Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 21:15 - ಕನ್ನಡ ಸತ್ಯವೇದವು J.V. (BSI)

15 ನಿನಗಾದರೋ ಕರುಳುಬೇನೆಯೆಂಬ ಕಠಿನರೋಗವು ಬಂದು ಬಹುದಿನಗಳವರೆಗೂ ಇದ್ದು ಕಡೆಯಲ್ಲಿ ಅದರಿಂದ ನಿನ್ನ ಕರುಳುಗಳು ಹೊರಗೆ ಬೀಳುವವು ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಿನಗಾದರೋ ಕರುಳು ಬೇನೆಯ ಕಠಿಣ ರೋಗ ಬರುವುದು. ಅದು ಬಹು ದಿನಗಳವರೆಗೂ ಇದ್ದು ವಾಸಿಯಾಗದೇ ನಿನ್ನ ಕರುಳುಗಳು ಹೊರಗೆ ಬೀಳುವುವು” ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನಿನಗಾದರೋ ಕರುಳುಬೇನೆಯ ಕಠಿಣರೋಗ ಬರುವುದು. ಅದು ಬಹುದಿನಗಳವರೆಗೂ ವಾಸಿ ಆಗದು; ಕಡೆಯಲ್ಲಿ ನಿನ್ನ ಕರುಳುಗಳು ಹೊರಗೆ ಬೀಳುವುವು,” ಎಂದು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಿನ್ನ ಹೊಟ್ಟೆಯೊಳಗೆ ಭಯಂಕರವಾದ ಕಾಯಿಲೆ ಬರುವದು. ಅದು ದಿನದಿಂದ ದಿನಕ್ಕೆ ಹೆಚ್ಚುವುದು. ಆ ರೋಗದ ನಿಮಿತ್ತ ನಿನ್ನ ಕರುಳು ನಿನ್ನ ಹೊಟ್ಟೆಯಿಂದ ಹೊರಬೀಳುವದು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಇದಲ್ಲದೆ ದಿನದಿನಕ್ಕೆ ರೋಗ ಅನುಭವಿಸುವುದರಿಂದ ನಿನ್ನ ಕರುಳುಗಳು ಹೊರಕ್ಕೆ ಬರುವವರೆಗೆ ಕರುಳುಬೇನೆಯ ರೋಗದಿಂದ ನಿನಗೆ ಕಠಿಣರೋಗ ಬರುವುದು,’ ” ಎಂದು ಬರೆದಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 21:15
11 ತಿಳಿವುಗಳ ಹೋಲಿಕೆ  

(ಈ ಮನುಷ್ಯನು ತನ್ನ ದ್ರೋಹದಿಂದ ಸಂಪಾದಿಸಿದ ಹಣಕ್ಕೆ ಒಂದು ಹೊಲವನ್ನು ಕೊಂಡುಕೊಂಡನು; ಮತ್ತು ತಲೆಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು.


ಶಪಿಸುವದೇ ಅವನಿಗೆ ವಸ್ತ್ರವಾಗಿತ್ತು. ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಿತು.


ಮನಸ್ಸಿನಲ್ಲಿ ಯಾವಾಗಲೂ ಪ್ರಾಣಭಯವಿರುವದರಿಂದಲೂ ಕಣ್ಣಿನಿಂದ ಭಯಂಕರವಾದ ಸಂಗತಿಗಳನ್ನು ನೋಡುವದರಿಂದಲೂ ನೀವು ಹೊತ್ತಾರೆಯಲ್ಲಿ - ಅಯ್ಯೋ, ಅಯ್ಯೋ! ಸಾಯಂಕಾಲ ಯಾವಾಗ ಬರುವದೋ ಎಂದೂ ಸಾಯಂಕಾಲದಲ್ಲಿ - ಅಯ್ಯೋ, ಅಯ್ಯೋ! ಮರುದಿನ ಯಾವಾಗ ಬರುವದೋ ಎಂದೂ ಹೇಳುವಿರಿ.


ಇಷ್ಟು ಮಾತ್ರವಲ್ಲದೆ ಈ ಧರ್ಮಶಾಸ್ತ್ರಗ್ರಂಥದಲ್ಲಿ ಬರೆಯದೆ ಇರುವ ವಿಧವಿಧವಾದ ರೋಗಗಳನ್ನೂ ವ್ಯಾಧಿಗಳನ್ನೂ ನಿಮ್ಮ ಮೇಲೆ ಬರಮಾಡಿ ನಿಮ್ಮನ್ನು ನಾಶಮಾಡುವನು.


ಆತನು ನಿಮಗೂ ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುವಿಶೇಷವಾದ ಉಪದ್ರವಗಳನ್ನು ಬರಮಾಡುವನು. ಬಹುಕಾಲದವರೆಗೂ ವಾಸಿಯಾಗದ ಘೋರ ವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವನು.


ಯೆಹೋವನು ನಿಮ್ಮನ್ನು ಒಯ್ಯಿಸಿದ ಜನಾಂಗಗಳಲ್ಲಿ ನೀವು ಆಶ್ಚರ್ಯಕ್ಕೂ ಗಾದೆಗೂ ಪರಿಹಾಸ್ಯಕ್ಕೂ ಗುರಿಯಾಗುವಿರಿ.


ಐಗುಪ್ತ್ಯರ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಯೆಹೋವನು ನಿಮ್ಮನ್ನು ಬಾಧಿಸುವನು.


ಅವಳು ದೋಷಿಯಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಕುಡಿದನಂತರ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷವಾಗುವದರಿಂದ ಅವಳ ಹೊಟ್ಟೆ ಉಬ್ಬುವದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು; ಆ ಸ್ತ್ರೀಯು ತನ್ನ ಜನರೊಳಗೆ ಶಾಪಗ್ರಸ್ತಳಾಗುವಳು.


ಆ ಘನವನ್ನು ಅವನು ದೇವರಿಗೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಬಡಿದನು; ಅವನು ಹುಳಬಿದ್ದು ಸತ್ತನು.


ಆದದರಿಂದ ಯೆಹೋವನು ನಿನ್ನ ಪ್ರಜೆಯನ್ನೂ ಹೆಂಡರುಮಕ್ಕಳನ್ನೂ ಸರ್ವಸ್ವವನ್ನೂ ಮಹಾಪತ್ತಿಗೆ ಗುರಿಮಾಡುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು