Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 30:11 - ಕನ್ನಡ ಸತ್ಯವೇದವು J.V. (BSI)

11 ಕೆಲವು ಮಂದಿ ಆಶೇರ್ಯರೂ ಮನಸ್ಸೆಯವರೂ ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇವಿುಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಕೆಲವು ಮಂದಿ ಆಶೇರ್ಯರೂ, ಮನಸ್ಸೆಯವರೂ, ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಕೆಲವು ಮಂದಿ ಆಶೇರ್ಯರು, ಮನಸ್ಸೆಯವರು ಹಾಗು ಜೆಬುಲೂನ್ಯರು ಮಾತ್ರ ದೀನಮನಸ್ಕರಾಗಿ ಜೆರುಸಲೇಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆದರೆ ಆಶೇರ್, ಮನಸ್ಸೆ ಮತ್ತು ಜೆಬುಲೂನ್ ಪ್ರಾಂತ್ಯಗಳ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಜೆರುಸಲೇಮಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆದರೂ ಆಶೇರ್, ಮನಸ್ಸೆ, ಜೆಬುಲೂನ್, ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 30:11
19 ತಿಳಿವುಗಳ ಹೋಲಿಕೆ  

ಯೆರೂಸಲೇವಿುನಲ್ಲಿ ಕೂಡಿಬಂದ ಇಸ್ರಾಯೇಲ್ಯರು ಏಳು ದಿನಗಳವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ ಯಾಜಕರೂ ಮಹಾವಾದ್ಯದೊಡನೆ ಯೆಹೋವನನ್ನು ಪ್ರತಿದಿನವೂ ಕೀರ್ತಿಸುತ್ತಾ ಇದ್ದರು.


ಜನರಲ್ಲಿ ಅನೇಕಾನೇಕರು ಅಂದರೆ ಹೆಚ್ಚಾಗಿ ಎಫ್ರಾಯೀಮ್ ಮನಸ್ಸೆ ಇಸ್ಸಾಕಾರ್ ಜೆಬುಲೂನ್ ಪ್ರಾಂತಗಳವರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ ಪಸ್ಕಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು - ಯೆಹೋವನೇ, ದಯಾಪರನಾದ ದೇವರೇ, ದೇವಾಲಯಯಾತ್ರಿಕರಿಗಿರಬೇಕಾದ ಪರಿಶುದ್ಧತ್ವವು ಅನೇಕರಲ್ಲಿ ಇಲ್ಲದಿದ್ದರೂ


ಯೆಹೂದ್ಯರ ಸರ್ವಸಮೂಹದವರೂ ಯಾಜಕರೂ ಲೇವಿಯರೂ ಇಸ್ರಾಯೇಲ್‍ಪ್ರಾಂತಗಳಿಂದ ನೆರೆದುಬಂದವರೆಲ್ಲರೂ ಇಸ್ರಾಯೇಲ್ ಯೆಹೂದ ಪ್ರಾಂತಗಳಲ್ಲಿದ್ದ ಪ್ರವಾಸಿಗಳೂ ಈ ಉತ್ಸವದಲ್ಲಿ ಪಾಲುಗಾರರಾಗಿದ್ದರು.


ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.


ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.


ಕೆಲವರು ಅವನನ್ನು ಅಂಟಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಇನ್ನು ಕೆಲವರೂ ಇದ್ದರು.


ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.


ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.


ಬೇಲ್ಶಚ್ಚರನೇ, ಅವನ ಮಗನಾದ ನೀನು ಇದನ್ನೆಲ್ಲಾ ತಿಳಿದುಕೊಂಡರೂ ನಿನ್ನ ಮನಸ್ಸನ್ನು ತಗ್ಗಿಸಿಕೊಳ್ಳಲಿಲ್ಲ;


ಈ ದೇಶದ ಮತ್ತು ಅದರ ನಿವಾಸಿಗಳ ವಿಷಯ ನಾನು ಹೇಳಿದ ಮಾತುಗಳನ್ನು ಕೇಳಿದಾಗ ನೀನು ದುಃಖಪಟ್ಟು ದೇವರಾದ ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ ದೀನಮನಸ್ಸಿನಿಂದ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರುಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.


ಆಮೋನನ ತಂದೆಯಾದ ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಿದ್ದನಷ್ಟೆ. ಆಮೋನನಾದರೋ ತನ್ನನ್ನು ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.


ಅವನ ದೇವಪ್ರಾರ್ಥನೆಯೂ ಅವನಿಗೆ ದೊರಕಿದ ಸದುತ್ತರವೂ ಅವನು ತನ್ನನ್ನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಮಾಡಿದ ಅಪರಾಧದ್ರೋಹಗಳೂ ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ ಅಶೇರಸ್ತಂಭ ವಿಗ್ರಹ ಇವುಗಳನ್ನು ನಿಲ್ಲಿಸಿದ್ದೂ ದರ್ಶಿಗಳ ಚರಿತ್ರೆಯಲ್ಲಿ ಬರೆದಿರುತ್ತವೆ.


ಆದರೆ ಆ ಕಷ್ಟದಲ್ಲಿ ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಲು


ರೆಹಬ್ಬಾಮನು ತನ್ನನ್ನು ತಗ್ಗಿಸಿಕೊಂಡದರಿಂದಲೂ ಯೆಹೂದ್ಯರಲ್ಲಿ ಕೆಲವು ಸುಲಕ್ಷಣಗಳು ತೋರುತ್ತಿದ್ದದರಿಂದಲೂ ಯೆಹೋವನು ರೆಹಬ್ಬಾಮನ ಮೇಲಣ ಕೋಪವನ್ನು ಬಿಟ್ಟನು; ಅವನನ್ನು ಪೂರ್ಣವಾಗಿ ಹಾಳುಮಾಡಲಿಲ್ಲ.


ಇಸ್ರಾಯೇಲ್ಯರ ಎಲ್ಲಾ ಕುಲಗಳಲ್ಲಿ ಇಸ್ರಾಯೇಲ್‍ದೇವರಾದ ಯೆಹೋವನ ದರ್ಶನವನ್ನು ಬಯಸುವವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ಯಜ್ಞವರ್ಪಿಸುವದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಯೆರೂಸಲೇವಿುಗೆ ಬಂದರು.


ನಾನು ತಮಗೆ ವಿರೋಧವಾಗಿ ನಡೆದುಕೊಂಡು ಶತ್ರುದೇಶಕ್ಕೆ [ಸೆರೆಯವರನ್ನಾಗಿ] ಬರಮಾಡಬೇಕಾಯಿತೆಂದೂ ಒಪ್ಪಿ ತಮ್ಮ ಮೊಂಡವಾದ ಮನಸ್ಸನ್ನು ನನ್ನ ಆಜ್ಞೆಗೆ ಒಳಪಡಿಸಿ, ತಮ್ಮ ಪಾಪದಿಂದುಂಟಾದ ಶಿಕ್ಷೆಯನ್ನು ಸ್ವೀಕರಿಸುವದಾದರೆ


ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ - ಇಬ್ರಿಯರ ದೇವರಾಗಿರುವ ಯೆಹೋವನು ಆಜ್ಞಾಪಿಸುವದೇನಂದರೆ - ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರುವದು ಇನ್ನು ಎಲ್ಲಿಯವರೆಗೋ? ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆ ಕೊಡು.


ಯೆಹೂದ್ಯರು, ಬೆನ್ಯಾಮೀನ್ಯರು, ಎಫ್ರಾಯೀಮ್ಯರು, ಮನಸ್ಸೆಯರು ಇವರಲ್ಲಿ ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದವರ ಪಟ್ಟಿ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು