Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 2:13 - ಕನ್ನಡ ಸತ್ಯವೇದವು J.V. (BSI)

13 ನಾನು ಈಗ ಜ್ಞಾನವಿವೇಕಗಳುಳ್ಳ ಪುರುಷನನ್ನು ಕಳುಹಿಸುತ್ತೇನೆ; ಅವನ ಹೆಸರು ಹೂರಾಮಾಬೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಈಗ ನಾನು ಜ್ಞಾನಿಯು, ಕಲಾ ಪ್ರವೀಣನೂ ಆದ ಹೂರಾಮಾಬೀ ಎಂಬುವವನನ್ನು ಕಳುಹಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಾನು ಈಗ ಜ್ಞಾನಿಯೂ ಕಲಾಪ್ರವೀಣನೂ ಆದ ಒಬ್ಬ ವ್ಯಕ್ತಿಯನ್ನು ಕಳುಹಿಸುತ್ತೇನೆ; ಇವನ ಹೆಸರು ಹೂರಾಮಾಬೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನಾನು ಹೂರಾಮಾಬೀ ಎಂಬ ಹೆಸರಿನ ಅನುಭವಶಾಲಿಯಾದ ಕುಶಲಕರ್ಮಿಯನ್ನು ನಿನಗೋಸ್ಕರ ಕಳುಹಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 “ಈಗ ನಾನು ಜ್ಞಾನಿಯೂ, ಕಲಾ ಪ್ರವೀಣನೂ ಆದ ಹೂರಾಮ ಅಬೀ ಎಂಬ ಒಬ್ಬನನ್ನು ಕಳುಹಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 2:13
5 ತಿಳಿವುಗಳ ಹೋಲಿಕೆ  

ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕೋಸ್ಕರ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ತಾಮ್ರದಿಂದ ಮಾಡಿ ತೀರಿಸಿದನು.


ಅರಸನಾದ ಸೊಲೊಮೋನನು ತೂರ್ ಪಟ್ಟಣದಿಂದ ಹೀರಾಮ್ ಎಂಬವನನ್ನು ಕರಿಸಿದನು.


ಹೀಗಿರಲು ಬಂಗಾರ ಬೆಳ್ಳಿ ತಾಮ್ರ ಕಬ್ಬಿಣ ಇವುಗಳ ಕೆಲಸಮಾಡುವದರಲ್ಲಿಯೂ ಧೂಮ್ರ ರಕ್ತ ನೀಲವರ್ಣಗಳ ಬಟ್ಟೆಯನ್ನು ನೇಯುವದರಲ್ಲಿಯೂ ಚಿತ್ರ ಕೆತ್ತುವದರಲ್ಲಿಯೂ ಜಾಣನಾದ ಮನುಷ್ಯನನ್ನು ನನ್ನ ಬಳಿಗೆ ಕಳುಹಿಸು; ನನ್ನ ತಂದೆಯು ಗೊತ್ತು ಮಾಡಿದಂಥ ಮತ್ತು ನನ್ನೊಡನೆ ಯೆಹೂದದಲ್ಲಿಯೂ ಯೆರೂಸಲೇವಿುನಲ್ಲಿಯೂ ಇರುವಂಥ ಜಾಣರೊಂದಿಗೆ ಅವನು ಕೆಲಸಮಾಡಲಿ.


ಭೂಮ್ಯಾಕಾಶಗಳನ್ನುಂಟುಮಾಡಿದ ಇಸ್ರಾಯೇಲ್‍ದೇವರಾದ ಯೆಹೋವನು ತನಗೋಸ್ಕರ ದೇವಾಲಯವನ್ನೂ ರಾಜನಿಗೋಸ್ಕರ ಅರಮನೆಯನ್ನೂ ಕಟ್ಟಿಸತಕ್ಕ ಬುದ್ಧಿ ಜ್ಞಾನವಿವೇಕಗಳುಳ್ಳ ಮಗನನ್ನು ಅರಸನಾದ ದಾವೀದನಿಗೆ ಕೊಟ್ಟದರಿಂದ ಆತನಿಗೆ ಸ್ತೋತ್ರವಾಗಲಿ.


ಅವನು ದಾನ್‍ಕುಲದ ಸ್ತ್ರೀಯ ಮಗನು; ಅವನ ತಂದೆ ತೂರಿನವನು. ಅವನು ಬಂಗಾರ ಬೆಳ್ಳಿ ತಾಮ್ರ ಕಬ್ಬಿಣ ಕಲ್ಲು ಮರ ಇವುಗಳ ಕೆಲಸವನ್ನು ಮಾಡುವದಕ್ಕೂ ಧೂಮ್ರ ನೀಲರಕ್ತವರ್ಣಗಳುಳ್ಳ ನಾರುಬಟ್ಟೆಗಳನ್ನು ನೇಯುವದಕ್ಕೂ ಎಲ್ಲಾ ತರದ ಕೆತ್ತನೆಯ ಕೆಲಸವನ್ನು ಮಾಡುವದಕ್ಕೂ ತನಗೆ ಒಪ್ಪಿಸಲ್ಪಟ್ಟ ಎಲ್ಲಾ ಚಮತ್ಕಾರವಾದ ಕೆಲಸಗಳನ್ನು ನಡಿಸುವದಕ್ಕೂ ಸಮರ್ಥನು. ನೀನೂ ನಿನ್ನ ತಂದೆಯಾದ ದಾವೀದನೂ ಗೊತ್ತುಮಾಡಿದ ಜಾಣರೊಡನೆ ಅವನು ಕೆಲಸಮಾಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು