11 ತೂರಿನ ಅರಸನಾದ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ತನ್ನ ಒಪ್ಪಿಗೆ ಸೂಚಿಸಿದನು. “ಯೆಹೋವನು ತನ್ನ ಪ್ರಜೆಗಳನ್ನು ಪ್ರೀತಿಸುವವನಾಗಿರುವುದರಿಂದ ನಿನ್ನನ್ನು ಅವರ ಅರಸನನ್ನಾಗಿ ನೇಮಿಸಿದ್ದಾನೆ.”
11 ಅದಕ್ಕೆ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ಹೀಗೆ ಉತ್ತರಿಸಿದನು: “ಸೊಲೊಮೋನನೇ, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಆದ್ದರಿಂದಲೇ ನಿನ್ನನ್ನು ಅವರ ಅರಸನನ್ನಾಗಿ ಆರಿಸಿಕೊಂಡಿರುತ್ತಾನೆ.
11 ಆಗ ಟೈರಿನ ಅರಸನಾದ ಹೀರಾಮನು ಉತ್ತರವನ್ನು ಬರೆದು ಸೊಲೊಮೋನನಿಗೆ ಕಳುಹಿಸಿದನು: “ಯೆಹೋವ ದೇವರು ತಮ್ಮ ಜನರನ್ನು ಪ್ರೀತಿಮಾಡಿದ್ದರಿಂದ, ನಿನ್ನನ್ನು ಜನರ ಮೇಲೆ ಅರಸನನ್ನಾಗಿ ಮಾಡಿದ್ದಾರೆ,” ಎಂದು ಹೇಳಿದನು.
ನಿನ್ನನ್ನು ಮೆಚ್ಚಿ ತನ್ನ ಸನ್ನಿಧಿಯಲ್ಲಿ ಅರಸನಾಗುವದಕ್ಕೆ ನಿನ್ನನ್ನು ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನಿನ್ನ ದೇವರು ಇಸ್ರಾಯೇಲ್ಯರನ್ನು ಪ್ರೀತಿಸಿ ಅವರನ್ನು ನಿರಂತರವಾಗಿ ಸ್ಥಿರಗೊಳಿಸಬೇಕೆಂದಿರುವದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇವಿುಸಿದ್ದಾನೆ ಎಂದು ಹೇಳಿದಳು.
ನಿನ್ನನ್ನು ಮೆಚ್ಚಿ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ಆತನು ಇಸ್ರಾಯೇಲ್ಯರನ್ನು ಸದಾ ಪ್ರೀತಿಸುವವನಾಗಿರುವದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇವಿುಸಿದ್ದಾನೆ ಎಂದು ಹೇಳಿದಳು.