Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 26:20 - ಕನ್ನಡ ಸತ್ಯವೇದವು J.V. (BSI)

20 ಮಹಾಯಾಜಕನಾದ ಅಜರ್ಯನೂ ಎಲ್ಲಾ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಂಡುಬಂದಕಾರಣ ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಡಿಸಿದರು. ಯೆಹೋವನು ತನ್ನನ್ನು ಬಾಧಿಸಿದ್ದಾನೆಂದು ಅವನಿಗೆ ತಿಳಿದದರಿಂದ ಅವನೂ ಶೀಘ್ರವಾಗಿ ಹೊರಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಮಹಾಯಾಜಕನಾದ ಅಜರ್ಯನೂ ಎಲ್ಲಾ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ, ಅವನ ಹಣೆಯಲ್ಲಿ ಕುಷ್ಠವು ಕಂಡುಬಂದ ಕಾರಣ, ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಡಿಸಿದರು. ಯೆಹೋವನು ತನ್ನನ್ನು ಬಾಧಿಸಿದ್ದಾನೆಂದು ಅವನಿಗೆ ತಿಳಿಯಿತು. ಅವನೂ ಶೀಘ್ರವಾಗಿ ಹೊರಗೆ ಹೋಗಲು ಆತುರಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಮಹಾಯಾಜಕನಾದ ಅಜರ್ಯನೂ ಎಲ್ಲ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ, ಅವನ ಹಣೆಯಲ್ಲಿ ಕುಷ್ಠ ಕಂಡುಬಂದ ಕಾರಣ, ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಗಟ್ಟಿದರು. ಸರ್ವೇಶ್ವರ, ತನ್ನನ್ನು ದಂಡಿಸಿದ್ದಾರೆಂದು ಅವನಿಗೆ ತಿಳಿಯಿತು. ಎಂದೇ ಅವನು ಶೀಘ್ರವಾಗಿ ಹೊರಗೆಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಮಹಾಯಾಜಕನಾದ ಅಜರ್ಯನೂ ಇತರ ಯಾಜಕರೂ ಉಜ್ಜೀಯನನ್ನು ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಾಣಿಸಿದ್ದರಿಂದ ಅವನನ್ನು ಕೂಡಲೇ ದೇವಾಲಯದಿಂದ ಹೊರಕ್ಕೆ ಹಾಕಿದರು. ಯೆಹೋವನು ಅವನನ್ನು ಶಿಕ್ಷಿಸಿದುದರಿಂದ ಉಜ್ಜೀಯನು ತಾನಾಗಿಯೇ ದೇವಾಲಯದೊಳಗಿಂದ ಅವಸರದಿಂದ ಹೊರಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆಗ ಮುಖ್ಯಯಾಜಕನಾದ ಅಜರ್ಯನೂ, ಯಾಜಕರೆಲ್ಲರೂ ಅವನನ್ನು ದೃಷ್ಟಿಸಿ ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಂಡುಬಂದದ್ದರಿಂದ ಅವರು ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಹಾಕಿದರು. ಯೆಹೋವ ದೇವರು ತನ್ನನ್ನು ಬಾಧಿಸಿದ್ದರಿಂದ ಅವನು ಸ್ವತಃ ಹೊರಗೆ ಹೋಗಲು ತ್ವರೆಪಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 26:20
8 ತಿಳಿವುಗಳ ಹೋಲಿಕೆ  

ಮೊರ್ದೆಕೈಯು ತಿರಿಗಿ ಅರಮನೆಯ ಬಾಗಲಿಗೆ ಹೋದನು. ಹಾಮಾನನಾದರೋ ಶೋಕಾರ್ತನಾಗಿ ಮೋರೆಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಹೋಗಿ


ಯೆಹೋವನು ನಿಮ್ಮ ಮೊಣಕಾಲುಗಳಲ್ಲಿಯೂ ತೊಡೆಗಳಲ್ಲಿಯೂ ಮತ್ತು ಅಂಗಾಲು ಮೊದಲುಗೊಂಡು ನಡುನೆತ್ತಿಯವರೆಗೂ ವಾಸಿಯಾಗದ ಕೆಟ್ಟಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಬಾಧಿಸುವನು.


ಆತನು ನಿಮ್ಮನ್ನು ಕ್ಷಯರೋಗ ಚಳಿಜ್ವರ ಉರಿತ ಉಷ್ಣಜ್ವರಗಳಿಂದಲೂ ದೇಶವನ್ನು ಕ್ಷಾಮದಿಂದಲೂ ಬೆಳೆಯನ್ನು ಕಾಡಿಗೆ ಬಿಸಿಗಾಳಿಗಳಿಂದಲೂ ಬಾಧಿಸಲಾಗಿ ನೀವು ಸಾಯುವ ತನಕ ಇವು ನಿಮ್ಮನ್ನು ಬೆನ್ಹತ್ತುವವು.


ನಿಮಗೆ ಸ್ವದೇಶವಾಗಿರುವದಕ್ಕೋಸ್ಕರ ನಾನು ಕೊಡುವ ಕಾನಾನ್ ದೇಶಕ್ಕೆ ನೀವು ಬಂದ ನಂತರ ಆ ದೇಶದ ಯಾವ ಮನೆಯ ಗೋಡೆಗಳಲ್ಲಿ ನಾನು ಕುಷ್ಠದ ಗುರುತನ್ನು ಉಂಟುಮಾಡುವೆನೋ


ಯಾಜಕನು ಅವನನ್ನು ನೋಡುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಅಲ್ಲಿರುವ ರೋಮವು ಬೆಳ್ಳಗಾಗಿಹೋಗಿದ್ದರೆ ಮತ್ತು ಆ ಬಾವಿನಲ್ಲಿ ಮಾಂಸ ಕಾಣಿಸಿದರೆ ಅದು ಹಳೇ ಕುಷ್ಠರೋಗದ ಗುರುತು.


ಧೂಪಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದಿದ್ದ ಉಜ್ಜೀಯನು ಕೋಪವುಳ್ಳವನಾದನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು ಯಾಜಕರೊಡನೆ ಸಿಟ್ಟಿನಿಂದ ಮಾತಾಡುತ್ತಿರುವಾಗ ಯಾಜಕರ ಸಮಕ್ಷದಲ್ಲೇ ಅವನ ಹಣೆಯಲ್ಲಿ ಕುಷ್ಠ ಹುಟ್ಟಿತು.


ಉಜ್ಜೀಯನು ಜೀವದಿಂದಿರುವವರೆಗೂ ಕುಷ್ಠರೋಗಿಯಾಗಿದ್ದು ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು. ಅವನು ಕುಷ್ಠದ ದೆಸೆಯಿಂದ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಬೇಕಾಯಿತು. ರಾಜ ಗೃಹಾಧಿಪತ್ಯವನ್ನೂ ಪ್ರಜಾಪಾಲನೆಯನ್ನೂ ಅವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು.


ಇವನು ಅಬೀಷೂವನ ಮಗನು; ಇವನು ಫೀನೆಹಾಸನ ಮಗನು; ಇವನು ಎಲ್ಲಾಜಾರನ ಮಗನು; ಇವನು ಪ್ರಧಾನ ಯಾಜಕನಾದ ಆರೋನನ ಮಗನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು