Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 2:4 - ಕನ್ನಡ ಸತ್ಯವೇದವು J.V. (BSI)

4 ಈಗ ನಾನು ನನ್ನ ದೇವರಾದ ಯೆಹೋವನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಿ ಇಸ್ರಾಯೇಲ್ಯರಿಗಿರುವ ಶಾಶ್ವತನಿಯಮದ ಪ್ರಕಾರ ಆತನ ಸನ್ನಿಧಿಯಲ್ಲಿ ಸುಗಂಧದ್ರವ್ಯಗಳಿಂದ ಧೂಪಹಾಕುವದಕ್ಕೂ ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡುವದಕ್ಕೂ ಪ್ರಾತಃಕಾಲ, ಸಾಯಂಕಾಲ, ಸಬ್ಬತ್‍ದಿನ, ಅಮಾವಾಸ್ಯೆ, ನಮ್ಮ ದೇವರಾದ ಯೆಹೋವನ ಜಾತ್ರೆ ಇವುಗಳಲ್ಲಿ ಸರ್ವಾಂಗ ಹೋಮವನ್ನರ್ಪಿಸುವದಕ್ಕೂ ಆ ಆಲಯವನ್ನು ಆತನಿಗೋಸ್ಕರ ಪ್ರತಿಷ್ಠಿಸಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಈಗ ನಾನು ನನ್ನ ದೇವರಾದ ಯೆಹೋವನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಿ, ಇಸ್ರಾಯೇಲರಿಗಿರುವ ಶಾಶ್ವತ ನಿಯಮದ ಪ್ರಕಾರ, ಆತನ ಸನ್ನಿಧಿಯಲ್ಲಿ ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೂ, ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡುವುದಕ್ಕೂ, ಉದಯಕಾಲದಲ್ಲಿಯೂ, ಸಾಯಂಕಾಲದಲ್ಲಿಯೂ, ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಯ ದಿನಗಳಲ್ಲಿಯೂ, ನಮ್ಮ ದೇವರಾದ ಯೆಹೋವನ ಹಬ್ಬಗಳಲ್ಲಿಯೂ ಇವುಗಳಲ್ಲಿ ಸರ್ವಾಂಗಹೋಮವನ್ನರ್ಪಿಸುವುದಕ್ಕೂ ಈ ಆಲಯವನ್ನು ಆತನಿಗೋಸ್ಕರ ಪ್ರತಿಷ್ಠಿಸಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಈಗ ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಇಸ್ರಯೇಲರಿಗಿರುವ ಶಾಶ್ವತ ನಿಯಮದ ಪ್ರಕಾರ ಅವರ ಸನ್ನಿಧಿಯಲ್ಲಿ ಸುಗಂಧ ದ್ರವ್ಯಗಳಿಂದ ಧೂಪಾರತಿ ಎತ್ತಬೇಕಾಗಿದೆ. ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡಬೇಕಾಗಿದೆ; ಬೆಳಿಗ್ಗೆ, ಸಂಜೆ, ಸಬ್ಬತ್‍ದಿನ, ಅಮಾವಾಸ್ಯೆ ಹಾಗೂ ನಮ್ಮ ದೇವರಾದ ಸರ್ವೇಶ್ವರನ ಜಾತ್ರೆಯ ವೇಳೆಗಳಲ್ಲಿ ದಹನಬಲಿಗಳನ್ನು ಅರ್ಪಿಸಬೇಕಾಗಿದೆ. ಇದಕ್ಕಾಗಿ ಒಂದು ಆಲಯವನ್ನು ಅವರಿಗೆ ಪ್ರತಿಷ್ಠಿಸಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನನ್ನ ದೇವರಾದ ಯೆಹೋವನ ನಾಮದ ಘನತೆಗಾಗಿ ನಾನು ಒಂದು ದೇವಾಲಯವನ್ನು ಕಟ್ಟಲಿರುವೆನು. ಆತನ ಸನ್ನಿಧಿಯಲ್ಲಿ ನಿತ್ಯವೂ ಧೂಪವನ್ನು ಹಾಕುವೆವು; ವಿಶೇಷ ಮೇಜಿನ ಮೇಲೆ ಪವಿತ್ರವಾದ ರೊಟ್ಟಿಗಳನ್ನಿಡುವೆವು. ಪ್ರತಿ ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ, ಸಬ್ಬತ್ ದಿನಗಳಲ್ಲಿ ಮತ್ತು ಅಮಾವಾಸ್ಯೆ ದಿನಗಳಲ್ಲಿ ಯೆಹೋವನು ಆಜ್ಞಾಪಿಸಿದ ಹಬ್ಬಗಳಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುವೆವು. ಇಸ್ರೇಲಿನ ಜನರು ನಿತ್ಯಕಾಲಕ್ಕೂ ಇವುಗಳನ್ನು ಅನುಸರಿಸಬೇಕೆಂದು ದೇವರು ನೇಮಿಸಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನನ್ನ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವುದಕ್ಕೂ, ದೇವಸನ್ನಿಧಿಗೆ ಪರಿಮಳ ಧೂಪವನ್ನು ಅರ್ಪಿಸುವ ನಿತ್ಯ ಸಮ್ಮುಖದ ರೊಟ್ಟಿಗೋಸ್ಕರವೂ, ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಇಸ್ರಾಯೇಲರಿಗೆ ನಿರಂತರವಾಗಿರಲು ನೇಮಿಸಿದ ನಮ್ಮ ದೇವರಾದ ಯೆಹೋವ ದೇವರ ಹಬ್ಬಗಳಲ್ಲಿಯೂ, ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋಸ್ಕರವೂ ನಮ್ಮ ದೇವರಾದ ಯೆಹೋವ ದೇವರ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 2:4
16 ತಿಳಿವುಗಳ ಹೋಲಿಕೆ  

ಆರೋನನು ಪ್ರತಿನಿತ್ಯವೂ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ


ನೈವೇದ್ಯವಾದ ರೊಟ್ಟಿಗಳು ಯಾವಾಗಲೂ ಆ ಮೇಜಿನ ಮೇಲೆ ನನ್ನ ಸಮ್ಮುಖದಲ್ಲಿಯೇ ಇಟ್ಟಿರಬೇಕು.


ಸೊಲೊಮೋನನು ಯೆಹೋವನ ಹೆಸರಿಗೋಸ್ಕರ ಆಲಯವನ್ನೂ ತನಗೋಸ್ಕರ ಅರಮನೆಯನ್ನೂ ಕಟ್ಟಿಸಬೇಕೆಂದು ಮನಸ್ಸುಳ್ಳವನಾಗಿ


ಸೊಲೊಮೋನನು ಯೆಹೋವನಿಗೋಸ್ಕರ ಮಾಡಿದ ಸಮಾಧಾನಯಜ್ಞಕ್ಕಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ; ಕುರಿಗಳು ಲಕ್ಷದ ಇಪ್ಪತ್ತು ಸಾವಿರ. ಈ ಪ್ರಕಾರ ಅರಸನೂ ಎಲ್ಲಾ ಇಸ್ರಾಯೇಲ್ಯರೂ ಯೆಹೋವನ ಆಲಯವನ್ನು ಪ್ರತಿಷ್ಠಿಸಿದರು.


ಆತನು ಅವನಿಗೆ - ನೀನು ನನ್ನ ಹೆಸರಿಗೋಸ್ಕರ ಒಂದು ಮನೆಯನ್ನು ಕಟ್ಟುವದಕ್ಕೆ ಮನಸ್ಸುಮಾಡಿದ್ದು ಒಳ್ಳೇದೇ ಸರಿ.


ಯೆಹೋವನು ನನ್ನ ತಂದೆಯಾದ ದಾವೀದನಿಗೆ - ನಾನು ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗನು ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ ಎಂದು ಹೇಳಿದ್ದರಿಂದ ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ.


ಆ ಯಾಜಕರು ಪ್ರತಿದಿನ ಪ್ರಾತಃಸ್ಸಾಯಂಕಾಲಗಳಲ್ಲಿ ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು ಸಮರ್ಪಿಸುತ್ತಾ ಸುಗಂಧ ದ್ರವ್ಯಧೂಪವನ್ನು ಹಾಕುತ್ತಾ ಚೊಕ್ಕ [ಬಂಗಾರದ] ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಯೆಹೋವನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಆತನನ್ನು ಬಿಟ್ಟವರು.


ಆ ಹಣವು ದೇವರ ಸನ್ನಿಧಿಯಲ್ಲಿಡತಕ್ಕ ರೊಟ್ಟಿ, ನಿತ್ಯಧಾನ್ಯ ನೈವೇದ್ಯ ಇವುಗಳಿಗೋಸ್ಕರವೂ ನಿತ್ಯಸರ್ವಾಂಗಹೋಮ ಮತ್ತು ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಮಾಡತಕ್ಕ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲ್ಯರ ದೋಷಪರಿಹಾರಾರ್ಥವಾದ ಯಜ್ಞ ಇವುಗಳಿಗೋಸ್ಕರವೂ ನಮ್ಮ ದೇವಾಲಯ ಸಂಬಂಧವಾದ ಬೇರೆ ಎಲ್ಲಾ ಕೆಲಸಕ್ಕೋಸ್ಕರವೂ ವೆಚ್ಚವಾಗಬೇಕು;


ದಾವೀದನು [ತನ್ನ ಮನಸ್ಸಿನಲ್ಲಿ] - ನನ್ನ ಮಗನಾದ ಸೊಲೊಮೋನನು ಎಳೇ ಪ್ರಾಯದವನಾಗಿದ್ದಾನೆ; ಯೆಹೋವನಿಗೋಸ್ಕರ ಕಟ್ಟಿಸತಕ್ಕ ಆಲಯವು ಎಲ್ಲಾ ದೇಶಗಳಲ್ಲಿ ಕೀರ್ತಿ ಘನಗಳನ್ನು ಹೊಂದಬೇಕಾದರೆ ಅದು ಅಧಿಕ ಶೋಭಾಯಮಾನವಾದದ್ದಾಗಿರಬೇಕು; ಆದದರಿಂದ ಅದಕ್ಕೆ ಬೇಕಾಗುವದನ್ನೆಲ್ಲಾ ಸಿದ್ಧಪಡಿಸುವೆನು ಅಂದುಕೊಂಡು ಸಾಯುವದಕ್ಕೆ ಮೊದಲೇ ಬಹಳವಾಗಿ ಸೌರಣೆಮಾಡಿದನು.


ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.


ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವರುಗಳಲ್ಲಿ ಆತನೇ ಭಯಂಕರನು.


ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು ಎಂಬದಾಗಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು