Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 25:17 - ಕನ್ನಡ ಸತ್ಯವೇದವು J.V. (BSI)

17 ಅನಂತರ ಯೆಹೂದದ ಅರಸನಾದ ಅಮಚ್ಯನು ಮಂತ್ರಾಲೋಚನೆ ಕೇಳಿ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಯೋವಾಷನಿಗೆ - ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಎಂದು ದೂತರ ಮುಖಾಂತರವಾಗಿ ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅನಂತರ ಯೆಹೂದದ ಅರಸನಾದ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ, ಯೆಹೋವಾಹಾಜನ ಮಗನೂ, ಇಸ್ರಾಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ” ಎಂದು ದೂತರ ಮುಖಾಂತರವಾಗಿ ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅನಂತರ ಜುದೇಯದ ಅರಸ ಅಮಚ್ಯನು ಸಮಾಲೋಚನೆ ನಡೆಸಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಯೇಲರ ಅರಸನೂ ಆದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ,” ಎಂದು ದೂತರ ಮುಖಾಂತರ ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅಮಚ್ಯನು ತನ್ನ ಸಲಹೆಗಾರರೊಂದಿಗೆ ಆಲೋಚನೆ ನಡಿಸಿದನು. ಬಳಿಕ ಇಸ್ರೇಲರ ಅರಸನಾದ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಯೋವಾಷನಿಗೆ, “ನಾವು ಮುಖಾಮುಖಿಯಾಗಿ ಸಂಧಿಸೋಣ” ಎಂಬ ಸಂದೇಶವನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 25:17
7 ತಿಳಿವುಗಳ ಹೋಲಿಕೆ  

ವ್ಯಾಜ್ಯಕ್ಕೆ ದೂರನು ಮಾನಕ್ಕೆ ಯೋಗ್ಯನು; ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ.


ಅಷ್ಟರಲ್ಲಿ ಅಮಚ್ಯನು ತನ್ನ ಜೊತೆಯಲ್ಲಿ ಯುದ್ಧಕ್ಕೆ ಬರಬಾರದೆಂದು ಹಿಂದಕ್ಕೆ ಕಳುಹಿಸಿದ ಗುಂಪಿನವರು ಸಮಾರ್ಯಕ್ಕೂ ಬೇತ್ಹೋರೋನಿಗೂ ಮಧ್ಯದಲ್ಲಿರುವ ಯೆಹೂದಪಟ್ಟಣಗಳ ಮೇಲೆ ಬಿದ್ದು ಮೂರು ಸಾವಿರ ಜನರನ್ನು ಕೊಂದು ದೊಡ್ಡ ಕೊಳ್ಳೆಯನ್ನು ಕೂಡಿಸಿಕೊಂಡು ಹೋದರು.


ಆಗ ಅಬ್ನೇರನು ಯೋವಾಬನಿಗೆ - ಪ್ರಾಯಸ್ಥರು ಎದ್ದು ನಮ್ಮ ಮುಂದೆ ಆಡಲಿ ಎಂದು ಹೇಳಲು ಯೋವಾಬನು ಆಗಲಿ ಅಂದನು.


ಈ ಮಾತನ್ನು ಹೇಳಿದ ಪ್ರವಾದಿಗೆ ಅರಸನು - ನಿನ್ನನ್ನು ರಾಜಮಂತ್ರಿಯನ್ನಾಗಿ ನೇವಿುಸಿದ್ದೇವೋ? ಸುಮ್ಮನಿರು, ನಿನಗೆ ಪೆಟ್ಟು ಬೇಕೋ ಅನ್ನಲು ಅವನು - ನೀನು ನನ್ನ ಬುದ್ಧಿವಾದವನ್ನು ಲಾಲಿಸದೆ ಹೀಗೆ ಮಾಡುವದರಿಂದ ದೇವರು ನಿನ್ನನ್ನು ನಾಶಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದಾನೆಂಬದಾಗಿ ನನಗೆ ತಿಳಿಯಬಂತು ಎಂದು ಹೇಳಿ ಸುಮ್ಮನಾದನು.


ದಾವೀದನು ತನ್ನ ಮನಸ್ಸಿನಲ್ಲಿ - ನಾನು ಇಲ್ಲಿದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಮಡಿಯಲೇಬೇಕು. ಆದದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವದೇ ಉತ್ತಮ. ಆಮೇಲೆ ಸೌಲನು ಇಸ್ರಾಯೇಲ್‍ಪ್ರಾಂತಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು, ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು ಅಂದುಕೊಂಡು


ಹಬ್ಬದ ದಿವಸಗಳನ್ನು ತೀರಿಸಿಕೊಂಡು ಹಿಂತಿರುಗಿ ಬರುವಾಗ ಬಾಲಕನಾದ ಯೇಸು ಯೆರೂಸಲೇವಿುನಲ್ಲಿಯೇ ಉಳುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು