2 ಪೂರ್ವಕಾಲ ವೃತ್ತಾಂತ 24:9 - ಕನ್ನಡ ಸತ್ಯವೇದವು J.V. (BSI)9 ದೇವರ ಸೇವಕನಾದ ಮೋಶೆಯು ಅರಣ್ಯದಲ್ಲಿ ವಿಧಿಸಿದಂತೆ ಇಸ್ರಾಯೇಲ್ಯರು ಯೆಹೋವನಿಗೋಸ್ಕರ ಕೊಡಬೇಕಾದ ಕಾಣಿಕೆಯನ್ನು ತಂದುಕೊಡಬೇಕು ಎಂಬದಾಗಿ ಯೆಹೂದದಲ್ಲಿಯೂ ಯೆರೂಸಲೇವಿುನಲ್ಲಿಯೂ ಪ್ರಕಟಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ದೇವರ ಸೇವಕನಾದ ಮೋಶೆಯು ಅರಣ್ಯದಲ್ಲಿ ವಿಧಿಸಿದಂತೆ, ಇಸ್ರಾಯೇಲರು ಯೆಹೋವನಿಗೋಸ್ಕರ ಕೊಡಬೇಕಾದ ಕಾಣಿಕೆಯನ್ನು ತಂದು ಕೊಡಬೇಕು ಎಂಬುದಾಗಿ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ ಪ್ರಕಟಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ದೇವರ ದಾಸ ಮೋಶೆಯು ಮರುಭೂಮಿಯಲ್ಲಿ ವಿಧಿಸಿದಂತೆ ಇಸ್ರಯೇಲರು ಸರ್ವೇಶ್ವರನಿಗೆ ಕೊಡಬೇಕಾದ ಕಾಣಿಕೆಯನ್ನು ತಂದುಕೊಡಬೇಕು ಎಂಬುದಾಗಿ ಜುದೇಯದಲ್ಲೂ ಜೆರುಸಲೇಮಿನಲ್ಲೂ ಪ್ರಕಟಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಯೆಹೂದ ಮತ್ತು ಜೆರುಸಲೇಮಿನಲ್ಲಿ ಲೇವಿಯರು ಜನರಿಗೆಲ್ಲಾ ತಮ್ಮ ತಮ್ಮ ತೆರಿಗೆ ಹಣವನ್ನು ತಂದು ದೇವರಿಗೆ ಸಮರ್ಪಿಸುವಂತೆ ಪ್ರಕಟಿಸಿದರು. ಇಸ್ರೇಲರು ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ದೇವರ ಸೇವಕನಾದ ಮೋಶೆಯು ಜನರಿಗೆ ಇದನ್ನು ಆಜ್ಞಾಪಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ದೇವರ ಸೇವಕನಾದ ಮೋಶೆಯು ಮರುಭೂಮಿಯಲ್ಲಿ ಇಸ್ರಾಯೇಲರಿಗೆ ಆಜ್ಞಾಪಿಸಿದ ತೆರಿಗೆಯನ್ನು ಯೆಹೋವ ದೇವರಿಗೆ ತರಬೇಕೆಂದು ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ ಪ್ರಕಟಮಾಡಿದರು. ಅಧ್ಯಾಯವನ್ನು ನೋಡಿ |