2 ಪೂರ್ವಕಾಲ ವೃತ್ತಾಂತ 26:11 - ಕನ್ನಡ ಸತ್ಯವೇದವು J.V. (BSI)11 ಇದಲ್ಲದೆ ಉಜ್ಜೀಯನಿಗೆ ಯುದ್ಧಕ್ಕೋಸ್ಕರ ಸೈನ್ಯವೂ ಇತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ ಇವರು ಅರಸನ ಸರದಾರರಲ್ಲೊಬ್ಬನಾದ ಹನನ್ಯನ ಆಜ್ಞಾನುಸಾರವಾಗಿ ಅವರ ಪಟ್ಟಿಯನ್ನು ಬರೆದಿದ್ದರು. ಆಯಾ ಗುಂಪುಗಳು ಪಟ್ಟಿಯ ಕ್ರಮಾನುಸಾರ ಯುದ್ಧಕ್ಕೆ ಹೊರಡುತ್ತಿದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಇದಲ್ಲದೆ, ಉಜ್ಜೀಯನಿಗೆ ಯುದ್ಧಕ್ಕೋಸ್ಕರ ಸೈನ್ಯವೂ ಇತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ ಇವರು ಹಾಕಿಕೊಟ್ಟ ಪಟ್ಟಿಯಕ್ರಮ ಪ್ರಕಾರ ಅರಸನ ಸರದಾರರಲ್ಲಿ ಒಬ್ಬನಾದ ಹನನ್ಯನ ಆಜ್ಞಾನುಸಾರವಾಗಿ. ಆಯಾ ಗುಂಪುಗಳು ಯುದ್ಧಕ್ಕೆ ಹೊರಡುತ್ತಿದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಇದಲ್ಲದೆ, ಯುದ್ಧಕ್ಕೆ ಬೇಕಾದ ಸೈನ್ಯವೂ ಉಜ್ಜೀಯನಿಗಿತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ, ಇವರು ಅರಸನ ಸರದಾರರಲ್ಲಿ ಒಬ್ಬನಾದ ಹನನ್ಯನ ಆಜ್ಞಾನುಸಾರ, ಅವನ ಪಟ್ಟಿಯನ್ನು ಬರೆದಿದ್ದರು. ಆಯಾ ಗುಂಪುಗಳು ಪಟ್ಟಿಯ ಕ್ರಮಾನುಸಾರ ಯುದ್ಧಕ್ಕೆ ಹೊರಡುತ್ತಿದ್ದವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಉಜ್ಜೀಯನ ಬಳಿ ಒಳ್ಳೆಯ ತರಬೇತಿ ಹೊಂದಿದ ಸೈನ್ಯವಿತ್ತು. ಕಾರ್ಯದರ್ಶಿಯಾದ ಯೆಗೀಯೇಲ್ ಮತ್ತು ಅಧಿಕಾರಿಯಾದ ಮಾಸೇಯರು ಅವರನ್ನು ಗುಂಪುಗುಂಪಾಗಿ ವಿಂಗಡಿಸಿದರು. ಹನನ್ಯನು ರಾಜನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಇದಲ್ಲದೆ ಲೇಖಕನಾದ ಯೆಹೀಯೇಲನ ಕೈಯಿಂದಲೂ, ಅಧಿಪತಿಯಾದ ಮಾಸೇಯನ ಕೈಯಿಂದ ಬರೆದಿರುವ ಲೆಕ್ಕದ ಪ್ರಕಾರ, ಗುಂಪುಗುಂಪಾಗಿ ಯುದ್ಧಕ್ಕೆ ಹೋಗುವ ಯುದ್ಧವೀರರ ಸೈನ್ಯವು ಉಜ್ಜೀಯನಿಗೆ ಇತ್ತು. ಆ ಸೈನ್ಯವು ಅರಸನ ಪ್ರಧಾನರಲ್ಲಿ ಒಬ್ಬನಾದ ಹನನ್ಯನ ಕೈಕೆಳಗೆ ಇತ್ತು. ಅಧ್ಯಾಯವನ್ನು ನೋಡಿ |