2 ಪೂರ್ವಕಾಲ ವೃತ್ತಾಂತ 22:7 - ಕನ್ನಡ ಸತ್ಯವೇದವು J.V. (BSI)7 ಅಹಜ್ಯನು ಯೋರಾಮನ ಬಳಿಗೆ ಹೋಗಿ ನಾಶವಾದದ್ದು ದೈವಯೋಗದಿಂದಲೇ. ಅವನು ಅಲ್ಲಿ ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗನಾದ ಯೇಹುವನ್ನು ಎದುರುಗೊಳ್ಳುವದಕ್ಕೆ ಹೋದನು. ಯೆಹೋವನು ಅಹಾಬನ ಮನೆಯನ್ನು ನಿರ್ನಾಮಮಾಡುವದಕ್ಕೋಸ್ಕರ ಯೇಹುವಿಗೆ ರಾಜ್ಯಾಭಿಷೇಕ ಮಾಡಿಸಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅಹಜ್ಯನು ಯೋರಾಮನ ಬಳಿಗೆ ಹೋದದ್ದು ದೈವಸಂಕಲ್ಪದಿಂದಲೇ. ಅವನು ಅಲ್ಲಿ ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗನಾದ ಯೇಹುವನ್ನು ಎದುರುಗೊಳ್ಳುವುದಕ್ಕೆ ಹೋದನು. ಯೆಹೋವನು ಅಹಾಬನ ಮನೆಯನ್ನು ನಿರ್ನಾಮ ಮಾಡುವುದಕ್ಕಾಗಿಯೇ ಯೇಹುವಿಗೆ ಪಟ್ಟಾಭಿಷೇಕ ಮಾಡಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಅಹಜ್ಯನು ಯೋರಾಮನ ಬಳಿಗೆ ಹೋಗಿ ನಾಶವಾದದ್ದು ದೈವಸಂಕಲ್ಪದಿಂದಲೇ. ಅವನು ಆ ಸ್ಥಳವನ್ನು ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗ ಯೇಹುವನ್ನು ಎದುರುಗೊಳ್ಳುವುದಕ್ಕೆ ಹೋದನು. ಸರ್ವೇಶ್ವರ ಅಹಾಬನ ಮನೆಯನ್ನು ನಿರ್ನಾಮ ಮಾಡುವುದಕ್ಕಾಗಿಯೇ ಯೇಹುವಿಗೆ ರಾಜಾಭಿಷೇಕ ಮಾಡಿಸಿ ಇದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಯೋರಾಮನನ್ನು ಸಂಧಿಸಲು ಹೋದಾಗ ಅಹಜ್ಯನು ಕೊಲ್ಲಲ್ಪಡುವಂತೆ ಯೆಹೋವನು ಮಾಡಿದನು. ಅಹಜ್ಯನು ಯೇಹುವನ್ನು ಭೇಟಿಯಾಗಲು ಯೋರಾಮನೊಂದಿಗೆ ಹೋದನು. ಯೇಹುವಿನ ತಂದೆ ನಿಂಷಿ. ಅಹಾಬನ ಕುಟುಂಬವನ್ನು ನಾಶಗೊಳಿಸಲು ಯೆಹೋವನು ಯೇಹುವನ್ನು ಆರಿಸಿಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಯೋರಾಮನ ಬಳಿಗೆ ಅಹಜ್ಯನು ಬಂದಿದ್ದರಿಂದ ಅವನಿಗೆ ಉಂಟಾದ ನಷ್ಟವು ದೇವರಿಂದ ಆಯಿತು. ಹೇಗೆಂದರೆ, ಅಹಜ್ಯನು ಬಂದ ತರುವಾಯ ಯೆಹೋವ ದೇವರು ಅಹಾಬನ ಮನೆಯನ್ನು ಕಡಿದು ಬಿಡಲು ಅಭಿಷೇಕಿಸಿದ ನಿಂಷಿಯ ಮಗ ಯೇಹುವಿಗೆ ವಿರೋಧವಾಗಿ ಯೆಹೋರಾಮನ ಸಂಗಡ ಹೊರಟರು. ಅಧ್ಯಾಯವನ್ನು ನೋಡಿ |