್ಕೆ ನುಗ್ಗಿದನು. ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಮುತ್ತಿಗೆ ಹಾಕಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಹೀಗೆ ಒಳ್ಳೆಯ ಕಾರ್ಯಗಳನ್ನು ಹಿಜ್ಕೀಯನು ಮಾಡುತ್ತಿರುವಾಗ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಮೇಲೆ ಯುದ್ಧಮಾಡಲು ಬಂದನು. ಸರಿಯಾದ ಸಮಯದಲ್ಲಿ ಪಟ್ಟಣದ ಮೇಲೆ ಧಾಳಿಮಾಡಿ ಸೋಲಿಸುವದಕ್ಕೋಸ್ಕರ ಸನ್ಹೇರೀಬನೂ ಅವನ ಸೈನಿಕರೂ ಪಟ್ಟಣಗಳ ಕೋಟೆಗಳ ಹೊರಗಡೆ ಪಾಳೆಯ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಹಿಜ್ಕೀಯನು ಇಷ್ಟು ನಂಬಿಗಸ್ತಿಕೆಯಿಂದ ಎಲ್ಲವನ್ನೂ ಮಾಡಿದ ತರುವಾಯ, ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದಲ್ಲಿ ಪ್ರವೇಶಿಸಿ ಕೋಟೆಯುಳ್ಳ ಪಟ್ಟಣಗಳ ಬಳಿಯಲ್ಲಿ ದಂಡಿಳಿಸಿ, ಅವುಗಳನ್ನು ತನಗಾಗಿ ಜಯಿಸಬೇಕೆಂದು ಮುತ್ತಿಗೆಹಾಕಿದನು. ಅಧ್ಯಾಯವನ್ನು ನೋಡಿ |