Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 20:2 - ಕನ್ನಡ ಸತ್ಯವೇದವು J.V. (BSI)

2 ದೂತರು ಬಂದು ಯೆಹೋಷಾಫಾಟನಿಗೆ - ಮಹಾಸಮೂಹವು ನಿನಗೆ ವಿರೋಧವಾಗಿ ಲವಣಸಮುದ್ರದ ಆಚೆಯಲ್ಲಿರುವ ಅರಾಮ್ ಪ್ರಾಂತದ ಕಡೆಯಿಂದ ಬಂದು ಈಗ ಏಂಗೆದಿಯೆನಿಸಿಕೊಳ್ಳುವ ಹಚೆಚೋನ್‍ತಾಮಾರಿನಲ್ಲಿರುತ್ತಾರೆಂದು ತಿಳಿಸಿದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ದೂತರು ಬಂದು ಯೆಹೋಷಾಫಾಟನಿಗೆ, “ಮಹಾಸಮೂಹವು ನಿನಗೆ ವಿರುದ್ಧವಾಗಿ ಲವಣ ಸಮುದ್ರದ ಆಚೆಯಲ್ಲಿರುವ ಅರಾಮ್ ಪ್ರಾಂತ್ಯದ ಕಡೆಯಿಂದ ಬಂದು ಈಗ ‘ಏಂಗೆದಿ’ ಎನಿಸಿಕೊಳ್ಳುವ ಹಚಚೋನ್ ತಾಮಾರಿನಲ್ಲಿ ಬಂದು ತಂಗಿದ್ದಾರೆ” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ದೂತರು ಬಂದು ಯೆಹೋಷಾಫಾಟನಿಗೆ, “ಮಹಾಸೈನ್ಯ ಸಮೂಹವೊಂದು ನಿನಗೆ ವಿರೋಧವಾಗಿ ಲವಣಸಮುದ್ರದ ಆಚೆಯಲ್ಲಿರುವ ಆರಾಮ್ ಪ್ರಾಂತ್ಯದ ಕಡೆಯಿಂದ ಬಂದು ಈಗ ಏಂಗೆದಿಯೆನಿಸಿಕೊಳ್ಳುವ ಹಚೆಚೋನ್‍ತಾಮಾರಿನಲ್ಲಿ ಇರುತ್ತಾರೆ,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಕೆಲವು ಜನರು ಯೆಹೋಷಾಫಾಟನ ಬಳಿಗೆ ಬಂದು, “ಎದೋಮ್ಯರ ದೊಡ್ಡ ಸೈನ್ಯವು ಲವಣಸಮುದ್ರದ ಆಚೆಕಡೆಯಿಂದ ನಿನಗೆ ವಿರುದ್ಧವಾಗಿ ಬರುತ್ತಿದೆ. ಈಗಾಗಲೇ ಅವರು ಹಚೆಚೋನ್ ತಾಮಾರಿನಲ್ಲಿದ್ದಾರೆ” (ಇದನ್ನು ಏಂಗೆದಿ ಎಂತಲೂ ಕರೆಯುತ್ತಾರೆ.) ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಕೆಲವರು ಬಂದು ಯೆಹೋಷಾಫಾಟನಿಗೆ, “ಅರಾಮಿನ ಈಚೆಯಲ್ಲಿರುವ ಲವಣ ಸಮುದ್ರದ ಆಚೆಯಿಂದ ನಿನಗೆ ವಿರೋಧವಾಗಿ ಮಹಾ ಸಮೂಹವೊಂದು ಬರುತ್ತದೆ. ಅವರು ಏನ್ಗೆದಿ ಎಂಬ ಹಜಜೋನ್ ತಾಮಾರಿನಲ್ಲಿ ಇದ್ದಾರೆ,” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 20:2
10 ತಿಳಿವುಗಳ ಹೋಲಿಕೆ  

ಆಮೇಲೆ ಅವರು ಹಿಂದಿರುಗಿಕೊಂಡು ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಅಮಾಲೇಕ್ಯರ ಸಮಸ್ತದೇಶವನ್ನೂ ಹಚಚೋನ್‍ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಜಯಿಸಿದರು.


ದಾವೀದನು ಅಲ್ಲಿಂದ ಗಟ್ಟಾಹತ್ತಿ ಹೋಗಿ ಏಂಗೆದಿಯ ಗಿರಿಗಳಲ್ಲಿ ವಾಸಿಸಿದನು.


ನನ್ನ ನಲ್ಲನು ನನ್ನ ಭಾಗಕ್ಕೆ ಏನ್ಗೆದಿಯ ತೋಟಗಳ ಗೋರಂಟೆಯ ಪೂಗೊಂಚಲು.


ನಿಬ್ಷಾನ್, ಉಪ್ಪಿನಪಟ್ಟಣ, ಏಂಗೆದೀ ಎಂಬ ಆರು ಪಟ್ಟಣಗಳೂ ಅವುಗಳ ಗ್ರಾಮಗಳೂ;


ಮೇಲಣಿಂದ ಬರುವ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತುಕೊಂಡಿತು. ಕೆಳಗಣ ನೀರು ಅರಾಬಾ ತಗ್ಗಿನಲ್ಲಿರುವ ಲವಣ ಸಮುದ್ರಕ್ಕೆ ಹರಿದುಹೋಯಿತು. ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು.


ಅಲ್ಲಿಂದ ಅದು ಯೊರ್ದನ್ ಹೊಳೆಗೆ ಇಳಿದು [ಅದನ್ನು ಅನುಸರಿಸಿ] ಲವಣ ಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು ಅಂದನು.


ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್‍ಗೆದಿಯಿಂದ ಏನ್ಎಗ್ಲಯಿವಿುನವರೆಗೆ ದಡವೆಲ್ಲಾ ಬಲೆಹಾಸುವ ಸ್ಥಳವಾಗುವದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿರಾಶಿಯಾಗಿ ಸಿಕ್ಕುವವು.


ಗಾದಿನ ತೆಂಕಣ ಸರಹದ್ದಿನಲ್ಲಿ ದೇಶದ ಮೇರೆಯು ತಾಮಾರಿನಿಂದ ಹೊರಟು ಮೇರೀಬತ್‍ಕಾದೇಶಿನ ಹಳ್ಳವನ್ನು ದಾಟಿ [ಐಗುಪ್ತದ ಮುಂದಣ] ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟುವದು.


ತೆಂಕಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ [ಐಗುಪ್ತದ ಮುಂದಿರುವ] ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟಬೇಕು. ಇದು ತೆಂಕಣ ಮೇರೆಯು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು